ಮನೆ ರಾಷ್ಟ್ರೀಯ ಅಬಕಾರಿ ನೀತಿಯಿಂದ ದೆಹಲಿ ಸರ್ಕಾರಕ್ಕೆ ₹2,000 ಕೋಟಿ ನಷ್ಟ: ಸಿಎಜಿ ವರದಿ

ಅಬಕಾರಿ ನೀತಿಯಿಂದ ದೆಹಲಿ ಸರ್ಕಾರಕ್ಕೆ ₹2,000 ಕೋಟಿ ನಷ್ಟ: ಸಿಎಜಿ ವರದಿ

0

ನವದೆಹಲಿ: 2021-2022ರ ಅಬಕಾರಿ ನೀತಿಯ ದುರ್ಬಲ ನೀತಿ ಚೌಕಟ್ಟಿನಿಂದ ಹಿಡಿದು ಕೊರತೆಯ ಅನುಷ್ಠಾನದವರೆಗಿನ ವಿವಿಧ ಕಾರಣಗಳಿಂದಾಗಿ ದೆಹಲಿ ಸರ್ಕಾರವು ₹2,000 ಕೋಟಿಯಷ್ಟು ಸಂಚಿತ ನಷ್ಟವನ್ನು ಅನುಭವಿಸಿದೆ ಎಂದು ಮಂಗಳವಾರ(ಫೆ.25) ವಿಧಾನಸಭೆಯಲ್ಲಿ ಮಂಡಿಸಿದ ಸಿಎಜಿ ವರದಿಯಲ್ಲಿ ಉಲ್ಲೇಖಿಸಲಾಗಿದೆ.

Join Our Whatsapp Group

ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ದೆಹಲಿ ವಿಧಾನಸಭೆಯಲ್ಲಿ ಸಿಎಜಿ ವರದಿಯನ್ನು ಮಂಡಿಸಿದರು.

ಆಮ್ ಆದ್ಮಿ ಪಕ್ಷದ ನೇತೃತ್ವದ ಹಿಂದಿನ ಸರ್ಕಾರದ ಕಾರ್ಯಕ್ಷಮತೆಯ ಕುರಿತಾದ 14 ವರದಿಗಳ ಪೈಕಿ ಒಂದನ್ನು ಮಂಡಿಸಲಾಗಿದ್ದು, ಅಬಕಾರಿ ಪರವಾನಗಿ ನೀಡುವ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘನೆ ಆಗಿರುವುದನ್ನೂ ಉಲ್ಲೇಖಿಸಿದೆ.

ಈಗ ರದ್ದಾಗಿರುವ ಅಬಕಾರಿ ನೀತಿಯ ರಚನೆಗೆ ಬದಲಾವಣೆಗಳನ್ನು ಸೂಚಿಸಲು ರಚಿಸಲಾಗಿದ್ದ ತಜ್ಞರ ಸಮಿತಿಯು ನೀಡಿದ್ದ ಶಿಫಾರಸುಗಳನ್ನು ಆಗಿನ ಉಪಮುಖ್ಯಮಂತ್ರಿ ಮತ್ತು ಅಬಕಾರಿ ಸಚಿವ ಮನೀಶ್ ಸಿಸೋಡಿಯಾ ಅವರು ನಿರ್ಲಕ್ಷಿಸಿದ್ದಾರೆ ಎಂದು ಅದು ಹೇಳಿದೆ.

ಇದೇ ಪ್ರಕರಣದಲ್ಲಿ ಮಾಜಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಸೇರಿ ಹಲವರನ್ನು ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದರು. ಸದ್ಯ  ಅವರು ಜಾಮೀನಿನ ಮೇಲೆ ಹೊರಗಿದ್ದಾರೆ.