ರಾಮನಗರ: ಕೊಟ್ಟಿಗೆ ನಿರ್ಮಾಣ ಮಾಡಿದ ಬಿಲ್ ಕೊಟ್ಟಿಲ್ಲವೆಂದು ರೈತನೋರ್ವ ಗ್ರಾಮ ಪಂಚಾಯತಿ ಕಚೇರಿಯಲ್ಲಿ ಮೇಕೆಗಳನ್ನು ಕಟ್ಟಿ ವಿನೂತನವಾಗಿ ಪ್ರತಿಭಟಿಸಿ ಎಲ್ಲರ ಗಮನ ಸೆಳೆದಿದ್ದಾರೆ.
ಚನ್ನಪಟ್ಟಣ ತಾಲೂಕಿನ ಮೈಲನಾಯಕನಹಳ್ಳಿ ಗ್ರಾಮದಲ್ಲಿ ರೈತನೋರ್ವ ಗ್ರಾಮ ಪಂಚಾಯಿತಿ ಕಚೇರಿಯೊಳಗೆ ಕುರಿ-ಮೇಕೆಗಳನ್ನು ನುಗ್ಗಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೊಟ್ಟಿಗೆ ನಿರ್ಮಾಣ ಮಾಡಿ ಒಂದು ವರ್ಷವಾದರೂ ಗ್ರಾಮ ಪಂಚಾಯಿತಿ ಬಿಲ್ ನೀಡಿಲ್ಲ. ಪ್ರತಿನಿತ್ಯ ಗ್ರಾಮ ಪಂಚಾಯತಿ ಕಚೇರಿಗೆ ಅಲೆದು ಅಲೆದು ರೋಸಿ ಹೋಗಿದ್ದ ರೈತ ರವಿ ಕೊನೆಗೆ ಕುರಿ, ಮೇಕೆ ನುಗ್ಗಿಸಿ ವಿನೂತನ ಪ್ರತಿಭಟನೆ ಮಾಡಿದ್ದಾರೆ.
ಸುಮಾರು 50 ಸಾವಿರ ಬಿಲ್ ನೀಡಬೇಕಿರುವ ಗ್ರಾಮ ಪಂಚಾಯತಿ, ಕಳೆದ ಒಂದು ವರ್ಷದಿಂದ ನೀಡದೇ ಸಬೂಬು ಹೇಳಿಕೊಂಡು ಬಂದಿದೆ.
ಈಗ ಕುರಿ-ಮೇಕೆಗಳನ್ನು ನುಗ್ಗಿಸಿದ್ದೇವೆ. ಮುಂದೆ ಇದೇ ರೀತಿಯಾದರೆ ಎಮ್ಮೆ-ಕೋಣ, ಕೋಳಿ ಕಚೇರಿಯೊಳಗೆ ನುಗ್ಗಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.