ಮನೆ ಸ್ಥಳೀಯ ಅರಮನೆ ಫಲಪುಷ್ಪ ಪ್ರದರ್ಶನದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

ಅರಮನೆ ಫಲಪುಷ್ಪ ಪ್ರದರ್ಶನದ ಸಾಂಸ್ಕೃತಿಕ ಕಾರ್ಯಕ್ರಮಗಳ ವಿವರ

0

ಮೈಸೂರು: ಡಿಸೆಂಬರ್ 22 ರಂದು ಸಂಜೆ 5:15ಕ್ಕೆ ನಾಡ ದೇವತೆ ಶ್ರೀ ಚಾಮುಂಡೇಶ್ವರಿಯಮ್ಮನವರ ಮೆರವಣಿಗೆಯಲ್ಲಿ ಅರಮನೆಯ ರಾಜಲಾಂಛನ ಬಿರುದು-ಬಾವಲಿಗಳು ಹಾಗೂ ವಿವಿಧ ಕಲಾ ಪ್ರಕಾರಗಳೊಂದಿಗೆ ಸಾಗುವ ರಥೋತ್ಸವಕ್ಕೆ ಚಾಲನೆ ಕಾರ್ಯಕ್ರಮ, ಸಂಜೆ 5.30 ಕ್ಕೆ ಅರಮನೆ ಫಲ ಪುಷ್ಪ ಪ್ರದರ್ಶನ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮ, ಸಂಜೆ 6 ರಿಂದ 6:45 ರವರೆಗೆ ಎ.ಎಂ ಗುರುರಾಜ್ ಮತ್ತು ತಂಡದವರಿoದ ವಾದ್ಯ ಸಂಗೀತ ಕಾರ್ಯಕ್ರಮ, ಸಂಜೆ 6:45 ರಿಂದ 7 ರವರೆಗೆ ಕೆ.ಆರ್ ಕಲಾ ತಂಡವರಿoದ ನಾಡಗೀತೆ ಮತ್ತು ಮೈಸೂರು ಸಂಸ್ಥಾನ ಗೀತೆ ಮತ್ತು ಸಂಜೆ 7.15 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನಾ ಸಮಾರಂಭ, ಸಂಜೆ 7:20 ರಿಂದ ಖ್ಯಾತ ಹಿನ್ನೆಲೆ ಗಾಯಕರಾದ ಮನೋ ಅವರಿಂದ ಸಂಗೀತ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಡಿ.23 ರಂದು ಸಂಜೆ 5:45 ರಿಂದ 6:30 ರವರೆಗೆ ಹನುಮಂತರರಾಜು ಅವರಿಂದ ಲಯ-ನಾದ ತರಂಗ ಸಂಗೀತ ಮಿಲನ ಹಾಗೂ ಸಂಜೆ 6.30 ಕ್ಕೆ ಕಿಶನ್ ಬಿಳಿಗಲಿ, ದಿ ಅಕಾಡೆಮಿ ಆಫ್ ಡ್ಯಾನ್ಸ್ ಅವರಿಂದ ನೃತ್ಯ ಕಾರ್ಯಕ್ರಮ, ಸಂಜೆ 7:45 ರಿಂದ ಏಕಾಂಬರoಲಕ್ಷ್ಮೀ ನಾರಾಯಣ ಇವರಿಂದ ಸಂಗೀತ ರಸ ಸಂಜೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಡಿ.24 ರಂದು ಸಂಜೆ 5:45 ರಿಂದ 6:30ವರೆಗೆ ರೆನ್ಸಿ ಎನ್ ಯೋಗೇಶ್ ತಂಡದಿoದ ಕರಾಟೆ ಇಂಡಿಯಾ ಸಮರಕಲ ಪ್ರದರ್ಶನ, ಸಂಜೆ 6:30 ರಿಂದ 7.15 ರವರೆಗೆ ಹೇಮಲತಾ ಕುಮಾರಸ್ವಾಮಿ ಮತ್ತು ತಂಡದವರಿoದ ಸುಗಮ ಸಂಗೀತ, ಸಂಜೆ 7:30 ರಿಂದ 9:30 ಹೇಮಂತ್, ಶಮಿತ ಮಲ್ನಾಡ್, ಪೃಥ್ವಿಭಟ್, ಅಶ್ವಿನ್‌ಶರ್ಮ, ಅಂಕಿತಾ ಕುಂಡು ಮತ್ತು ತಂಡದವರಿoದ ಸಂಗೀತಯಾನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಡಿ.25 ರಂದು ಸಂಜೆ 6 ರಿಂದ 7 ಗಂಟೆವರೆಗೆ ನಾಗಲಕ್ಷ್ಮಿ ಮತ್ತು ತಂಡದವರಿoದ ನೃತ್ಯ ಕಾರ್ಯಕ್ರಮ, ಸಂಜೆ 7 ರಿಂದ 8 ಗಂಟೆಯವರೆಗೆ ವಿದ್ಯಾಭೂಷಣ್ ಮತ್ತು ರಘುಪತಿ ಭಟ್ ಅವರಿಂದ ಕುಂಚ ಗಾಯನ, ಸಂಜೆ 8 ರಿಂದ 10 ಗಂಟೆಯವರೆಗೆ ಎಂ ಡಿ ಪಲ್ಲವಿ ಮತ್ತು ತಂಡದವರಿoದ ಸುಗಮ ಸಂಗೀತ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಡಿ.31 ರಂದು ರಾತ್ರಿ 11 ರಿಂದ 12 ಗಂಟೆವರೆಗೆ ಪೊಲೀಸ್ ಇಲಾಖೆಯ ವತಿಯಿಂದ ಕರ್ನಾಟಕ ಮತ್ತು ಆಂಗ್ಲ ಬ್ಯಾಂಡ್ ಕಾರ್ಯಕ್ರಮ, ಮಧ್ಯರಾತ್ರಿ 12 ರಿಂದ 12:15 ರವರೆಗೆ ಮೈಸೂರು ಅರಮನೆ ಮಂಡಳಿ ವತಿಯಿಂದ ಹೊಸ ವರ್ಷಾಚರಣೆ ಪ್ರಯುಕ್ತ ವಿವಿಧ ಬಣ್ಣಗಳ ಚಿತ್ತಾರ ಕೂಡಿದ ಶಬ್ದರಹಿತ ಹಸಿರು ಪಟಾಕಿ ಸಿಡಿಸುವ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಜೊತೆಗೆ ಬೊಂಬೆಗಳ ಪ್ರದರ್ಶನ ಛಾಯಾಚಿತ್ರ ಪ್ರದರ್ಶನ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ಪ್ರಕಟಣೆ ತಿಳಿಸಿದೆ.

ಹಿಂದಿನ ಲೇಖನನಂಜನಗೂಡು: ಪಕ್ಷಿಗಳನ್ನು ಬೇಟೆಯಾಡುತ್ತಿದ್ದ ಇಬ್ಬರ ಬಂಧನ
ಮುಂದಿನ ಲೇಖನಪ್ರಧಾನಿ ಮೋದಿಗೆ ಮಾಧ್ಯಮ ಎದುರು ಬಂದು ನಿಲ್ಲುವ ತಾಕತ್ತು ಇಲ್ಲ: ಹೆಚ್.ವಿಶ್ವನಾಥ್