ಮನೆ ಕಾನೂನು ದೆಹಲಿಯ ಅಬಕಾರಿ ನೀತಿ ಹಗರಣ: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ

ದೆಹಲಿಯ ಅಬಕಾರಿ ನೀತಿ ಹಗರಣ: ಅರವಿಂದ್‌ ಕೇಜ್ರಿವಾಲ್‌ ಗೆ 14 ದಿನಗಳ ನ್ಯಾಯಾಂಗ ಬಂಧನ

0

ನವದೆಹಲಿ: ದೆಹಲಿಯ ಅಬಕಾರಿ ನೀತಿ ಹಗರಣದ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಕೋರ್ಟ್‌ ಶನಿವಾರ (ಜೂನ್‌ 29) ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಗೆ ಜುಲೈ 12ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿದೆ.

Join Our Whatsapp Group

ಕೇಜ್ರಿವಾಲ್‌ ಅವರನ್ನು ಕೋರ್ಟ್‌ ಗೆ ಹಾಜರುಪಡಿಸಿದ್ದ ವೇಳೆ, ಅರವಿಂದ್‌ ಕೇಜ್ರಿವಾಲ್‌ ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಬೇಕು ಎಂದು ಸಿಬಿಐ ಮನವಿ ಮಾಡಿಕೊಂಡಿದ್ದು, ವಾದ-ಪ್ರತಿವಾದ ಆಲಿಸಿದ್ದ ಕೋರ್ಟ್‌ ಆದೇಶವನ್ನು ಕಾಯ್ದಿರಿಸಿತ್ತು.

ಮೂರು ದಿನಗಳ ಕಸ್ಟಡಿ ಮುಕ್ತಾಯಗೊಂಡಿದ್ದರಿಂದ ಸಿಬಿಐ ಅಧಿಕಾರಿಗಳು ಕೇಜ್ರಿವಾಲ್‌ ಅವರನ್ನು ಕೋರ್ಟ್‌ ಗೆ ಕರೆತಂದಿದ್ದು, ಸಿಬಿಐ ಮನವಿ ಬಗ್ಗೆ ವಿಶೇಷ ನ್ಯಾಯಾಧೀಶೆ ಸುನೇನಾ ಶರ್ಮಾ ಆದೇಶ ಕಾಯ್ದಿರಿಸಿ, ಸಂಜೆ ಪ್ರಕಟಿಸಿದ್ದರು.

2021-2022ರ ಅಬಕಾರಿ ನೀತಿ ಪ್ರಕಾರ ರಖಂ ಮಾರಾಟಗಾರರ ಲಾಭಾಂಶ ಶೇ.5ರಿಂದ ಶೇ.12ರಷ್ಟು ಹೇಗೆ ಏರಿಕೆಯಾಗುತ್ತದೆ ಎಂಬ ಬಗ್ಗೆ ಕೇಜ್ರಿವಾಲ್‌ ಸಮರ್ಪಕ ವಿವರಣೆ ನೀಡಿಲ್ಲ ಎಂದು ಸಿಬಿಐ ಆರೋಪಿಸಿದೆ.‌