ಮನೆ ಜ್ಯೋತಿಷ್ಯ ಶಂಕು ಲಕ್ಷಣ ಮತ್ತು ಸ್ಥಾಪನೆಯ ನೇಮ

ಶಂಕು ಲಕ್ಷಣ ಮತ್ತು ಸ್ಥಾಪನೆಯ ನೇಮ

0

 ಶ್ಲೋಕ:

ತಚ್ಛಂಕುಂ ತ್ರಿವಿಧಂ ವಿಭಜ್ಯ ಸಮಶಶ್ಲೋರ್ಧ್ವಾದಿ ಭಾಗತ್ರಯೇ|

ಕೃಷ್ಟಾಶ್ರಂ ಚತುರಶ್ರಮ ವೃಣಮೃಜುಂ ಚಾನಶ್ರಮೇವಂ ವಿಧಂ||

ಸರ್ವೇಶಾಂಚ ವಿತಸ್ತಿಮಾತ್ರ ಮವಧಿ ಸ್ವರ್ಣಾದಿ ರತ್ನಾನ್ವಿತಂ|

ಗಂಧಾದ್ಯೈರಭಿ ಪೂಜಿತಂ ಶುಭದಿನೇ ಶಂಕುನ್ಯಸೇನ್ ಮಂಗಳೈ||

 ಅರ್ಥ: ಪ್ರತಿಯೊಬ್ಬರೂ ಶಂಕು ಸ್ಥಾಪನೆ ಮಾಡಿದ ಮೇಲೆಯೇ ಹೊಸ ಮನೆಯನ್ನು ಕಟ್ಟಿಸಬೇಕೆಂದು ಶಾಸ್ತ್ರವಿದೆ. ಶಂಕುವು, ಪದರು, ಗಂಟು, ಸೊಟ್ಟ ಅಂಕುಡೊಂಕು ಇರದೆ ಗೇಣುದ್ದ ಇರುವ ಒಂದು ಗೂಟವನ್ನು ನೇಮದಂತೆ ಸಿದ್ಧಪಡಿಸಿಕೊಳ್ಳಬೇಕು. ಆಗೂಟವನ್ನು ಮೂರು ಭಾಗ ವಿಂಗಡಿಸಿ ಆದಿ ಭಾಗವನ್ನು ದುಂಡಾಗಿಯೂ ಮಧ್ಯಭಾಗವನ್ನು ಚೌಕಾಗಿಯೂ, ಅಂತ್ಯಭಾಗವನ್ನು  ಎಂಟು ಮೂಲೆಗಳಲ್ಲಿರುವಂತೆಯೂ ಚೌಕಕಾಗಿ ಸಿದ್ಧಪಡಿಸಬೇಕು.ಈ ಶಂಕುವನ್ನು ಶುಭದಿನಗಳಲ್ಲಿ ಆ ಜಾಗದಲ್ಲಿ ಒಂದು ತೆಗ್ಗನ್ನು ತೆಗೆದು,ಅದರಲ್ಲಿ ಬಂಗಾರ, ರತ್ನ ಹವಳಾದಿ ನವರತ್ನಗಳನ್ನು ಹಾಕಿ ಗಂಧ, ಪುಷ್ಪ ದೀಪಾದಿಗಳಿಂದ ಪೂಜಿಸಿ ಮಂಗಳವಾದ್ಯೊಡನೆ ಜಾಗೆಯನ್ನು ಪೂಜಿಸಿ ಆ ತೆಗಮಗ್ಗಿನಲ್ಲಿ ಶಂಕುವನ್ನು ಸ್ಥಾಪನೆ ಮಾಡಬೇಕು.

 ಶಂಕುವು ಹೊಂಗೆ, ಮದ್ಧಿ ಬೇವು, ಶ್ರೀ ಕಾಳ, ಪಾರಿಜಾತ, ತೇಗು, ಕಾಂಚನಗಿಡಗಳ ಪೈಕಿ ಒಂದಾಗಿರಬೇಕು. ಆ ಶಂಕುವನ್ನು ವಾಸ್ತು ಪುರುಷನ ಬೆನ್ನು ಇರತಕ್ಕ ದಿಕ್ಕಿನ ಕಡೆ ಜಾಗದ ಮಧ್ಯದಲ್ಲಿ ಇದನ್ನು ಸ್ಥಾಪನೆ ಮಾಡಬೇಕು.ಇದೇ ಸಮಯಕ್ಕೆ ಮೊದಲು ವಾಸ್ತು ಪೂಜೆಯನ್ನು ಮಾಡತಕ್ಕದ್ದು.ವಾಸ್ತು ಪೂಜೆ ಶಂಕುಖ ಸ್ಥಾಪನೆಯಾದ ನಂತರವೇ ಥರ ಹಾಕಿಸಬೇಕೆಂದು ನಿಯಮವಿದೆ.

ಶಂಕು ಸ್ಥಾಪನೆಯೇ ಮೂರ್ತಗಳು :

ಅಶ್ವಿನಿ ರೋಹಿಣಿ ಮಾರ್ಗಶಿರಾ ಅನುರಾಧ ಶ್ರಾವಣ ಅಸ್ತಮೂಲ ಉತ್ತರಶಾಡ ಉತ್ತರ ಭಾದ್ರಪದ ರೇವತಿ ನಕ್ಷತ್ರಗಳಲ್ಲಿ ಶುಭವಾರ ಶುಭತಿಗಳಲ್ಲಿ ಸ್ಥಿರ ಲಗ್ನದಲ್ಲಿರುವ ಬಾರದು ಮತ್ತು ಸಾಯಂಕಾಲ ಅಥವಾ ರಾತ್ರಿಯ ಕಾಲದಲ್ಲಿ ಸಂಕುಸ್ಥಾಪನೆ ಮಾಡಬಾರದು ಈ ಮೂರ್ತವನ್ನು ಅಡಿಗಲ್ಲು ಇಡುವ ಉದ್ಘಾಟನಾ ಸಮಾರಂಭಕ್ಕೆ ಸಾಧಿಸಬಹುದು.

ಶುಭವಾರಗಳು : ಸೋಮವಾರ,ಬುಧವಾರ, ಗುರುವಾರ ಮತ್ತು ಶುಕ್ರವಾರಗಳು.

ಶುಭ ತಿಥಿಗಳು : 2,3,5,6,7,10,11,12, 13, 15 ಮತ್ತು ಬಹುಳ ಪಾಡ್ಯ.

 ಶುಭ ಯೋಗಗಳು : ಪ್ರತಿ ಆಯುಷ್ಮಾನ್,ಸೌಭಾಗ್ಯ, ಶೋಭನ ಸುಕರ್ಮ, ದೃತಿ, ವೃತ್ತಿ ದ್ರವ, ಹರ್ಷಣ ಸಿದ್ಧ,,ವಾರಿಯನ್, ಶಿವ,ಸಿದ್ದ ಸಾಧ್ಯ ಶುಭ ಶುಕ್ರ ಬ್ರಹ್ಮ ಐಂದ್ರವ.