ಮನೆ ಸುದ್ದಿ ಜಾಲ ದೆಹಲಿಯಲ್ಲಿ ಮತ್ತೆ ಕಟ್ಟೆಚ್ಚರ: ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿರುವ ಯಮುನೆ

ದೆಹಲಿಯಲ್ಲಿ ಮತ್ತೆ ಕಟ್ಟೆಚ್ಚರ: ಅಪಾಯದ ಮಟ್ಟ ಮೀರಿ ಉಕ್ಕಿ ಹರಿಯುತ್ತಿರುವ ಯಮುನೆ

0

ಹರಿಯಾಣದ ಹತ್ನನಿಕುಂಡ್ ಬ್ಯಾರೇಜ್ ನಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಯಮುನಾ ನದಿಯ ನೀರಿನ ಮಟ್ಟ ದೆಹಲಿಯಲ್ಲಿ ಮತ್ತೆ ಅಪಾಯದ ಮಟ್ಟ ದಾಟಿದೆ.

Join Our Whatsapp Group

 ಇಂದು ಬೆಳಿಗ್ಗೆ 10 ಗಂಟೆಗೆ ನದಿಯಲ್ಲಿ 206.10 ಮೀಟರ್ ಗಳಷ್ಟು ನೀರು ಹರಿಯುತ್ತಿದೆ. ಸಂಜೆ ಬೆಳಿಗ್ಗೆ ಇದು ಇನ್ನಷ್ಟು ಏರುವ ನಿರೀಕ್ಷೆ ಇದೆ.

 ಹರಿಯಾಣದಿಂದ 2 ಲಕ್ಷ ಕ್ಯೂ ಸೆಕ್ ಗೂ ಅಧಿಕ ನೀರು ಬಿಟ್ಟ ಹಿನ್ನೆಲೆಯಲ್ಲಿ ದೆಹಲಿ ಸರ್ಕಾರ ಕಟ್ಟೆಚ್ಚರ ವಹಿಸಿದೆ.

 ಅರವಿಂದ ಕ್ರೇಜಿವಾಲ್ ಸರ್ಕಾರವು ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ಸಚಿವ ಮತ್ತು ಅಮ್ ಆದ್ಮಿ ಪಕ್ಷದ ಎಎಪಿ ನಾಯಕ ಅತಿಶಿ ಹೇಳಿದ್ದಾರೆ. ಯಮುನಾ ನದಿಯು ಈಗ ಒಂದು ವಾರದಿಂದ ಉಕ್ಕಿ ಹರಿಯುತ್ತಿದೆ, ಇದು ರಾಷ್ಟ್ರ ರಾಜಧಾನಿಯ ಹಲವಾರು ಭಾಗಗಳಲ್ಲಿ ಪ್ರವಾಹಕ್ಕೆ ಕಾರಣವಾಗಿದೆ. ಹರಿಯಾಣ ಬ್ಯಾರೆಜ್ ನಿಂದ ನೀರು  ಬಿಡುವುದೇ ನೀರಿನ ಮಟ್ಟದಲ್ಲಿ ನಿರಂತರವಾಗಿ ಏರಿಕೆಗೆ ಪ್ರಮುಖ ಕಾರಣವಾಗಿದೆ.

 ಹಿಮಾಚಲದಲ್ಲಿ ಮಾನ್ಸೂನ್ ಬಿರುಸಿನ ಹಿನ್ನೆಲೆಯಲ್ಲಿ ಬ್ಯಾರೇಜ್ ಗೆ ಭಾರಿ ಪ್ರಮಾಣದ ನೀರು ಬಂದಿದೆ.

ಹಿಂದಿನ ಲೇಖನ‘ಕೌಸಲ್ಯಾ ಸುಪ್ರಜಾ ರಾಮ’ ಸಿನಿಮಾದ ಹಾಡು ರಿಲೀಸ್: 90 ಹಾಕು ಕಿಟ್ಟಪ್ಪ ಅಂತ ಹೇಳ್ತಾ ನಿಧಿಮಾ ಎಲ್ಲರನ್ನೂ ಕುಣಿಸಿದ್ದಾರೆ
ಮುಂದಿನ ಲೇಖನಸೋನಿಯಾ ಅವರು ಕರ್ನಾಟಕದಿಂದ ರಾಜ್ಯಸಭಾ ಸದಸ್ಯೆಯಾಗುವಂತೆ ಸಿಎಂ ಸಿದ್ದರಾಮಯ್ಯ ಮನವಿ