ಮನೆ ರಾಷ್ಟ್ರೀಯ ಐಸಿಸ್‌ ಮಾಡ್ಯೂಲ್‌ ಭೇದಿಸಿದ ದೆಹಲಿ ಪೊಲೀಸ್‌ – ಭಯೋತ್ಪಾದಕರು ಅರೆಸ್ಟ್‌..!

ಐಸಿಸ್‌ ಮಾಡ್ಯೂಲ್‌ ಭೇದಿಸಿದ ದೆಹಲಿ ಪೊಲೀಸ್‌ – ಭಯೋತ್ಪಾದಕರು ಅರೆಸ್ಟ್‌..!

0

ನವದೆಹಲಿ : ಐಸಿಸ್‌ ಉಗ್ರ ಸಂಘಟನೆಯೊಂದಿಗೆ ಸಂಪರ್ಕದಲ್ಲಿದ್ದು, ದೆಹಲಿಯ ವಿವಿಧೆಡೆ ಭಯೋತ್ಪಾದನಾ ದಾಳಿಗಳಿಗೆ ಸಂಚು ರೂಪಿಸಿದ್ದ ಇಬ್ಬರು ಶಂಕಿತ ಉಗ್ರರನ್ನು ದೆಹಲಿ ಪೊಲೀಸ್‌ ವಿಶೇಷ ಘಟಕ ಬಂಧಿಸಿದೆ.

ಗುಪ್ತಚರ ಸಂಸ್ಥೆ ಹಾಗೂ ದೆಹಲಿ ಪೊಲೀಸ್‌ ವಿಶೇಷ ಘಟಕ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಐಸಿಸ್‌ ಮಾಡ್ಯೂಲ್‌ ಭೇದಿಸಿದ್ದು, ಇಬ್ಬರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ಒಬ್ಬನನ್ನ ಅದ್ನಾನ್‌ ಎಂದು ಗುರುತಿಸಲಾಗಿದೆ.

ಈತ ಮೂಲತಃ ಮಧ್ಯಪ್ರದೇಶದ ಭೋಪಾಲ್ ಮೂಲದವನು, ಮತ್ತೊಬ್ಬ ಶಂಕಿತನನ್ನು ದೆಹಲಿಯ ಸಾದಿಕ್ ನಗರದಲ್ಲಿ ಬಂಧಿಸಲಾಗಿದೆ. ಈ ಇಬ್ಬರು ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿರುವ ಶಂಕೆಯಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿಗಳು ಐಸಿಸ್‌ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದು, ದೆಹಲಿಯಲ್ಲಿ ಪ್ರಮುಖ ದಾಳಿ ನಡೆಸಲು ಪ್ಲ್ಯಾನ್‌ ಮಾಡುತ್ತಿದ್ದರು. ಇಬ್ಬರು ಫಿದಾಯೀನ್ ದಾಳಿಗಳಿಗೆ ತರಬೇತಿ ಪಡೆದಿದ್ದರು. ಇಬ್ಬರನ್ನು ಬಂಧಿಸಿದ್ದು, ಅವರ ಬಳಿಯಿದ್ದ ಎಲೆಕ್ಟ್ರಾನಿಕ್ ಸಾಧನಗಳು ಹಾಗೂ ಸ್ಫೋಟಕ ವಸ್ತುಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಾರ್ಯಾಚರಣೆ ಮುಂದುವರಿಸಿರುವ ಅಧಿಕಾರಿಗಳು ಸಂಪೂರ್ಣ ಜಾಲ ಪತ್ತೆಹಚ್ಚಲು ಮುಂದಾಗಿದ್ದಾರೆ. ಐಸಿಸ್‌ ಜಾಲದಲ್ಲಿ ಇನ್ನು ಎಷ್ಟು ಮಂದಿ ಇದ್ದಾರೆ..? ಭಾರತದಲ್ಲಿ ಬೇರೆ ಎಲ್ಲೆಲ್ಲಿ ದಾಳಿಗೆ ಯೋಜನೆ ರೂಪಿಸಲಾಗಿದೆ? ಎಂಬೆಲ್ಲಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.