ಮಂಡ್ಯ: ಕಾವೇರಿ ಜಲಾನಯನ ಪ್ರದೇಶದಲ್ಲಿ ಮುಂಗಾರು ಮಳೆ ಕ್ಷೀಣವಾಗಿದ್ದು, ಕೆ.ಆರ್.ಎಸ್ ಜಲಾಶಯಕ್ಕೆ ಒಳ ಹರಿವಿನ ಪ್ರಮಾಣ ಇಳಿಕೆಯಾಗಿದೆ.
ಕೆ.ಆರ್.ಎಸ್ ಜಲಾಶಯದ ನೀರಿನ ಮಟ್ಟ113 ಅಡಿ ಇದ್ದು, ಒಳಹರಿವಿನ ನೀರಿನ ಪ್ರಮಾಣ 4 ಸಾವಿರ ಕ್ಯೂಸೆಕ್ ಇದೆ.
ಡ್ಯಾಂ ಭರ್ತಿಯಾಗಲಿದೆ ಎಂದು ಬಿತ್ತನೆ ಕಾರ್ಯ ಕೈಗೊಂಡಿದ್ದ ಜಿಲ್ಲೆಯ ರೈತರಲ್ಲಿ ಮತ್ತೆ ಆತಂಕ ಶುರುವಾಗಿದ್ದು, ಮಳೆ ಕೈ ಕೊಟ್ಟಿದ್ದರಿಂದ ಡ್ಯಾಂ ಭರ್ತಿ ಯಾಗುವ ಭರವಸೆ ಕ್ಷೀಣಿಸಿದೆ. ಇನ್ನು ಕೆ.ಆರ್.ಎಸ್ ಡ್ಯಾಂ ಭರ್ತಿಯಾಗಲು 11 ಅಡಿ ಬಾಕಿಯಿದೆ.
ಕೆ.ಆರ್.ಎಸ್ ಡ್ಯಾಂ ನೀರಿನ ಮಟ್ಟ
ಗರಿಷ್ಟ ಮಟ್ಟ:124.80 ಅಡಿ
ನೀರಿನ ಮಟ್ಟ: 113.46 ಅಡಿ
ಒಳಹರಿವು :4027 ಕ್ಯೂಸೆಕ್
ಹೊರಹರಿವು: 3284 ಕ್ಯೂಸೆಕ್
ಪ್ರಸ್ತುತ ಸಂಗ್ರಹ: 35.347TMC
Saval TV on YouTube