ಮನೆ ಉದ್ಯೋಗ ದೆಹಲಿ ಏಮ್ಸ್’ನಿಂದ ಗ್ರೂಪ್ ಎ, ಬಿ, ಸಿ ಹುದ್ದೆಗಳ ನೇಮಕ: ಆನ್ ಲೈನ್ ಅರ್ಜಿ ಆಹ್ವಾನ

ದೆಹಲಿ ಏಮ್ಸ್’ನಿಂದ ಗ್ರೂಪ್ ಎ, ಬಿ, ಸಿ ಹುದ್ದೆಗಳ ನೇಮಕ: ಆನ್ ಲೈನ್ ಅರ್ಜಿ ಆಹ್ವಾನ

0

ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಮ್ಸ್), ದೆಹಲಿ’ಯು ವಿವಿಧ ಗ್ರೂಪ್ ಹುದ್ದೆಗಳನ್ನು ಭರ್ತಿ ಮಾಡಲು ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ಕೆಳಗಿನ ಹುದ್ದೆಗಳಲ್ಲಿ ಆಸಕ್ತಿ ಇರುವ ಹಾಗೂ ಹುದ್ದೆಗಳಿಗೆ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಹಾಕಿರಿ. ಮೇ 13 ರವರೆಗೆ ಆನ್ ಲೈನ್ ಅರ್ಜಿಗೆ ಅವಕಾಶ ಇರುತ್ತದೆ.

Join Our Whatsapp Group

ನೇಮಕಾತಿ ಪ್ರಾಧಿಕಾರ : ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಎಮ್ಸ್), ದೆಹಲಿ

ಹುದ್ದೆಗಳ ಹೆಸರು : ಗ್ರೂಪ್ ಎ, ಗ್ರೂಪ್ ಬಿ, ಗ್ರೂಪ್ ಸಿ.

ಹುದ್ದೆಗಳ ವಿವರ

ಗ್ರೂಪ್ ಎ : 20

ಗ್ರೂಪ್ ಬಿ: 91

ಗ್ರೂಪ್ ಸಿ: 157

ಒಟ್ಟು ಹುದ್ದೆಗಳು : 281

ಪ್ರಮುಖ ದಿನಾಂಕಗಳು

ಆನ್ ಲೈನ್ ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 24-04-2023

ಆನ್ ಲೈನ್ ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 13-05-2023

ಗ್ರೂಪ್ ಎ ಮತ್ತು ಗ್ರೂಪ್ ಬಿ ಹುದ್ದೆಗಳಡಿ ಸೈಂಟಿಸ್ಟ್ 1, ಸೈಂಟಿಸ್ಟ್ 2 ಕೆಟಗರಿ ಹುದ್ದೆಗಳು ಇವೆ. ವಿವಿಧ ವಿಷಯಗಳಲ್ಲಿ ಈ ಹುದ್ದೆಗಳನ್ನು ನೇಮಕ ಮಾಡಲಾಗುತ್ತದೆ. ಸೈಂಟಿಸ್ಟ್, ಮೆಡಿಕಲ್ ಆಫೀಸರ್, ಡಯಟೀಸಿಯನ್, ಮೆಡಿಕಲ್ ಸೋಷಿಯಲ್ ಸರ್ವೀಸ್ ಆಫೀಸರ್, ಜೂನಿಯರ್ ಫಿಸಿಯೋಥೆರಪಿಸ್ಟ್ / ಆಕ್ಯುಪೇಶನಲ್ ಥೆರಪಿಸ್ಟ್, ಪ್ರೋಗ್ರಾಮರ್, ಜೆನೆರಲ್ ಡ್ಯೂಟಿ ಮೆಡಿಕಲ್ ಆಫೀಸರ್ ಹುದ್ದೆಗಳಿವೆ. ಗ್ರೂಪ್ ಸಿ ಹುದ್ದೆಗಳಡಿ ಸ್ಟೋರ್ ಕೀಪರ್ ಜೂನಿಯರ್ ಇಂಜಿನಿಯರ್, ಟೆಕ್ನೀಷಿಯನ್, ಸ್ಟ್ಯಾಟಿಸ್ಟಿಕಲ್ ಅಸಿಸ್ಟಂಟ್, ಆಫ್ಥಲ್ಮಿಕ್ ಟೆಕ್ನೀಷಿಯನ್, ಫಾರ್ಮಾಸಿಸ್ಟ್, ಗ್ರೇಡ್ 2, ಜೂನಿಯರ್ ಫೋಟೋಗ್ರಾಫರ್, ಸ್ಟೆನೋಗ್ರಾಫರ್, ವಾರ್ಡನ್, ಸೆಕ್ಯೂರಿಟಿ ಕಮ್ ಫೈಯರ್ ಗಾರ್ಡ್, ಸೇರಿದಂತೆ ವಿವಿಧ ಹುದ್ದೆಗಳಿವೆ.

ಈ ಹುದ್ದೆಗಳಿಗೆ ವಿವಿಧ ಲೆವೆಲ್ ವೇತನ ಶ್ರೇಣಿ ಇದೆ. ಅರ್ಜಿ ಸಲ್ಲಿಸಿದವರಿಗೆ ಸಿಬಿಟಿ ಟೆಸ್ಟ್, ಪ್ರ್ಯಾಕ್ಟಿಕಲ್ ಟೆಸ್ಟ್, ಸಂದರ್ಶನಗಳನ್ನು ನಡೆಸಿ ಆಯ್ಕೆ ಮಾಡಲಾಗುತ್ತದೆ.

ಹುದ್ದೆಗಳ ಕುರಿತು ಕಂಪ್ಲೀಟ್ ಡೀಟೇಲ್ಸ್ ಅನ್ನು ಕೆಳಗಿನ ನೋಟಿಫಿಕೇಶನ್ ಲಿಂಕ್ ಅನ್ನು ಕ್ಲಿಕ್ ಮಾಡಿ ಓದಿರಿ.

ಅರ್ಜಿ ಸಲ್ಲಿಸುವುದು ಹೇಗೆ?

– ವೆಬ್ ವಿಳಾಸ https://recruitgrpabc2022.aiimsexams.ac.in/ ಕ್ಕೆ ಭೇಟಿ ನೀಡಿ.

– ಓಪನ್ ಆದ ವೆಬ್ ಮುಖಪುಟದಲ್ಲಿ ‘Registration/Login’ ಎಂಬಲ್ಲಿ ಕ್ಲಿಕ್ ಮಾಡಿ.

– ವೈಯಕ್ತಿಕ ಮಾಹಿತಿಗಳನ್ನು ನೀಡಿ ಮೊದಲು ರಿಜಿಸ್ಟ್ರೇಷನ್ ಪಡೆಯಿರಿ.

– ನಂತರ ಇತರೆ ಪೂರ್ಣ ವಿವರಗಳನ್ನು ನೀಡಿ ಅರ್ಜಿ ಸಲ್ಲಿಸಿ.

ಅಪ್ಲಿಕೇಶನ್ ಶುಲ್ಕ ವಿವರ

ಜೆನೆರಲ್ / ಒಬಿಸಿ ಅಭ್ಯರ್ಥಿಗಳಿಗೆ ರೂ.3000.

ಎಸ್ ಸಿ / ಎಸ್ ಟಿ / ಆರ್ಥಕವಾಗಿ ಹಿಂದುಳಿದ ಅಭ್ಯರ್ಥಿಗಳಿಗೆ ರೂ.2400.

ಪಿಡಬ್ಲ್ಯೂಡಿ ಅಭ್ಯರ್ಥಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ.

ಅರ್ಜಿ ಶುಲ್ಕವನ್ನು ಆನ್ ಲೈನ್ ಮೂಲಕ ಡೆಬಿಟ್ ಕಾರ್ಡ್ / ಕ್ರೆಡಿಟ್ ಕಾರ್ಡ್ / ನೆಟ್ ಬ್ಯಾಂಕಿಂಗ್ ಬಳಸಿ ಪಾವತಿ ಮಾಡಬಹುದು.