ಮನೆ ಆರೋಗ್ಯ ಹಲ್ಲಿನ ಸಮಸ್ಯೆಗಳು

ಹಲ್ಲಿನ ಸಮಸ್ಯೆಗಳು

0

ಹಲ್ಲಿನ ಸಂರಕ್ಷಣೆಯ ಬಗ್ಗೆ ಸುತ್ತು ತಿಳುವಳಿಕೆ ಅಗತ್ಯ. ಮಕ್ಕಳಲ್ಲಿ ಹಲ್ಲಿನ ವಿಷಯದಲ್ಲಿ ಎಚ್ಚರವಹಿಸದಿದ್ದರೆ, ಶಾಶ್ವತವಾದ ಹಲ್ಲುಗಳು ಕೂಡ ಕ್ರಮಬದ್ದವಾಗಿ ಬರುವುದಿಲ್ಲ. ಹಲ್ಲುಗಳ ವರಸೆ ಅಂದವಾಗಿರುವುದಿಲ್ಲ. ಮಕ್ಕಳ ಹಲ್ಲುಗಳ ಬಗ್ಗೆ ತಾಯಿ ತಂದೆಯರು ತೋರಿಸುವ ನಿರ್ಲಕ್ಷದಿಂದಾಗಿ ಹುಳುಕು ಹಲ್ಲುಗಳ ಸಮಸ್ಯೆ ತಲೆ ದೂರುತ್ತದೆ.

ಮಕ್ಕಳಿಗೆ ಹಲ್ಲು ಬಂದಾಗ ಅವುಗಳು ಶುಚಿಗೊಳಿಸುವುದರ ಕಡೆ ಗಮನ ಹರಿಸಬೇಕು. ಮಕ್ಕಳಿಗೆ ಬ್ರಷ್ ಮಾಡುವುದನ್ನು ಕಲಿಸಬೇಕು.

ದಂತ ಸಂರಕ್ಷಣೆ :-

ಕೆಲವು ತಾಯಂದಿರು ಹಾಲಿನ ಸೀಸೆಯನ್ನು ಯಾವಾಗಲೂ ಮಕ್ಕಳ ಬಾಯಿಯಲ್ಲಿಟ್ಟಿರುತ್ತಾರೆ. ಹಾಲಿಗೆ ಸಕ್ಕರೆಯನ್ನು ಕೂಡ ಹೆಚ್ಚಾಗಿ ಬೆರೆಸಿರುತ್ತಾರೆ. ಬಾಯಿ ಯಾವಾಗಲೂ ಹಾಲು ಮತ್ತು ಸಕ್ಕರೆಯಿಂದ ಜಿಗುಟಾಗಿದ್ದು, ರೋಗಾಣುಗಳ ಮುಕ್ತ ಪ್ರವೇಶಕ್ಕೆ ಅವಕಾಶವಾಗುತ್ತದೆ. ಈ ರೋಗಾಣುಗಳು ಮಕ್ಕಳ ಹಾಲು ಹಲ್ಲುಗಳನ್ನು ಟೊಳ್ಳಾಗಿಸುತ್ತದೆ.  ಸಿಹಿ ದ್ರವ ಅಥವಾ ಸಿಹಿ ತಿಂಡಿಗಳು ಕೊಟ್ಟಾಗ ಹಿಂದೆಯೇ  ನೀರಿನಿಂದ ಬಾಯಿಯನ್ನು ತೊಳೆದು ಉಗಿಸಬೇಕು. ಹಲ್ಲು ಹುಳುಕಾಗುವುದು ಕೂಡ ಹೀಗೆಯೇ. ಹುಳಿ ಹಣ್ಣುಗಳನ್ನು ತಿಂದಾದ ಮೇಲೆ ಹಲ್ಲುಗಳನ್ನು ಬೆರಳಿನಿಂದ ಉಜ್ಜಿ ತೊಳೆಯಬೇಕು. ಇಲ್ಲದಿದ್ದರೆ, ಹುಳಿಯಲ್ಲಿರುವ ಆಮ್ಲಗಳು ಹಲ್ಲನ್ನು ಶಿಥಿಲಗೊಳಿಸುತ್ತದೆ. ಎನಾಮಲ್ ಕೋಟಿಂಗ್  ಕಳಚಿ ಹೋಗುತ್ತದೆ.

ಮಕ್ಕಳಿಗೆ ಚಾಕ್ಲೇಟ್, ಕೋಲ್ಡ್ ಡ್ರಿಂಕ್ಸ್, ಹಣ್ಣಿನ ರಸಗಳನ್ನು ಹಲವಾರು ಬಾರಿ ತೆಗೆದುಕೊಳ್ಳುವ ರೂಢಿಯಲ್ಲಿರುತ್ತದೆ.. ಪ್ರತಿ ಬಾರಿಯೂ ಬಾಯಿಯನ್ನು ಶುಭ್ರಗೊಳಿಸುವ ಕ್ರಮವನ್ನು ಕಲಿಸಬೇಕು. ಸಿಹಿ ಮತ್ತು ಹುಳಿಯಿಂದ ಹಲ್ಲು ಹುಳುಕ ಆಗುತ್ತದೆ ಎಂಬ ತಿಳುವಳಿಕೆ ಅವರಿಗೆ ಮೂಡಿಸಬೇಕು.

ಹುಳುಕು ಹಲ್ಲು :-

ಹಲ್ಲು ಹುಳುಕಾದಾಗ ವೈದ್ಯರಿಗೆ ತೋರಿಸಿ ಚಿಕಿತ್ಸೆ ಮಾಡಿಸಬೇಕು.  ಹಾಲು ಹಲ್ಲುಗಳನ್ನು ಹುಳುಕಾದರೂ ಕೂಡ ಎಚ್ಚರ ವಹಿಸಬೇಕು. ಬಿದ್ದು ಹೋಗುತ್ತವೆ ಎಂದು ನಿರ್ಲಕ್ಷಿಸಬಾರದು.

ಕೆಲ ಮಕ್ಕಳಿಗೆ ಹುಟ್ಟಿದಾಗಲೇ ಒಂದೆರಡು ಹಲ್ಲುಗಳಿರುತ್ತದೆ.  ಅವನ್ನು ಹಾಗೆಯೇ ಬಿಡದೆ ತೆಗೆಸಿಬಿಡಬೇಕು. ಇವುಗಳನ್ನು ಹಾಗೆ ಬಿಟ್ಟರೆ ಉಳಿದ ಹಲ್ಲುಗಳು ಕ್ರಮವಾಗಿ ಬರಲು ತೊಂದರೆಯಾಗುತ್ತದೆ….

ಹಲ್ಲುಗಳು  ಹುಟ್ಟುವಾಗ ಮಕ್ಕಳಿಗೆ ಭೇದಿಯಾಗುತ್ತದೆ ಎಂಬ ನಂಬಿಕೆ ಇದೆ ಹಾಲು ಹಲ್ಲು ಬರುವುದಕ್ಕೂ ಭೇಧಿಯಾಗುವುದಕ್ಕೂ ಯಾವುದೇ ಸಂಬಂಧವಿಲ್ಲ.

ಹೊಸದಾಗಿ ಹಲ್ಲು ಮೂಡುತ್ತಿರುವಾಗ :-

ಹಾಲುಹಲ್ಲು ಬರುವಾಗ ವಸಡುಗಳಲ್ಲಿ ನವೆಯಿರುತ್ತದೆ. ಹಾಗಾಗಿ ಸಿಕ್ಕಿದನ್ನೆಲ್ಲಾ ಬಾಯಿಗಿಟ್ಟುಕೊಳ್ಳುವ ಹಂಬಲ ಮಕ್ಕಳಿಗಾಗುತ್ತದೆ. ಇವು ಶುಭ್ರವಾಗಿಲ್ಲದಾಗ, ಅದರಲ್ಲಿರುವ ಬ್ಯಾಕ್ಟೀರಿಯಾ ರೋಗಾಣುಗಳು ಭೇಧಿಯಾಗಲು ಕಾರಣವಾಗುತ್ತದೆ. ಮಕ್ಕಳಿಗೆ ಹಾಲು ಹಲ್ಲು ಬರುವ ಸಮಯದಲ್ಲಿ ಕೊಡುವ ಆಟದ ವಸ್ತುಗಳು ಶುಚಿಯಾಗಿರಬೇಕು.