ಮನೆ ಕಾನೂನು ವಿಚಾರಣೆ ವಿಡಿಯೊ ತೆಗೆದುಹಾಕುವಂತೆ ಕೇಜ್ರಿವಾಲ್ ಪತ್ನಿಗೆ ದೆಹಲಿ ಹೈಕೋರ್ಟ್ ತಾಕೀತು

ವಿಚಾರಣೆ ವಿಡಿಯೊ ತೆಗೆದುಹಾಕುವಂತೆ ಕೇಜ್ರಿವಾಲ್ ಪತ್ನಿಗೆ ದೆಹಲಿ ಹೈಕೋರ್ಟ್ ತಾಕೀತು

0

ನವದೆಹಲಿ:  ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದ ವಿಚಾರಣೆಯ ವಿಡಿಯೊ ರೆಕಾರ್ಡಿಂಗ್ ಅನ್ನು ಸಾಮಾಜಿಕ ಜಾಲತಾಣದಿಂದ ತೆಗೆದುಹಾಕುವಂತೆ ಶನಿವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಪತ್ನಿ ಸುನೀತಾ ಅವರಿಗೆ ದೆಹಲಿ ಹೈಕೋರ್ಟ್ ಸೂಚಿಸಿದೆ.

Join Our Whatsapp Group

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರನ್ನು ರೋಸ್‌ ಅವೆನ್ಯೂ ಕೋರ್ಟ್‌ಗೆ ಹಾಜರುಪಡಿಸಿದ್ದ ವೇಳೆ  ನ್ಯಾಯಾಲಯದ ವಿಡಿಯೊ ಕಾನ್ಫರೆನ್ಸಿಂಗ್ ನಿಯಮಗಳನ್ನು ಉಲ್ಲಂಘಿಸಿ ವಿಡಿಯೊ ರೆಕಾರ್ಡ್‌ ಮಾಡಿದ್ದರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಸಿದ ಮನವಿ ಮೇರೆಗೆ ಕೋರ್ಟ್ ಈ ಸೂಚನೆ ನೀಡಿದೆ.

ವಿಡಿಯೊ ತೆಗೆದು ಹಾಕುವಂತೆ ಸುನೀತಾ ಕೇಜ್ರಿವಾಲ್ ಮತ್ತು ಇತರ ಐವರಿಗೆ ನಿರ್ದೇಶಿಸಿದ ಕೋರ್ಟ್‌, ಆ ದಿನ ರೆಕಾರ್ಡ್ ಮಾಡಿದ ವಿಡಿಯೊಗೆ ಸಂಬಂಧಿಸಿದ ಯಾವುದೇ ಪೋಸ್ಟ್‌ಗಳು, ರಿಪೋಸ್ಟ್‌ಗಳನ್ನು ಸಾಮಾಜಿಕ ಜಾಲಾತಾಣ ವೇದಿಕೆಯಿಂದ ತೆಗೆದು ಹಾಕುವಂತೆ ಫೇಸ್ಬುಕ್‌, ಯೂಟ್ಯೂಬ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ತಿಳಿಸಿದೆ.