ವರ್ಣ ತಾರತಮ್ಯದ ಹಲವಾರು ಕಿರುಕುಳವನ್ನು ಒಬ್ಬ ಕರಿಯ ಹುಡುಗ ನೋಡಿದ್ದನು. ಅವನ ಕುಟುಂಬದವರು,ನೆಂಟರು ಹಾಗೂ ಸ್ನೇಹಿತರು ತಮ್ಮ ಬಣ್ಣದಿಂದಾಗಿ ಕಿರುಕುಳವನ್ನು ಹಾಗೂ ಹಿಂಸೆಯನ್ನು ಎದುರಿಸಿದ್ದರು. ಒಮ್ಮೆ ಅವನು ಜಾತ್ರೆಗೆ ಹೋದ. ಅಲ್ಲಿ ಬಲೂನ್ ಮಾರುವ ವ್ಯಕ್ತಿಯು ವಿವಿಧ ಬಣ್ಣಗಳ ಬಲೂನುಗಳನ್ನು ಹೊಂದಿದ್ದನು.
ಹುಡುಗ ಅಲ್ಲಿ ಹೋಗಿ ನಿಂತ. ಬಲೂನು ವ್ಯಕ್ತಿಯು ಕೆಂಪು ಬಲೂನನ್ನು ಊದಿ ಆಕಾಶಕ್ಕೆ ಬಿಟ್ಟನು. ಇದು ಹಲವಾರು ಮಕ್ಕಳನ್ನು ಆಕರ್ಷಿಸಿತು. ಅವರು ಅದನ್ನು ಖರೀದಿಸಲು ಓಡಿ ಬಂದರು. ನಂತರ ಅವನು ನೀಲಿ ಬಲೂನನ್ನು ಹಾರಿಸಿದನು. ಒಂದಾದರೊಂದಂತೆ ಅವನು ವಿವಿಧ ಬಣ್ಣಗಳ ಬಲೂನುಗಳನ್ನು ಊದಿ ಆಕಾಶದಲ್ಲಿ ಹಾರಿಸಿದನು. ಅವೆಲ್ಲಾ ಆಕಾಶದಲ್ಲಿ ಮಾಯವಾದವು. ಇದನ್ನೆಲ್ಲಾ ಬಹಳ ಕಾಲ ನೋಡುತ್ತಿದ್ದ ಕರಿಯ ಹುಡುಗ ಬಲೂನು ಮನುಷ್ಯನೊಂದಿಗೆ “ಅಂಕಲ್, ಕಪ್ಪು ಬಲೂನು ಕೂಡ ಇತರೆ ಬಲೂನುಗಳಂತೆ ಹಾರುತ್ತವೆಯೇ?”
ಪ್ರಶ್ನೆಗಳು
1. ಬಲೂನ್ ಮನುಷ್ಯ ಏನು ಹೇಳಿದ?
2. ಈ ಕಥೆಯ ನೀತಿಯೇನು?ವರ್ಣೀಯ ಪೂರ್ವಾಗ್ರಹವನ್ನು ಶ್ರೇಷ್ಠತೆಯಿಂದ ಗೆಲ್ಲಿ
ಉತ್ತರಗಳು
1. “ಮಗೂ, ಖಂಡಿತ ಹೌದು. ಎತ್ತರಕ್ಕೆ ಬಲೂನು ಹಾರುವುದು ಅದರೊಳಗಿರುವ ವಸ್ತುವಿನಿಂದಲೇ ಹೊರತು ಅದರ ಬಣ್ಣದಿಂದಲ್ಲ.”
2. ಮೇಲ್ಮಟ್ಟದ ಸಾಮಾಜಿಕ ಅಂತರಕ್ರಿಯೆಯಲ್ಲಿ ಬಣ್ಣದಲ್ಲಿ ವ್ಯತ್ಯಾಸವಿರಬಹುದು. ವರ್ಣಭೇದವು ಅತ್ಯಂತ ಹೀನ ಸಾಮಾಜಿಕ ಪಿಡುಗು. ಇದು ಮಾನವೀಯತೆಯನ್ನು ನಿರಾಕರಿಸುತ್ತದೆ. ಹುಟ್ಟು ಸಾವಿನಲ್ಲಿ ಮನುಷ್ಯ ಸಮಾನನು. ಹೀಗಾಗಿ ಯಾವುದೇ ಬಣ್ಣ, ಜಾತಿ ಅಥವಾ ಜನಾಂಗದವರಿರಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು. ಅತ್ಯುತ್ತಮತೆಯು ಮೇಲುಗೈ ಸಾಧಿಸಿದಾಗ ವರ್ಣಭೇದಕ್ಕೆ ಪ್ರವೇಶವಿರುವುದಿಲ್ಲ.