ಮನೆ ಮಾನಸಿಕ ಆರೋಗ್ಯ ಡೆಮೆನ್ಷಿಯ

ಡೆಮೆನ್ಷಿಯ

0

ಇಳಿವಯಸ್ಸಿನಲ್ಲಿ ಮತ್ತು ಹಲವಾರು ಕಾರಣಗಳಿಂದ ಮಧ್ಯವಯಸ್ಸಿನಲ್ಲಿ 40 ವರ್ಷ ವಯಸ್ಸಿನ ನಂತರ, ಮೆದುಳಿನ ನರ ಕೋಶಗಳ ನಶಿಸುತ್ತಾ ಅವುಗಳ ಸಂಖ್ಯೆ ಕ್ಷೀಣಿಸತೊಡಗುತ್ತದೆ. ಮೆದುಳಿನ ವಸ್ತುವಿನ ಪ್ರಮಾಣ ತಗ್ಗಿ, ಮೆದುಳು ಗಾತ್ರದಲ್ಲಿ ಕಿರಿದಾಗ ತೊಡಗುತ್ತದೆ. ಕಲಿಯಲು ಮತ್ತು ಕಲಿತದ್ದು ರೆಕಾರ್ಡ್ ಆಗಲು ಬೇಕಾದ ನರವಾಹಕ ಅಸಿಟೈಲ್ ಕೋಲಿನ್ ಪ್ರಮಾಣ ತಗ್ಗುತ್ತದೆ. ತತ್ಪರಿಣಾಮಾವಾಗಿ ರೋಗ ಲಕ್ಷಣಗಳು ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುತ್ತದೆ.

*ನೆನಪು ಕಡಿಮೆಯಾಗುವುದು :- ಪ್ರಾರಂಭದಲ್ಲಿ ಆ ದಿನದ ಘಟನೆಗಳು ಮೆದುಳಿನಲ್ಲಿ ರೆಕಾರ್ಡ್ಆಗುವುದಿಲ್ಲ. ಹೀಗಾಗಿ ಕೆಲವು ನಿಮಿಷ / ಗಂಟೆಗಳ ಹಿಂದೆ ನಡೆದ ಘಟನೆಗಳು ಮಾಡಿದ ಚಟುವಟಿಕೆ ವ್ಯಕ್ತಿಗೆ ಮರೆತು ಹೋಗುತ್ತದೆ.. ಆನಂತರ, ದೀರ್ಘಾವಧಿಯ ನೆನಪು ಅಳಿಸಿ ಹೋಗುತ್ತದೆ. ವ್ಯಕ್ತಿಯ ತನ್ನ ಮಕ್ಕಳ, ಮೊಮ್ಮಕ್ಕಳ ಹೆಸರು ಮರೆತು ಹೋಗುತ್ತದೆ. ತನ್ನ ಮನೆಯ ವಿಳಾಸವು ನೆನಪಿನಲ್ಲಿ ಇರುವುದಿಲ್ಲ.

*ಭಾವನೆಗಳ ಮೇಲಿನ ನಿಯಂತ್ರಣ ತಪ್ಪುತ್ತದೆ. ಈ ಕ್ಷಣ ನಗು ಮರುಕ್ಷಣಾ ಅಳು, ಮಗದೊಂದು ಕ್ಷಣ ಕೋಪ.

*ಬುದ್ಧಿ ಕೌಶಲಗಳು ಮರೆಯಾಗುತ್ತದೆ. ಲೆಕ್ಕಾಚಾರ, ಆಲೋಚನೆ, ಸಮಸ್ಯೆಗೆ ಪರಿಹಾರ ಹುಡುಕುವುದು, ಸರಿ ನಿರ್ಧಾರ ಕೈಗೊಳ್ಳುವುದು, ಸಾಮಾನ್ಯ ಹಾಗೂ ವೃತ್ತಿ ಕೌಶಲಗಳು ಮರೆಯಾಗುತ್ತದೆ.

*ವ್ಯಕ್ತಿತ್ವ ಬದಲಾಯಿಸುತ್ತದೆ :- ಬಿಗಿ ಹಿಡಿತದ ವ್ಯಕ್ತಿ ಉದಾರಿಯಾಗಬಹುದು. ಅಂತರ್ಮುಖಿ, ಬಹಿರ್ಮುಖಿಯಾಗಬಹುದು. ಶಾಂತ ಸ್ವಭಾವದವನು ಕೋಪಿಷ್ಟನಾಗಬಹುದು.

*ದೈನಂದಿನ ಚಟುವಟಿಕೆಗಳಲ್ಲಿ ಪರಾವಲಂಬಿತ :- ಊಟ ಮಾಡುವುದಕ್ಕೆ ಸ್ನಾನ ಮಾಡಲು ಬಟ್ಟೆ ತೊಳದು ಮನೆಯೊಳಗೆ ಅಥವಾ ಹೊರಗೆ ತಿರುಗಾಡಲು ಮಲಮೂತ್ರ ವಿಸರ್ಜಿಸಲು ಅಪಾಯದಿಂದ ರಕ್ಷಿಸಿ ಕೊಳ್ಳಲು ಇನ್ನೊಬ್ಬರನ್ನು ಅವಲಂಬಿಸಬೇಕಾಗುತ್ತದೆ.

ಡೆಮೆನ್ಷಿಯಾ ಬರಲು ಸಾಮಾನ್ಯ ಕಾರಣ, ಸಿಹಿಮೂತ್ರ ರೋಗ, ಅಧಿಕ ರಕ್ತದೊತ್ತಡ, ಮೆದುಳಿನಲ್ಲಿ ರಕ್ತಸ್ರಾವ, ರಕ್ತನಾಳ ಕಟ್ಟಿಕೊಳ್ಳುವುದು, ಸಿಫಿಲಿಸ್, ಏಡ್ಸ್ ನಂತಹ ಲೈಂಗಿಕ ರೋಗಗಳು, ಪದೇಪದೇ ಅಥವಾ ತೀವ್ರವಾಗಿ ತಲೆಗೆ ಬಿದ್ದ ಪೆಟ್ಟು, ಮೆದುಳಿನ ಗೆಡ್ಡೆಗಳು, ಆಲ್ ಜೈಮರ್ಸ್ ಕಾಯಿಲೆ ಇತ್ಯಾದಿ. ಈ ರೋಗಿಗಳಿಗೆ ಒಳ್ಳೆಯ ಶುಶ್ರೂಷೆ ಬೇಕು. ನಿರ್ದಿಷ್ಟ ಔಷಧಿ ಚಿಕಿತ್ಸೆ ಇಲ್ಲ. ಅವರು ಈ ಜೀವಂತ ಇರುವ ತನಕ, ಪೋಷಿಸಬೇಕಾಗುತ್ತದೆ. ಜೋಪಾನ ಮಾಡಬೇಕಾಗುತ್ತದೆ.

ನೀವೇನು ಮಾಡಬಹುದು ?

ನಿಮಗೆ ಗೊತ್ತಿರುವ ವ್ಯಕ್ತಿಗೆ ಮಾನಸಿಕ ಕಾಯಿಲೆ ಇರಬಹುದು ಎಂದು ಗಮನಿಸಿದರೆ…..

*ಆತ ಆದಷ್ಟು ಬೇಗ ಮನೋವೈದ್ಯರ ಸಲಹೆ ಪಡೆಯುವಂತೆ ಮಾಡಿ ಅಥವಾ ನೀವೇ ಕರೆದುಕೊಂಡು ಬನ್ನಿ. ಇದನ್ನು ಎಷ್ಟು ಬೇಗ ಮಾಡಿದರೆ ಅಷ್ಟು ಉತ್ತಮ.

* ಚಿಕಿತ್ಸೆಯನ್ನು ಆತ ಕ್ರಮವಾಗಿ ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿ. ಅವನ ದಿನನಿತ್ಯದ ಅವಶ್ಯಕತೆಗಳಾದ ಊಟ, ತಿಂಡಿ, ಉಡುಪು, ಚೊಕ್ಕಟವಾಗಿರುವುದು – ಇವನು ಗಮನಿಸಿ

* ಅದಷ್ಟು ಜಾಗ್ರತೆ ಆತನ ಪುನರ್ವಸತಿಗೆ ನೇರವಾಗಿ, ಆತ ತಾನು ಮಾಡುತ್ತಿದ್ದ ಕೆಲಸಕ್ಕೆ ಹಿಂದಿರುಗಬೇಕು ಅಥವಾ ಇನ್ಯಾವುದಾದರೂ ಕೆಲಸ ಮಾಡಲು ಪ್ರಾರಂಭಿಸುವಂತಾಗಬೇಕು….

*ಆತನ ನ್ಯೂನ್ಯತೆ ಮತ್ತು ಮಿತಿಯನ್ನು ಅರ್ಥ ಮಾಡಿಕೊಳ್ಳಿ. ಸಹಾನು ಭೂತಿಯಿಂದ ಅವನೊಂದಿಗೆ ನಡೆದುಕೊಳ್ಳಿ.

ನೀವು ಏನು ಮಾಡಬಾರದು ?

*ಖಾಯಿಲೆಯನ್ನು ಮುಚ್ಚಿಡಬೇಡಿ.

* ರೋಗಿಯನ್ನ ಕಂಡು ತಮಾಷೆ ಮಾಡಬೇಡಿ. ಹೀಗಳೆಯಬೇಡಿ.

* ಅವನನ್ನು ತಿರಸ್ಕರಿಸಬೇಡಿ. ಉದಾಸೀನ ಮಾಡಬೇಡಿ.

* ಅವನನ್ನು ಕೆಟ್ಟದಾಗಿ ನಡೆಸಿಕೊಳ್ಳಬೇಡಿ. ಹೊಡೆಯುವುದು, ಬರೇ ಹಾಕುವುದು, ಕೊಠಡಿಯಲ್ಲಿ ಬೀಗ ಹಾಕುವುದು, ಉಪವಾಸವಿರಿಸುವುದು ಮುಂತಾದ ನೋವುಂಟು ಮಾಡುವ ಚಿಕಿತ್ಸೆಯನ್ನು ಕೊಡಬೇಡಿ.

*ಮಂತ್ರವಾದಿಗಳು, ಮಾಟ-ಮದ್ದು ತೆಗೆಯುವವರಲ್ಲಿ ಹೋಗಬೇಡಿ.

ಹಿಂದಿನ ಲೇಖನದೀಪಾವಳಿ: ಹಸಿರು ಪಟಾಕಿ ಬಳಸಲು ಜಿಲ್ಲಾಧಿಕಾರಿ ಸೂಚನೆ
ಮುಂದಿನ ಲೇಖನನೇತ್ರಾವತಿ ನದಿಯಲ್ಲಿ ಅಪರಿಚಿತ ಶವ ಪತ್ತೆ