ಮನೆ ಜ್ಯೋತಿಷ್ಯ ಡೆಂಗ್ಯೂ ಜ್ವರ :  ಗ್ರೂಪ್ ಬಿ

ಡೆಂಗ್ಯೂ ಜ್ವರ :  ಗ್ರೂಪ್ ಬಿ

0

ಚರ್ಮದ ಗುಳ್ಳೆಗಳು ಅಥವಾ ಪ್ಯಾಚಸ್ (ಮಚ್ಚೆ) ಆಗುವುದು.

Join Our Whatsapp Group

ಮೂಗು ಅಥವಾ ದವಡೆಯಿಂದ ರಕ್ತಸ್ರಾವ

ರಕ್ತವಾಂತಿ, ಕಪ್ಪಾದ ಮಲವಿಸರ್ಜನೆ, ತೀವ್ರವಾದ ಋತುಸ್ರಾವ.

ತೀವ್ರವಾದ ವಾಂತಿ, ಆಹಾರ ಸೇವನೆ ಸಾಧ್ಯವಿಲ್ಲದ ಪರಿಸ್ಥಿತಿ.

ಅತಿಯಾದ ಕೊಬ್ಬೊಟ್ಟೆ ನೋವು.

ತಲೆ ಸುತ್ತುವುದು, ಪ್ರಜ್ಞಾಹೀನರಾಗುವುದು ಅಥವಾ ಗೊಂದಲ ಪಡುವುದು.

ಅಂಗೈ, ಅಂಗಾಲು ಬಿಳುಚಿ ತಣ್ಣಗಾಗುವುದು.

ಉಸಿರಾಡಲು ಕಷ್ಟ ಅಥವಾ ತೂರಾಡುವಂತಾಗುವುದು.

4-6 ಗಂಟೆಗಳಾದರೂ ಮೂತ್ರ ವಿಸರ್ಜನೆ ಇಲ್ಲದಿದ್ದರೆ ರೋಗಿಯನ್ನು ಶೀಘ್ರವಾಗಿ ಆಸ್ಪತ್ರೆಗೆ ದಾಖಲಿಸ ಬೇಕು. ಈ ಹಂತದಲ್ಲಿ ರೋಗಿಗೆ ಡ್ರಿಪ್ ಹಾಕಿ, ರಕ್ತಕಣಗಳ ಸಂಖ್ಯೆಗಳ ಮೇಲೆ ಗಮನ ನೀಡುತ್ತಾರೆ.

ಗ್ರೂಪ್ ಸಿ-

         ಇವರು ತುರ್ತು ನಿಗಾಘಟಕದಲ್ಲಿರುವವರು ರಕ್ತ ಮತ್ತು ಪ್ಲೇಟ್ ಲೆಟ್ ನೀಡಿ ರೋಗವನ್ನು ಅಂಕೆ ಯಲ್ಲಿ ತರುತ್ತಾರೆ. ದೇಹದಲ್ಲಿ ಆಮ್ಮಿಯತೆಯನ್ನು ಅಸಮತೋಲನವನ್ನು ಸರಿಪಡಿಸುತ್ತಾರೆ.

48 ಗಂಟೆಗಳವರೆಗೆ ಜ್ವರ ಬರದೆ ಇದ್ದರೆ…

ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ ಕಂಡು ಬಂದರೆ…

 ಉಪಯೋಗ ಡ್ರಿಪ್ಸ್ ಇಲ್ಲದೆ ಆರಾಮವಾಗಿದ್ದರೆ…

* ಪ್ಲೇಟ್ ಲೆಟ್ ಸಂಖ್ಯೆ 50,000ಕ್ಕೂ ಹೆಚ್ಚಾಗಿದ್ದರೆ ಮಾತ್ರ ಆಸ್ಪತ್ರೆಯಿಂದ ಮನೆಗೆ ಕಳಿಸುತ್ತಾರೆ.

ರಕ್ತದ ತಟ್ಟೆಗಳು (ಚೂರು)

ಈ ರಕ್ತ ತಟ್ಟೆಗಳು ಬಹಳ ಸೂಕ್ಷ್ಮವಾದ ಓವಲ್ ಅಥವಾ ವೃತ್ತಾಕಾರವಾಗಿ ಉತ್ಪಾದನೆ ಆಗುತ್ತದೆ.

ಜೀವಕಣಗಳಾಗದೆ ರಕ್ತದಲ್ಲಿ ತೇಲುತ್ತಿರುತ್ತದೆ. ಪ್ರೌಢಾವಸ್ಥೆಯಲ್ಲಿರುವ ಮನುಷ್ಯನಲ್ಲಿ ಇದು ಸಾಮಾನ್ಯವಾಗಿ ಒಂದು ಘನ ಮಿಲಿಮೀಟರ್ ನಲ್ಲಿ 2 ರಿಂದ 4 ಲಕ್ಷವಿರುತ್ತದೆ. ಈ ತಟ್ಟೆಗಳು ಕೆಂಪು ಮೂಳೆಯ ಮಜ್ಜೆಯಲ್ಲಿ ಇರುವ ಒಂದು ದೈತ್ಯ ಕೋಶದ ಕಣಗಳಿಂದ (Megakarayocytes) ಬೇರ್ಪಡುತ್ತದೆ ಮತ್ತು ರಕ್ತದಲ್ಲಿ ದೊಡ್ಡ ಕೆಂಪುರಕ್ತಕಣಗಳು ಚೂರಾಗಿ ಪ್ಲೇಟ್ ಲೆಟ್ ಗಳಾಗುತ್ತವೆ. ಪ್ರತಿಯೊಂದು ತಟ್ಟೆಯು ಸೂಕ್ಷ್ಮಪೂರೆ ಯಿಂದ ಆವೃತ್ತವಾಗಿದೆ. ರಕ್ತದಲ್ಲಿ ಇದರ ಕೆಲಸ ರಕ್ತನಾಳ ಹರಿದು ಗಾಯವಾದಾಗ ರಕ್ತವು ನಾಳಗಳಿಂದ ಹರಿದು ಹೊರಗೆ ಹೋಗದಂತೆ ಹೊಡೆದ ನಾಳಗಳ ಸ್ಥಳಗಳಲ್ಲಿ ತನ್ನ ತಟ್ಟೆಗಳನ್ನು ಅಡ್ಡವಾಗಿಟ್ಟು ರಕ್ತವನ್ನು ಹೊರಹೋಗದಂತೆ ಒಂದು ರಾಸಾಯನಿಕ ದ್ರವ್ಯವನ್ನು ಉತ್ಪತ್ತಿ ಮಾಡಿ, ತಡೆಯುವ ಕೆಲಸವಾಗಿರುತ್ತದೆ. ಇದನ್ನು ಹೆಪ್ಪುಗಟ್ಟಿಸುವಿಕೆ (Clotting) ಎನ್ನುತ್ತೇವೆ ಇದರ ಆಯುಷ್ಯ ಕೇವಲ 3 ರಿಂದ 5 ದಿನಗಳು ಇದು ಗ್ರಂಥಿಯಲ್ಲಿ ನಾಶವಾಗುತ್ತದೆ (Spleen), ಮತ್ತೆ ಕೆಂಪು ಮೂಳೆಯ ಮಜ್ಜೆಯಿಂದ ಉತ್ಪತ್ತಿಯಾಗುತ್ತಾ ರಕ್ತ ಸೇರುತ್ತಿರುತ್ತದೆ. ಇದು ದಿನ ಒಂದಕ್ಕೆ 200 ಶತಕೋಟಿಯಷ್ಟು ಉತ್ಪತ್ತಿಯಾಗುತ್ತದೆ. ಕಿರು ರಕ್ತನಾಳ ಗಳಲ್ಲಿ ರಕ್ತಸ್ರಾವವಾಗುವುದನ್ನು ತಪ್ಪಿಸುವ ಈ ಪ್ಲೇಟ್ ಲೆಟ್ ಗಳು ಡೆಂಗ್ಯೂ ಜ್ವರದಲ್ಲಿ ತೀರಾ ಘಾಸಿಗೊಳ್ಳುತ್ತದೆ. ಇವುಗಳ ಸಂಖ್ಯೆ ಕುಸಿಯತೊಡಗುತ್ತಾ ರಕ್ತಸ್ರಾವ ಮತ್ತಷ್ಟು ಹೆಚ್ಚಾಗುವಂತೆ ಮಾಡುತ್ತದೆ. ರಕ್ತ ಗಟ್ಟಿ ಆಗತೊಡಗುತ್ತದೆ. ಪ್ಲಾಸ್ಟಾ ದ್ರವ ಕಡಿಮೆಯಾಗಿ ಅದರಲ್ಲಿರುವ ಪ್ರೋಟೀನ್ ಅಂಶಗಳು ಕಡಿಮೆ ಆಗುತ್ತಾ ಹೆಪ್ಪುಗಟ್ಟುವ ಕ್ರಿಯೆ ಕಡಿಮೆಯಾಗುತ್ತದೆ. ಇದರಿಂದ ಎಲ್ಲಾ ರಕ್ತನಾಳಗಳಲ್ಲಿ ರಕ್ತಸ್ರಾವವಾಗತೊಡಗುತ್ತದೆ.

ಚಿಕಿತ್ಸಾ ಸಂತ

       ಈ ಜ್ವರಕ್ಕೆ ಖಚಿತವಾದ ಚುಚ್ಚುಮದ್ದು ಅಥವಾ ಲಸಿಕೆಯಿಲ್ಲ, ರೋಗ ಲಕ್ಷಣಗಳು, ರೋಗಿಯ ಸ್ಥಿತಿಗತಿಗೆ ಅನುಸಾರವಾಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಾರೆ. ಹೆಚ್ಚು ಪ್ರಮಾಣದಲ್ಲಿ ನೀರು ಶರಬತ್ ಮುಂತಾದವುಗಳನ್ನು ಕುಡಿಯಲು ನೀಡುತ್ತಾರೆ. ತೀವ್ರ ನಿಗಾಘಟಕದಲ್ಲಿಟ್ಟು ರಕ್ತ ಪೂರ್ಣ (ಬ್ಲಡ್ ಟ್ರಾನ್ಸ್‌ಫರ್) ಕ್ರಿಯೆಯ ಮೂಲಕ ಪ್ಲೇಟ್ ಲೆಟ್ ಗಳನ್ನು ಪೂರ್ಣವಾಗಿ ನೀಡುತ್ತಾರೆ. ಒಂದು ಬ್ಯಾಗಿನ ಪೂರ್ಣದಲ್ಲಿ 10,000 ಪ್ಲೇಟ್ಲೆಟ್ಸ್ ಹೆಚ್ಚಾಗುವುದೆಂದು ತಿಳಿದರೂ ಪ್ಲೇಟ್‌ಲೆಟ್ ಜೀವಿತಾವಧಿ ಕಡಿಮೆಯಾಗಿರುವುದರಿಂದ ಮತ್ತೆ ಮತ್ತೆ ನೀಡಬೇಕಾಗುತ್ತದೆ.

ಅಪಾಯಕಾರಿ ತೊಂದರೆಗಳು

        ಮೊದಲನೆಯ ಹಂತದಲ್ಲಿ ಎಲ್ಲಾ ವೈರಲ್ ಜ್ವರಗಳಂತೆ ಕಂಡರೂ ಎರಡನೇ ಹಂತದಲ್ಲಿ ಕಿರು ರಕ್ತನಾಳಗಳಲ್ಲಿ ರಕ್ತಸ್ರಾವ ಹೆಚ್ಚಿ ಚರ್ಮದಡಿಯಲ್ಲಿ ಕೆಂಪು ಕಲೆಗಳು ಪಟ್ಟಿಯಂತೆ ಕಾಣತೊಡಗುತ್ತದೆ ಅದೇ ವೇಳೆಗೆ ದೇಹದ ಇತರೆ ಅಂಗಗಳಲ್ಲೂ ರಕ್ತಸ್ರಾದ ಕಾಣಿಸಿಕೊಂಡು, ರಕ್ತ ಹೆಪ್ಪುಗಟ್ಟುವ ಕ್ರಿಯೆ ನಿಧಾನವಾಗುವುದರಿಂದ ಒಳ ರಕ್ತಸ್ರಾವವು ಹೆಚ್ಚುತ್ತದೆ ಪರಿಣಾಮ – ಪ್ಲೇಟ್ ಲೆಟ್ಸ್ ಸಂಖ್ಯೆ ಇಳಿಮುಖ ಆಗತೊಡಗುತ್ತದೆ. ಇದಕ್ಕೆ ರಕ್ತಸ್ರಾವದ ಜ್ವರದ ಹಂತ (ಹೆಮೋರೋಜಿಕ್ ಫೀವರ್ ಸ್ಟೇಜ್) ಎನ್ನುತ್ತಾರೆ. ನಂತರದ್ದು ‘ಡೆಂಗ್ಯೂ ಫೀವರ್ ಶಾಕ್’ ಎಂಬ ಹಂತ ಈ ಹಂತದಲ್ಲಿ ಶ್ವಾಸಕೋಶಗಳಲ್ಲಾಗುವ ದ್ರವದ ಸಂಗ್ರಹದಿಂದ ಉಸಿರಾಟದ ತೊಂದರೆಯಾಗುವುದಲ್ಲದೆ, ಮೆದುಳು, ಜಠರ, ಮೂತ್ರಪಿಂಡಗಳಲ್ಲೂ ರಕ್ತಸ್ರಾವ ಆರಂಭವಾಗುತ್ತದೆ. ಮೂಗಿನಿಂದ ರಕ್ತಸ್ರಾವ ಕಾಣಿಸಿಕೊಳ್ಳುತ್ತದೆ. ರೋಗಿಯು ಪ್ರಜ್ಞೆ ಕಳೆದು ಕೊಳ್ಳುತ್ತಾನೆ. ಇದು ಅತ್ಯಂತ ಅಪಾಯಕಾರಿ ಹಂತ

 ನಿಯಂತ್ರಣ

          ಈ ಕಾಯಿಲೆ ಬರದಂತೆ ತಡೆಯಲು ಸದ್ಯಕ್ಕೆ ಯಾವುದೇ ಲಸಿಕೆಯಿಲ್ಲ. ಹಾಗಾಗಿ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸುವುದೇ ಉತ್ತಮ ಸೊಳ್ಳೆಯ ನಿಯಂತ್ರಣದಿಂದ ಮಾತ್ರ ರೋಗ ಪ್ರಸಾರವನ್ನು ತಡೆಯಲು ಸಾಧ್ಯ ಮಳೆಗಾಲದಲ್ಲಿ ಹಾವಳಿ ಹೆಚ್ಚು ಶುದ್ದ ನೀರು ಅಥವಾ ಕಲುಷಿತಗೊಳ್ಳದ ನೀರಿನಲ್ಲಿ ಈಡಿಸ್ ಸೊಳ್ಳೆ ಸಂತಾನ ಉತ್ಪತ್ತಿ ಮಾಡುತ್ತದೆ ಮನೆಯಲ್ಲಿ ಆಥವಾ ತೋಟದಲ್ಲಿ ಸಸಿಗಳ ಮಧ್ಯೆ, ನೀರಿನ ತೊಟ್ಟಿ ಸಣ್ಣ ಚರಂಡಿ, ಏರ್ ಕೂಲರ್ಗಗಳು ಸಿಮೆಂಟ್ ತೊಟ್ಟಿಯಲ್ಲಿ ಈ ಸೊಳ್ಳೆಗಳು ಮೊಟ್ಟೆ ಇಟ್ಟು ಎಂಟು ಹತ್ತು ದಿನದಲ್ಲಿಯೇ ಮರಿ ಮಾಡುತ್ತವೆ. ಮನೆಯ ಹೊರಗಿಗಿಂತಲೂ ಮನೆಯ ಒಳಗೆ ಸಂಗ್ರಹಿಸಿದ ನೀರಿನಲ್ಲಿ ಅಧಿಕವಾಗಿ ಸೊಳ್ಳೆ ಬೆಳೆಯುತ್ತದೆ.

 ಪರಿಹಾರಗಳು

ಗೋಧಿ, ಹುಲ್ಲಿನ ರಸ – ದೇಹದಲ್ಲಿ ಉತ್ಪತ್ತಿಯಾಗುವ ಕೆಂಪು ಆಥವಾ ಬಿಳಿ ರಕ್ತಕಣಗಳು ಇದರ ಸೇವನೆಯಿಂದ ಹೆಚ್ಚಾಗುತ್ತದೆ.

 ಮುದ್ರೆಗಳು – ಪೃಥ್ವಿಮುದ್ರೆ – 10 ನಿಮಿಷ

 ಜ್ಯೋತಿಷ್ಯದ ರೀತಿ

ಜ್ವರಕ್ಕೆ ಕಾರಕಗ್ರಹಗಳು – ಗುರು, ಕುಜ.

ರಕ್ತಕಾರಕ – ಕುಜ, ಅನಂತರ ಚಂದ್ರ

ಬಿಳಿ ರಕ್ತಕಣಕಾರಕ – ಚಂದ್ರ

ಕೆಂಪು ರಕ್ತಕಣಗಳಿಗೆ ಕಾರಕ – ಸೂರ್ಯ.

ಕ್ರಿಮಿಕೀಟಗಳಕಾರಕ, ವಿಷಕ್ರಿಮಿಕಾರಕ – ರಾಹು.

ಸೋಂಕು, ವೈರಸ್‌ ವ್ಯಾಧಿಗೆ – ಕುಜ + ರಾಹು.