ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಅರಮನೆ ವೇದಿಕೆಯಲ್ಲಿ ಅ.15 ರಿಂದ 22 ರವರೆಗೆ ವಿವಿಧ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.
ಅ.15 ರಂದು ಸಂಜೆ 7 ರಿಂದ ನಾದಸ್ವರ ವಿದ್ವಾನ್ ಎಸ್ ಪುಟ್ಟರಾಜು ಹಾಗೂ ಯದುಕುಮಾರ್ ರವರ ತಂಡದಿoದ ನಾದಸ್ವರ, ರಾಜಪ್ಪ ಮತ್ತು ಮಲ್ಲೇಶ್ ತಂಡದಿoದ ವೀರಭದ್ರ ಕುಣಿತ, ವಿದುಷಿ ಬಿ ರಶ್ಮಿ ತಂಡದವರಿoದ ನಾಡಗೀತೆ ಹಾಗೂ ಆಸ್ಥಾನ ಗೀತೆ ಗಾಯನ, ಚಲನಚಿತ್ರ ನಟಿ ಭಾವನ ರಾಮಣ್ಣ ರವರ ತಂಡದಿoದ ಶ್ರೀ ಚಾಮುಂಡೇಶ್ವರಿ ಮರ್ದಿನಿ ನೃತ್ಯ ರೂಪ ಮತ್ತು ರೂಪಕ ಸಿಂಹ ವಾಹಿನಿ ಸಂಗೀತಯಾನ, ಅಜಯ್ ವಾರಿಯರ್ ಮತ್ತು ಸುನಿತಾ ರವರ ತಂಡದಿoದ ಸಂಗೀತಯಾನ ಕಾರ್ಯಕ್ರಮಗಳು ನಡೆಯಲಿದೆ.
ಅಕ್ಟೋಬರ್ 16 ರಂದು ಪುಟ್ಟಸ್ವಾಮಿ ಅವರ ತಂಡದಿoದ ನಾದಸ್ವರ, ರಮ್ಯಾ ಮತ್ತು ಮೈಸೂರು ಸವಿತಾ ಕಿರುಕುನ್ನಯ್ಯ ಮಂಡ್ಯ ರವರ ತಂಡದಿoದ ಮಹಿಳಾ ಡೊಳ್ಳು ಮತ್ತು ಮಹಿಳಾ ಪೂಜಾ ಕುಣಿತ, ವಿದ್ವಾನ್ ಡಾ.ದುಂಡಯ್ಯ ಪೂಜೆರಾ ರವರಿಂದ ತಾಳ ಗಾನ ಯಾನ (ಶಾಸ್ತ್ರೀಯ ವಾದ್ಯ ವೃಂದ), ಅಂತರಾಷ್ಟ್ರೀಯ ಖ್ಯಾತಿಯ ಕಥಕ್ ಕಲಾವಿದರಾದ ಹರಿ ಮತ್ತು ಚೇತನ್ ರವರಿಂದ ಕಥಕ್ ಸಂಭ್ರಮ, ಆಯನಾ ಡ್ಯಾನ್ಸ್ ಕಂಪನಿ ವತಿಯಿಂದ ಭಾರತೀಯ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 17 ರಂದು ಸುನಿತಾ ಮತ್ತು ಗಿರಿಜನ ಸಮಗ್ರ ಅಭಿವೃದ್ಧಿ ಕಲಾ ಸಂಸ್ಥೆ ಕೊಡಗುರವರಿಂದ ಗಿರಿಜನ ಬುಡಕಟ್ಟು ನೃತ್ಯ, ಉಸ್ತಾದ್ ರಫೀಕ್ ಖಾನ್ ಮತ್ತು ವಿದ್ವಾನ್ ಅಂಕುಶ್ ಎನ್ ನಾಯಕ್ ರವರಿಂದ ವಾದ್ಯ ಸಂಗೀತ ಜುಗಲ್ ಬಂದಿ, ಚಿಂತನ್ ವಿಕಾಸ್ ಫಿಟ್ ಪ್ರಾಜೆಕ್ಟ್ ಎಕ್ಸಡಸ್ ರವರಿಂದ ನಾನಾರೆಂಬುದು ನಾನಲ್ಲ (ಕನ್ನಡ ಮತ್ತು ಕಡಲಚೆ ಸಂಗೀತ), ವಿದ್ವಾನ್ ಶಶಾಂಕ್ ಸುಬ್ರಹ್ಮಣ್ಯಂ ಮತ್ತು ರಾಕೇಶ್ ಚೌರಾಸಿಯಾ ರವರಿಂದ ಕರ್ನಾಟಕ ಹಿಂದುಸ್ತಾನಿ ಜುಗಲ್ ಬಂದಿ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 18 ರಂದು ಅಪರ್ಣ ವಿನೋದ್ ಮೆನನ್ ರವರ ತಂಡದಿoದ ಭರತನಾಟ್ಯ, ಡಾ. ಕಿಕ್ಕೇರಿ ಕೃಷ್ಣಮೂರ್ತಿ ಮತ್ತು ಡಾ. ಅಪ್ಪಗೆರೆ ತಿಮ್ಮರಾಜು ರವರ ತಂಡದಿoದ ಕನ್ನಡವೇ ಸತ್ಯ ಭಾವಗೀತೆ ಹಾಗು ಜನಪದ ಗೀತೆಗಳು ಸಂಭ್ರಮ, ಮಾಸ್ ಬೆಂಡ್ ರವರಿಂದ ಪೊಲೀಸ್ ಬ್ಯಾಂಡ್, ಪದ್ಮಶ್ರೀ ಶುಭ ಮುದ್ಗಲ್ ರವರಿಂದ ಹಿಂದುಸ್ಥಾನಿ ಶಾಸ್ತ್ರೀಯ ಸಂಗೀತ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 19 ರಂದು ವಿಶೇಷ ಚೇತನ ಕಲಾವಿದರಿಂದ ಸಂಗೀತ ನೃತ್ಯ ಸಮ್ಮಿಲನ, ಕರ್ನಾಟಕ ಕಲಾ ಶ್ರೀ ವಿದ್ಯಾ ರವಿಶಂಕರ್ ತಂಡದವರಿoದ ನೃತ್ಯ ರೂಪಕ, ವಿದ್ವಾನ್ ಮೈಸೂರು ಹರೀಶ್ ಪಾಂಡವ್ ರವರ ತಂಡದಿoದ ಸೈಕ್ಸೋ ಫೋನ್ ಫ್ಯಾಷನ್, ವಿದ್ವಾನ್ ಟಿ ಎಂ ಕೃಷ್ಣ ಚೆನ್ನೈ ರವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 20 ರಂದು ಮುಡಿಗುಂಡ ಮೂರ್ತಿ ತಂಡದವರಿoದ ಕಾವ್ಯ ಕುಂಚ ಗಾಯನ, ವಿದುಷಿ ರೇಖಾ ಸುಬ್ರಹ್ಮಣ್ಯ ಬೆಂಗಳೂರು ತಂಡದವರಿoದ ತ್ರಿವೇಣಿ( ಒಡಿಸ್ಸಿ ಕೂಚುಪುಡಿ,ಭರತನಾಟ್ಯಂ), ಪಂಡಿತ್ ಕೂತ್ಲೇ ಖಾನ್ ಮತ್ತು ವಿದೇಶಿ ರಸಿಕಾ ಶೇಖರ್ ತಂಡದವರಿAದ ಜುಗಲ್ಬಂದಿ ಕಾರ್ಯಕ್ರಮಗಳು ನಡೆಯಲಿದೆ.
ಅಕ್ಟೋಬರ್ 21 ರಂದು ಬೆಳಗ್ಗೆ 6 ರಿಂದ ಸಂಜೆ 6:00 ಗಂಟೆಯವರೆಗೆ ವಿದ್ವಾನ್ ಡಾ. ಸಿ ಎ ಶ್ರೀಧರ್ ರವರಿಂದ ಕರ್ನಾಟಕ ಶಾಸ್ತ್ರೀಯ ವೇಣುವಾದನ, ಚೌಡಿಕೆ ಪದಗಳು ಖ್ಯಾತ ಶಿಲ್ಪಾ ಮುಡಬಿ ಮರೆತ ಮಣ್ಣಿನ ಹಾಡುಗಳು(ಉತ್ತರ ಕರ್ನಾಟಕದ ಹಾಡುಗಳು), ವಿದ್ವಾನ್ ರಾಜೇಶ್ ಮತ್ತು ಯು ರಾಜೇಶ್ ರವರಿಂದ ವೀಣಾ ಮ್ಯಾಂಡೋಲಿನ್ ಜುಗಲ್ಬಂದಿ ಕಾರ್ಯಕ್ರಮಗಳು ನಡೆಯಲಿವೆ.
ಅಕ್ಟೋಬರ್ 22 ರಂದು ಬೆಳಗ್ಗೆ 6 ರಿಂದ ಸಂಜೆ 6:00 ಗಂಟೆಯವರೆಗೆ ನಿಸರ್ಗ ಮತ್ತು ವಿಸ್ಮಯ ರವರ ತಂಡದಿoದ ರಂಗ ಗೀತೆಗಳು, ನಾದಬ್ರಹ್ಮ ಡಾ.ಹಂಸಲೇಖ ರವರ ತಂಡದಿoದ ಜಯಹೇ ನಾಲ್ವಡಿ ಹಾಡು-ಹಬ್ಬ ಕಾರ್ಯಕ್ರಮಗಳು ನಡೆಯಲಿದೆ ಎಂದು ಮೈಸೂರು ದಸರಾ ಸಾಂಸ್ಕೃತಿಕ ಉಪಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.