ಮನೆ ಕಾನೂನು ಕರ್ತವ್ಯ ಲೋಪ: ತುಮಕೂರಿನ ಐವರು ಪೊಲೀಸರ ಅಮಾನತು

ಕರ್ತವ್ಯ ಲೋಪ: ತುಮಕೂರಿನ ಐವರು ಪೊಲೀಸರ ಅಮಾನತು

0

ತುಮಕೂರು: ಕರ್ತವ್ಯ ಲೋಪದ ಆರೋಪದ ಮೇಲೆ ಮೂವರು ಪಿಎಸ್ ಐ ಸೇರಿ ಐವರು ಪೊಲೀಸರನ್ನು ತುಮಕೂರು ಎಸ್ಪಿ ಕೆ.ವಿ.ಅಶೋಕ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ತುರುವೇಕೆರೆ ಠಾಣಾ ಪಿಎಸ್ಐ ಗಳಾದ ಗಣೇಶ್ ಹಾಗೂ ರಾಮ ಚಂದ್ರ, ಹೆಡ್‌ ಕಾನ್ ಸ್ಟೇಬಲ್  ರಘುನಂದನ್, ಬಡವನಹಳ್ಳಿ ಠಾಣಾ ಪಿಎಸ್ ಐ ನಾಗರಾಜು, ಎಎಸ್‌ ಐ ಸುರೇಶ್ ಅಮಾನತಾಗಿರುವವರು.

ಮಹಿಳೆಯೊಬ್ಬರು ನಾಪತ್ತೆ ಆದ ಪ್ರಕರಣದಲ್ಲಿ ದೂರು ದಾಖಲಿಸಿಕೊಳ್ಳದೇ ಕರ್ತವ್ಯ ಲೋಪ ಎಸಗಿದ್ದಾರೆ.

ಇನ್ನೊಂದು ಪ್ರಕರಣದಲ್ಲಿ ದಲಿತರ ಮೇಲೆ ಸವರ್ಣಿಯರು ಹಲ್ಲೆ ಮಾಡಿದ್ದ ಆರೋಪದ ದೂರು ದಾಖಲಿಸದೇ ನಿರ್ಲಕ್ಷ್ಯವಹಿಸಿದ್ದಾರೆ ಎಂದು ಆರೋಪಿಸಲಾಗಿತ್ತು.

ಈ ಹಿನ್ನೆಲೆಯಲ್ಲಿ ಐವರು ಪೊಲೀಸ್ ಸಿಬ್ಬಂದಿಯನ್ನು ಅಮಾನತುಗೊಳಿಸಿ ಎಸ್ಪಿ ಅಶೋಕ ಆದೇಶ ಹೊರಡಿಸಿದ್ದಾರೆ.