ಅಂಗನವಾಡಿ ಕಾರ್ಯಕರ್ತೆಯರಿಗೆ ಹೊಸ ಮೊಬೈಲ್ ನೀಡಬೇಕು ಹಾಗೂ ಆರೋಗ್ಯ ಇಲಾಖೆ ಸಮೀಕ್ಷ ಕಾರ್ಯಕ್ಕೆ ಒತ್ತಡ ಹೇರುವುದನ್ನ ನಿಲ್ಲಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕರ ಫೆಡರೇಶನ್ ಜಿಲ್ಲಾ ಸಮಿತಿ ವತಿಯಿಂದ ನಗರದ ಎಲ್ಲಾ ಜಿಲ್ಲಾ ಪಂಚಾಯಿತಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು.
ಅಂಗನವಾಡಿ ಕಾರ್ಯಕರ್ತೆಯರಿಗೆ ಈಗಾಗಲೇ ನೀಡಿರುವ ಮೊಬೈಲ್ ಗಳನ್ನು ಹಿಂಪಡೆದು ಹೊಸ ಮೊಬೈಲ್ ಹಾಗೂ ಮಿನಿ ಟ್ಯಾಬ್ ವಿತರಣೆ ಮಾಡಬೇಕು. ಆರೋಗ್ಯ ಇಲಾಖೆಯ hns ಸರ್ವೆಯಿಂದ ಅಂಗನವಾಡಿ ಕಾರ್ಯಕರ್ತೆರೆಯರನ್ನು ಕೈ ಬಿಡಬೇಕು. 2011 ರಿಂದ ನಿವೃತ್ತಿ ಹೊಂದಿದ ಕಾರ್ಯಕರ್ತರು ಮತ್ತು ಸಹಾಯಕರಿಗೆ 5 ಸಾವಿರ ರೂ. ನಿವೃತ್ತಿ ವೇತನ ನೀಡಬೇಕು, ನಿವೃತ್ತಿ ಹೊಂದುವ ಕಾರ್ಯಕರ್ತರಿಗೆ 3 ಲಕ್ಷ ರೂ. ಇಡುಗಂಟು ನೀಡಬೇಕು ಬಾಕಿ ಬಾಡಿಗೆ ಹಣವನ್ನು ಕೂಡಲೇ ಬಿಡುಗಡೆ ಮಾಡಬೇಕು ಗ್ಯಾಸ್ ರಿಫಿಲ್ಲಿಂಗ್,ತರಕಾರಿ ಖರೀದಿಸಲು ಹಣ ನೀಡಬೇಕು. ಇಲಾಖೆಯಿಂದ ವಿದ್ಯುತ್ ಬಿಲ್ ಪಾವತಿಸಬೇಕು ಎಂದು ಆಗ್ರಹಿಸಿದರು.