ಮನೆ ಆರೋಗ್ಯ ಬೆಂಗಳೂರಿನಲ್ಲಿ ಡೆಂಘಿ ಜ್ವರ, ಚಿಕನ್ ಗುನ್ಯಾ  ಪ್ರಕರಣ ಹೆಚ್ಚಳ

ಬೆಂಗಳೂರಿನಲ್ಲಿ ಡೆಂಘಿ ಜ್ವರ, ಚಿಕನ್ ಗುನ್ಯಾ  ಪ್ರಕರಣ ಹೆಚ್ಚಳ

0

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ತಾಪಮಾನದಲ್ಲಿ ಬದಲಾವಣೆಯಾಗುತ್ತಿರುವ ಬೆನ್ನಲ್ಲೇ ಕೊರೊನಾ ಹಾಗೂ ಡೆಂಘೀ ಜ್ವರ ಹೆಚ್ಚಾಗಿದೆ.

Join Our Whatsapp Group

ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಕಳೆದೊಂದು ತಿಂಗಳಿನಿಂದ ಕೊರೊನಾಕ್ಕಿಂತ ಹೆಚ್ಚು ಡೆಂಘಿ ಜ್ವರ ಹಾಗೂ ಚಿಕನ್ ಗುನ್ಯಾ  ಪ್ರಕರಣ ಹೆಚ್ಚಾಗಿದೆ.

ಜ್ವರ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ತಲೆಕೆಡಿಸಿಕೊಂಡಿದೆ ಬಿಬಿಎಂಪಿ ಹಾಗೂ ರಾಜ್ಯದಲ್ಲಿ ಕಳೆದ 20 ದಿನಗಳಲ್ಲಿ 246 ಡೆಂಘಿ ಕೇಸ್ ಪತ್ತೆಯಾಗಿದ್ದು 15% ರಿಂದ 20% ರಷ್ಟು ಡೆಂಘಿ ಕೇಸ್’ಗಳ ಸಂಖ್ಯೆಯಲ್ಲಿ ರಾಜ್ಯದಲ್ಲಿ ಏರಿಕೆ ಕಂಡಿದೆ.

ಎಪ್ರಿಲ್ 17-23ರವರೆಗೆ ಒಟ್ಟು 82 ಡೆಂಘಿ ಕೇಸ್ ಪತ್ತೆಯಾಗಿದ್ರೆ ಇದರಲ್ಲಿ ಸಿಂಹಪಾಲು ಬೆಂಗಳೂರಿನಲ್ಲಿ 49 ಕೇಸ್ ಪತ್ತೆಯಾಗಿದೆ.

ಇನ್ನು ಎಪ್ರಿಲ್ 10 ರಿಂದ 16 ರವೆರೆಗೆ ರಾಜ್ಯದಲ್ಲಿ 94 ಕೇಸ್ ಪತ್ತೆಯಾಗಿದ್ರೆ ಎಪ್ರಿಲ್ 3 ರಿಂದ 9 ರವರೆಗೆ 80 ಕೇಸ್ ಪತ್ತೆಯಾಗಿದೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಅತಿ ಹೆಚ್ಚು ಡೆಂಘಿ ಜ್ವರ ಕಾಣಿಸಿಕೊಳ್ಳುತ್ತಿದ್ದು ಆರೋಗ್ಯ ಇಲಾಖೆ ಕಟ್ಟೆಚ್ಚರ ವಹಿಸಿದೆ.

ಈ ಹಿನ್ನಲೆ ವೈದ್ಯರು ಎಚ್ಚರಿಕೆ ವಹಿಸುವಂತೆ ಸಲಹೆ ನೀಡಿದ್ದು ಗುಣಲಕ್ಷಣಗಳಿರುವರಿಗೆ ಟೆಸ್ಟಿಂಗ್ ಮಾಡಿಸಿಕೊಳ್ಳಲು ಸೂಚನೆ ನೀಡಲಾಗಿದೆ. ಸಾರ್ವಜನಿಕರು ಆದಷ್ಟು ಶುಚಿತ್ವ ಕಾಪಾಡಿಕೊಳ್ಳುವ ಅಗತ್ಯವಿದೆ.

ಹಿಂದಿನ ಲೇಖನಬೋಟ್ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ: 40 ದೋಣಿಗಳು ಬೆಂಕಿಗಾಹುತಿ
ಮುಂದಿನ ಲೇಖನಮುಸ್ಲಿಂ ಮೀಸಲಾತಿ ಮರಳಲು ಬಿಜೆಪಿ ಬಿಡುವುದಿಲ್ಲ: ಅಮಿತ್ ಶಾ