ಮನೆ ರಾಷ್ಟ್ರೀಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಚಂಡಮಾರುತ ಸಾಧ್ಯತೆ

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಚಂಡಮಾರುತ ಸಾಧ್ಯತೆ

0

ನವದೆಹಲಿ: ಆಗ್ನೆಯ ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದಾಗಿ ಮೇ 6ರ ಸುಮಾರಿಗೆ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಮುನ್ನೆಚ್ಚರಿಕೆ ನೀಡಿದೆ.

Join Our Whatsapp Group

ಚಂಡಮಾರುತ ರಚನೆಯಾಗುವ ಕುರಿತು ಅಮೆರಿಕ (ಜಿಎಫ್’ಎಸ್) ಮತ್ತು ಯುರೋಪ್ ಕೇಂದ್ರ (ಇಸಿಎಂಡಬ್ಲ್ಯುಎಫ್) ವರದಿ ಮಾಡಿದ ಬೆನ್ನಲ್ಲೇ ಐಎಂಡಿ ಎಚ್ಚರಿಕೆ ನೀಡಿದೆ.

ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತ ರೂಪಗೊಳ್ಳುವ ಸಾಧ್ಯತೆಯಿದೆ. ನಾವು ನಿಗಾ ವಹಿಸುತ್ತಿದ್ದೇವೆ. ನಿರಂತರ ಮಾಹಿತಿ ನೀಡಲಾಗುವುದು ಎಂದು ಐಎಂಡಿ ನಿರ್ದೇಶಕ ಮೃತ್ಯುಂಜಯ ಮಹಾಪಾತ್ರ ತಿಳಿಸಿದ್ದಾರೆ.

ಭಾರತದ ಸಾಗರದಲ್ಲಿ ಏಪ್ರಿಲ್ನಲ್ಲಿ ಯಾವುದೇ ಚಂಡಮಾರುತ ಉಂಟಾಗಿಲ್ಲ. ಈ ಮೂಲಕ ಸತತ ನಾಲ್ಕನೇ ವರ್ಷವೂ ಏಪ್ರಿಲ್ ನಲ್ಲಿ ಚಂಡಮಾರುತ ಕಂಡುಬಂದಿರಲಿಲ್ಲ.

ಹಿಂದಿನ ಲೇಖನಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಭಜರಂಗದಳ ನಿಷೇಧ: ರಾಜ್ಯಾದ್ಯಂತ ತೀವ್ರ ಆಕ್ರೋಶ
ಮುಂದಿನ ಲೇಖನಗಲ್ಲಿಗೇರಿಸುವುದು ನೋವುರಹಿತ ವಿಧಾನವೇ ಎಂಬುದನ್ನು ಪರಿಶೀಲಿಸಲು ಶೀಘ್ರ ಸಮಿತಿ ರಚನೆ: ಕೇಂದ್ರದ ಮಾಹಿತಿ