ಮನೆ ರಾಜ್ಯ ಗಣಿ ಸಾಗಾಣಿಕೆದಾರರಿಂದ ಡಿಮ್ಯಾಂಡ್‌ – ಬಿಜೆಪಿ ಜಿಲ್ಲಾ ಉಪಾಧ್ಯಕ್ಷನ ವಿರುದ್ಧ ಎಫ್‌ಐಆರ್‌

ಗಣಿ ಸಾಗಾಣಿಕೆದಾರರಿಂದ ಡಿಮ್ಯಾಂಡ್‌ – ಬಿಜೆಪಿ ಜಿಲ್ಲಾ ಉಪಾಧ್ಯಕ್ಷನ ವಿರುದ್ಧ ಎಫ್‌ಐಆರ್‌

0

ಬಳ್ಳಾರಿ : ಸ್ವಪಕ್ಷೀಯ ನಾಯಕನನ್ನೇ ಬೆದರಿಸಿ ಬಿಜೆಪಿ ಉಪಾಧ್ಯಕ್ಷನೋರ್ವ ಹಣಕ್ಕೆ ಬೇಡಿಕೆ ಇಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಬಳ್ಳಾರಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಜಿಟಿ ಪಂಪಾಪತಿ ಗಣಿ ಸಾಗಾಣಿಕೆದಾರರಿಂದ 40 ಲಕ್ಷ ರೂ.ಗೆ ಬೇಡಿಕೆ ಇಟ್ಟ ಪರಿಣಾಮ ತೋರಣಗಲ್‌ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿದೆ.

ರೌಡಿ ಶೀಟರ್ ಆಗಿರುವ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಜಿ.ಟಿ ಪಂಪಾಪತಿ ವಿರುದ್ಧ ಬೆದರಿಕೆ ಹಾಕಿ ಸುಲಿಗೆ ಮಾಡಿದ್ದಾರೆ ಎನ್ನುವ ದೂರಿನ ಹಿನ್ನೆಲೆ ಎಫ್‌ಐಆರ್‌ ದಾಖಲಾಗಿದೆ. ಗಣಿ ಸಾಗಣಿಕೆದಾರ ಚಂದ್ರು ಅವರಿಂದ ಜಿ.ಟಿ ಪಂಪಾಪತಿ ವಿರುದ್ಧ ಆಡಿಯೋಗಳ ದಾಖಲೆ ಸಮೇತ ದೂರು ನೀಡಲಾಗಿದೆ.

ದೂರುದಾರ ಚಂದ್ರು ಕೂಡಾ ಬಿಜೆಪಿ ಮುಖಂಡ ಅನ್ನೋದು ಗಮನಾರ್ಹವಾಗಿದ್ದು, ರೌಡಿ ಶೀಟರ್ ಪಂಪಾಪತಿ ನಿಮ್ಮ ವಿರುದ್ದ ಲೋಕಾಯುಕ್ತಕ್ಕೆ ದೂರು ಕೊಟ್ಟು, ಅಪಪ್ರಚಾರ ಮಾಡುತ್ತೇವೆ ಎಂದು ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ.

ಹೀಗಾಗಿ ಒಂದು ಟನ್‌ಗೆ ಅದಿರಿಗೆ ಒಂದು ಸಾವಿರದಂತೆ 40 ಲಕ್ಷ ಹಣ ಕೊಡಿ ಎಂದು ಪಂಪಾತಿ ಬೇಡಿಕೆ ಇಟ್ಟಿದ್ದರು ಎನ್ನುವ ಆರೋಪ. ಜಿಟಿ ಪಂಪಾಪತಿ ಮಾತ್ರವಲ್ಲದೇ ಯುಟ್ಯೂಬ್ ಚಾನಲ್‌ನ ಇಬ್ಬರ ವಿರುದ್ಧವೂ ಎಫ್ಐಆರ್ ದಾಖಲಾಗಿದೆ.

ಇಬ್ಬರು ಯುಟ್ಯೂಬರ್‌ಗಳಿಗೆ 15 ಲಕ್ಷ ಹಣ ಕೊಡುವಂತೆ ತಾಕೀತು ಮಾಡಲಾಗಿತ್ತು ಎಂದು ಗಂಭೀರ ಆರೋಪ ಕೇಳಿ ಬಂದಿದೆ. ಚಂದ್ರು ಹಾಗೂ ಕಾಶಿ ವಿಶ್ವನಾಥ ರೆಡ್ಡಿ ಎನ್ನುವರು ಟ್ರೆಡಿಂಗ್ ಕಂಪನಿ ಮೂಲಕ ಗೋವಾದ ಖಾಸಗಿ ಕಂಪನಿಗೆ ಅದಿರು ಸಾಗಟ ಮಾಡಲಾಗ್ತಿತ್ತು. ರೈಲಿನ ಮೂಲಕ 4 ಸಾವಿರ ಟನ್ ಅದಿರು ಸಾಗಟ ಮಾಡಲಾಗ್ತಿತ್ತು.

ಆಗ ಪಂಪಾತಿ ಹಾಗೂ ಇತರು ಬೆದರಿಕೆ ಹಾಕಿ ಸುಲಿಗೆ ಮಾಡಿದ್ದರೆ ಎಂದು ಆರೋಪಿಸಿ ಚಂದ್ರು ದೂರು ನೀಡಿದ್ದಾರೆ. ಬಿಜೆಪಿ ಜಿಲ್ಲಾ ಉಪಾಧ್ಯಕ್ಷನ ವಿರುದ್ದ ಎಫ್‌ಐಆರ್ ಹಿನ್ನೆಲೆ ಬಳ್ಳಾರಿ ಬಿಜೆಪಿ ನಾಯಕರು ತೀವ್ರ ಮುಜುಗರಕ್ಕೊಳಗಾಗಿದ್ದಾರೆ.