ಮನೆ ಕಾನೂನು ಸೋಫಿಯಾ ಕುರಿತಾಗಿ ಅವಹೇಳನಕಾರಿ ಹೇಳಿಕೆ : ವಿಜಯ್ ಶಾ ವಿರುದ್ಧ ಬೆಳಗಾವಿಯಲ್ಲಿ ಎಫ್ಐಆರ್ ದಾಖಲು!

ಸೋಫಿಯಾ ಕುರಿತಾಗಿ ಅವಹೇಳನಕಾರಿ ಹೇಳಿಕೆ : ವಿಜಯ್ ಶಾ ವಿರುದ್ಧ ಬೆಳಗಾವಿಯಲ್ಲಿ ಎಫ್ಐಆರ್ ದಾಖಲು!

0

ಬೆಳಗಾವಿ: ಮಧ್ಯಪ್ರದೇಶದ ಕ್ಯಾಬಿನೆಟ್ ಸಚಿವ ಕುನ್ವರ್ ವಿಜಯ್ ಶಾ ಅವರು ಮಹಿಳಾ ಸೇನಾಧಿಕಾರಿ ಕರ್ನಲ್ ಸೋಫಿಯಾ ಖುರೇಷಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದು, ಅವರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಇಂದು ಅವರು ಎಫ್ಐಆರ್ ರದ್ದು ಕೋರಿ ಸುಪ್ರೀಂ ಕೋರ್ಟ್ ಗೆ ಮೊರೆ ಹೋಗಿದ್ದು, ಈ ವೇಳೆ ಸುಪ್ರೀಂ ಕೋರ್ಟ್ ಸಿಜೆ ಗವಾಯಿ ಅವರು ಸಚಿವರಿಗೆ ಛೀಮಾರಿ ಹಾಕಿದರು.

ಇದೀಗ ಸೋಫಿಯಾ ಖುರೇಶಿ ಅವರ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಧ್ಯಪ್ರದೇಶದ ವಿಜಯ ಶಾ ವಿರುದ್ಧ ಬೆಳಗಾವಿಯ ಸೆನ್ ಠಾಣೆಯಲ್ಲಿ ಎಸ್.ಪಿ ಭೀಮಾಶಂಕರ್ ಗುಳೇದ ಅವರ ಸೂಚನೆಯ ಮೇರೆಗೆ ಇದೀಗ ವಿಜಯ ಶಾ ವಿರುದ್ಧ ಪ್ರಕರಣ ದಾಖಲಾಗಿದೆ ಬಿಎನ್ಎಸ್ ಕಾಯ್ದೆ 353, 192ರ ಅಡಿಯಲ್ಲಿ ಸ್ವಯಂ ಪ್ರೇರಿತ ಪ್ರಕರಣ ದಾಖಲಾಗಿದೆ.

ವಿಜಯ್ ಶಾ ಇತ್ತೀಚೆಗೆ ನಡೆದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ, “ನಮ್ಮ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿದವರಿಗೆ ಪಾಠ ಕಲಿಸಲು ನಾವು ಅವರ ಸಹೋದರಿಯನ್ನೇ ಕಳುಹಿಸಿದ್ದೆವು” ಎಂಬ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆಯನ್ನು ಜನತೆ ಹಾಗೂ ಸಂಸಾರ ಮತ್ತು ಸೈನಿಕ ಸಂಸ್ಕೃತಿಯ ಪ್ರತಿಷ್ಠೆಗೆ ಅವಮಾನಕರ ಎಂದು ಲೆಕ್ಕಹಾಕಲಾಯಿತು. ದೇಶಾದ್ಯಂತ ಈ ಹೇಳಿಕೆ ಭಾರೀ ಆಕ್ರೋಶವನ್ನು ಹುಟ್ಟುಹಾಕಿದೆ.

ಸೋಫಿಯಾ ಕುರಿತಾಗಿ ನೀಡಿದ ಹೇಳಿಕೆಯ ವಿರುದ್ಧ ದಾಖಲಾಗಿದ್ದ ಎಫ್ಐಆರ್ ರದ್ದಿಗೆ ವಿಜಯ್ ಶಾ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದಾರೆ. ಈ ವೇಳೆ ನ್ಯಾಯಮೂರ್ತಿ ಸಿಜೆ ಡಿವೈ ಚಂದ್ರಚೂಡ್ ನೇತೃತ್ವದ ಪೀಠವು, “ನೀವು ಉನ್ನತ ಹುದ್ದೆಯಲ್ಲಿ ಇದ್ದು ಇಂತಹ ಹೇಳಿಕೆ ನೀಡುವುದು ಶೋಭೆ ಕೊಡುವುದಿಲ್ಲ. ದೊಡ್ಡ ವೇದಿಕೆಗಳಲ್ಲಿ ಸಂಯಮ ಪಾಳಿಸಬೇಕು” ಎಂದು ವಿಜಯ್ ಶಾ ಅವರನ್ನು ತರಾಟೆಗೆ ತೆಗೆದುಕೊಂಡಿತು.

ವಿವಾದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ವಿಜಯ್ ಶಾ ಮಾತನಾಡುತ್ತಾ, “ಸೋಫಿಯಾ ಖುರೇಷಿ ನಮ್ಮ ದೇಶಕ್ಕೆ ಗೌರವ ತಂದಿರುವ ಸೇನಾಧಿಕಾರಿ. ನನ್ನ ಮಾತುಗಳು ತಪ್ಪಾಗಿ ಅರ್ಥವಾಗಿದ್ದರೆ, ನಾನು ಅವಳಿಗೆ ಹತ್ತು ಬಾರಿ ಕ್ಷಮೆಯಾಚಿಸುತ್ತೇನೆ” ಎಂದು ಸ್ಪಷ್ಟನೆ ನೀಡಿದ್ದಾರೆ.

ಈ ವಿವಾದಾತ್ಮಕ ಹೇಳಿಕೆಯು ಬಿಜೆಪಿಗೆ ರಾಜಕೀಯವಾಗಿ ಮುಜುಗರ ಉಂಟುಮಾಡಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ಬಿರುಸಾದ ಚರ್ಚೆಗೆ ಕಾರಣವಾಗಿದೆ. ದೇಶದ ಮಹಿಳಾ ಸೈನಿಕರ ಕುರಿತು ಗೌರವಪೂರ್ಣ ವಾಗ್ಮಿತೆ ನಿರೀಕ್ಷಿಸುವ ಸಂದರ್ಭದಲ್ಲಿ, ಈ ಹೇಳಿಕೆ ಪಕ್ಷದ ಧೋರಣೆಗೆ ವಿರುದ್ಧವಾಗಿರುವುದಾಗಿ ಆಲೋಚನೆ ವ್ಯಕ್ತವಾಗಿದೆ.