ಮನೆ ರಾಜ್ಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಣ್ಣೀರಿಟ್ಟ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ

ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಣ್ಣೀರಿಟ್ಟ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ

0

ಹಾವೇರಿ : ಜಿಲ್ಲಾ ಪಂಚಾಯತ್​​ ಪ್ರಗತಿ ಪರಿಶೀಲನಾ ಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ ಕಣ್ಣೀರಿಟ್ಟ ಪ್ರಸಂಗ ನಡೆದಿದೆ. ಸ್ವತಂತ್ರಪೂರ್ವದಿಂದಲೂ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡು ಕೆಲವು ಗ್ರಾಮ ಇವೆ.

ಅವು ಮೀಸಲು ಅರಣ್ಯ ಪ್ರದೇಶದ ವ್ಯಾಪ್ತಿ ಬರುತ್ತವೆ ಎಂದು ಜನರ ಮೇಲೆ ಎಫ್‌ಐಆರ್‌ ದಾಖಲು ಮಾಡಿ ಜಾಗೆ ಖಾಲಿ ಮಾಡಿಸಿದ್ದಾರೆ. ಹಾವೇರಿಯ ಗುತ್ತಲ ತಾಂಡಾ, ಕರೂರು ಗ್ರಾಮ ನಿವಾಸಿಗಳನ್ನ ವಕ್ಕಲು ಎಬ್ಬಿಸಿದ್ದಾರೆ.

ಸರ್ಕಾರವೇ ಮೂರು ದಶಕಗಳಿಂದ ಮನೆ ಮತ್ತು ಉಳುಮೆಗೆ ಅವಕಾಶ ಮಾಡಿದೆ. ಈಗ ಅರಣ್ಯ ಇಲಾಖೆ ಸಿಬ್ಬಂದಿ ಜಾಗ ಮೀಸಲು ಅರಣ್ಯಕ್ಕೆ ಬರುತ್ತೆ ಎಂದು ನೋಟೀಸ್ ನೀಡಿದ್ದಾರೆ. ಐದು ವರ್ಷಗಳಿಂದ ಕೇಂದ್ರ ಸರ್ಕಾರದ ಮಂತ್ರಿ ಮತ್ತು ಸಂಸದರನ್ನ ನಾನು ಭೇಟಿ ಮಾಡಿದ್ದಾನೆ.

ಎಲ್ಲಿಯೋ ಎಸಿ ಕಚೇರಿಯಲ್ಲಿ ಕೂತು ಆದೇಶ ಮಾಡುತ್ತಾರೆ. ಹೀಗಾದರೆ ಸಾವಿರಾರು ಬಡವರು ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸುತ್ತಲೇ ಅವರು ಭಾವುಕರಾಗಿದ್ದಾರೆ. ಅಲ್ಲದೆ ಈ ಸಂಬಂಧ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದ್ದಾರೆ.