೧) ಚೈತ್ರ ಮಾಸದಲ್ಲಿ ಜನಿಸಿದಾತನು ಕಥೆ-ಕಾದಂಬರಿ-ಸಾಹಿತ್ಯ, ಲಲಿತ ಕಲೆಗಳು ವೇದ ವಿದ್ಯೆಗಳಲ್ಲಿ ವಿಶಾರದನೂ, ವಿದ್ಯಾ-ವಿನಯ ಸಂಪನ್ನನೂ, ಭೋಗಿಯು ಮೃಷ್ಟಾನ್ನ ಭೋಜನ ಪ್ರೀಯನೂ, ಸದಾ ಗುರುಹಿರಿಯರಲ್ಲಿಯೂ, ದೇವರಲ್ಲಿಯೂ ಭಕ್ತಿ ವಿಶ್ವಾಸವುಳ್ಳವನು. ಸತ್ಸಂಗದಲ್ಲಿ ಹೆಚ್ಚು ಕಾಲ ಕಳೆಯುವವನು. ಚಮತ್ಕಾರ ವಿದ್ಯೆಗಳಲ್ಲಿ ಪರಿಣಿತನಾಗದಿದ್ದರೂ ಅದರಲ್ಲಿ ಅಭಿರುಚಿಯುಳ್ಳವನು, ಸರಕಾರದ ಉನ್ನತ ಅಧಿಕಾರದಲ್ಲಿ ವಸೂಲಿ ಮನ್ನಣೆ ಇರುವವನು.
೨) ವೈಶಾಖ ಮಾಸದಲ್ಲಿ ಜನಿಸಿದವನು ಸಕಲ ಶಾಸ್ತ್ರಗಳನ್ನು ಬಲ್ಲಿದನೂ, ವಿದ್ಯಾ ದುರಂಧನೂ, ಗುರುದೇವತಾ ಗಣದಲ್ಲಿ ಭಕ್ತನೂ ನಿಷ್ಠೆಯುಳ್ಳವನೂ, ದೀರ್ಘಾ ಯುಷಿಯೂ, ಸಾಕಷ್ಟು ಜನ ಸೋದರ ಸೋದರಿಯರನ್ನು ಹೊಂದಿದವನೂ, ಬಹು ಜನರ ಬೆಂಬಲವುಳ್ಳವನೂ ಆಗುತ್ತಾನೆ. ಅಂತರಂಗದಲ್ಲಿ ಅಂತಃಕರುಣಿಯು, ಪರರ ಸುಖದುಃಖದಲ್ಲಿ ಭಾಗಿಯಾಗುವನು ಪರೋಪಕಾರಿಯೂ ಹೌದು.
೩) ಜೇಷ್ಠ ಮಾಸದಲ್ಲಿ ಜನಿಸಿದವನು ಅಸ್ಥಿರ ಬುದ್ದಿಯುಳ್ಳವನು. ಕೈಕೊಂಡ ಕಾರ್ಯಗಳಲ್ಲಿ ಮಂದ ನಡಿಗೆಯುಳ್ಳವನು, ವಾಣಿಜ್ಯ ವ್ಯವಹಾರಗಳಲ್ಲಿ ನಿಷ್ಣಾತನು. ಧನಧಾನ್ಯ ಸಂಪತ್ತು ಸಮೃದ್ಧಿಯುಳ್ಳವನು, ದೀರ್ಘಾಯುಷಿಯು ಆದರೆ, ಚಂಚಲ ಮನಸ್ಸುಳ್ಳವನು.
೪) ಆಷಾಢ ಮಾಸದಲ್ಲಿ ಜನಿಸಿದಾತನು ಸುಳ್ಳು- ಮೋಸ-ವಂಚನೆಗಳನ್ನು ಮಾಡುವದರಲ್ಲಿ ವಿಶೇಷ ಬಲ್ಲಿದನು. ವಿಶೇಷ ಮಾತುಗಾರನು. ಸದಾ ಯಾವುದಾದರೊಂದು ರೋಗದಿಂದ ನರಳುವವನು. ಕಷ್ಟದಿಂದ ಜೀವಿಸುವವನು. ಸೋಮಾರಿ, ಎಲ್ಲರನ್ನೂ ದ್ವೇಷಿಸುವವನು, ಮಹಾಜಿಪುಣನು ಆದರೆ, ಗುರು ಹಿರಿಯರಲ್ಲಿ ಭಕ್ತಿ ಸಂಪನ್ನನಾಗಿದ್ದು ಅವರಲ್ಲಿ ಅಭಿಮಾನಧನನು.
೫) ಶ್ರಾವಣ ಮಾಸದಲ್ಲಿ ಜನಿಸಿದವನು ಗುರುಹಿರಿಯರಲ್ಲಿ ಭಕ್ತಿಯುಳ್ಳವನು-ನಿಷ್ಠೆ ಮುಳ್ಳವನು. ತಂದೆ-ತಾಯಿಗಳ ಆಜ್ಞೆಗಳನ್ನು ಶಿರಸಾವಹಿಸಿ ಪಾಲಿಸುವವನು. ಸರಳ ಹೃದಯದವನಾಗಿದ್ದು ಶಾಂತಚಿತ್ತನೂ ಆಗುತ್ತಾನೆ. ವ್ಯಾಪಾರ ವ್ಯವಹಾರಗಳಲ್ಲಿ ಕುಶಲ ಬುದ್ಧಿಯುಳ್ಳವನು ಕುಟುಂಬ ಸ್ನೇಹಿತನು ವಿದ್ಯಾ ಬುದ್ಧಿಯುಳ್ಳವನಾಗಿ ಮರ್ಯಾದೆಯುತ ಜೀವನ ನಡೆಯಿಸುವ ಅಧಿಕಾರಿಯೂ ಆಗುವನು. ಮರ್ಯಾರೆಯುತ
4) ಭಾದ್ರಪದ ಮಾಸದಲ್ಲಿ ಜನಿಸಿದಾತನು ಯಂತ್ರ-ಮಂತ್ರಗಳಲ್ಲಿ ಅಭಿರುಚಿ ಯುಳ್ಳವನಾಗಿದ್ದು, ದಾನ ಧರ್ಮಗಳಲ್ಲಿಯೂ ಮುಂದಾಗುವನು. ಸ್ತ್ರೀ ಪ್ರೇಮಿ, ಧನಧಾನ್ಯ ಸಂಗ್ರಹವುಳ್ಳವನು, ಪುರಾಣ ಪುಣ್ಯ ಕಥೆಗಳನ್ನು ಶಾಸ್ತ್ರಗಳನ್ನು ಬಲ್ಲಿದನು. ದಯಾಳುವೂ ಆಗುತ್ತಾನೆ.
೭) ಆಶ್ವೀಜ ಮಾಸದಲ್ಲಿ ಜನಿಸಿದವನು ವಿದ್ವಾಂಸನಾಗುತ್ತಾನೆ- ಧನವಂತನೂ ಆಗುತ್ತಾನೆ. ಅಭಿಮಾನಿಯು ಆದರೆ ಸ್ವಜನರಲ್ಲಿಯೇ ದೂಷಿತನು, ಆಲಸಿ, ಆಗಾಗ್ಗೆ ಶೀಘ್ರ ಕೋಪವುಳ್ಳವನಾಗುತ್ತಾನೆ. ಸಮಯಕ್ಕೆ ತಕ್ಕಂತೆ ವರ್ತಿಸಿದಲ್ಲಿ ಸರಕಾರದಲ್ಲಿ ದೊಡ್ಡ ಹುದ್ದೆಯನ್ನೂ ಪಡೆಯುತ್ತಾನೆ. ಈತನು ಕುಟುಂಬ ವತ್ಸಲನು.
೮) ಕಾರ್ತಿಕ ಮಾಸದಲ್ಲಿ ಜನಿಸಿದವನು ವಿಶೇಷ ಮಾತನಾಡತಕ್ಕವನು- ವಾಚಾಲಿ. ಧನ ಧಾನ್ಯ ಸಮೃದ್ಧಿಯುಳ್ಳವನು ಯಾವಾಗಲೂ ಒಳ್ಳೆ ಕಾರ್ಯ ಮಾಡುವನು. ವ್ಯಾಪಾರದಲ್ಲಿ ಚತುರನು, ಒಕ್ಕಲುತನದಲ್ಲಿ ವಿಶೇಷ ಅಭಿರುಚಿಯುಳ್ಳವನು ಆದರೆ ಸ್ತ್ರೀಲೋಲನೂ, ಜಿಪುಣನೂ ಆಗುತ್ತಾನೆ.
೯) ಮಾರ್ಗಶಿರ ಮಾಸದಲ್ಲಿ ಜನಿಸಿದವನು ನಾನಾ ವಿಧ ಕಲೆಗಳನ್ನು ಬಲ್ಲಿದವನು, ಪರೋಪಕಾರಿ ಸ್ವಭಾದವನು, ತೀರ್ಥಯಾತ್ರೆಯ ಸ್ನಾನ ಮಾಡುವದರಲ್ಲಿ ವಿಶೇಷ ಆಸಕ್ತನು. ಒಳ್ಳೇ ಮಾರ್ಗದಲ್ಲಿ ನಡೆದು ವೈಭವಯುತ ಜೀವನವನ್ನು ನಡೆಸುವನು. ವ್ಯವಹಾರದಲ್ಲಿ ಕುಶಲನೂ, ಶ್ರೀಮಂತ ಯೋಗವುಳ್ಳವನೂ ಒಳ್ಳೆ ಸ್ನೇಹಿತರನ್ನು ಹೊಂದಿದವನೂ ಒಳ್ಳೆ ಮಾತುಗಾರನೂ, ಸುಶೀಲನೂ ಆಗುತ್ತಾನೆ.
೧೦ ) ಪುಷ್ಯ ಮಾಸದಲ್ಲಿ ಜನಿಸಿದವನು ಪರೋಪಕಾರಿ ಸ್ವಭಾವದವನು, ಸ್ವಂತ ಪರಿಶ್ರಮದಿಂದಲೇ ಹಣ-ಗುಣ ಸಂಪಾದನೆ ಮಾಡತಕ್ಕವನು. ವಿಶೇಷ ಖರ್ಚಿಕನೂ ಆಗಿರುತ್ತಾನೆ. ಶಾಸ್ತ್ರ-ಧರ್ಮ ನೀತಿಗಳನ್ನು ವಿಚಾರಿಸಿ ಕಾರ್ಯ ಪ್ರವೃತ್ತನಾಗುವನು. ಗುರು – ಹಿರಿಯರ ಆಜ್ಞೆಯನ್ನು, ಅಪ್ಪಣೆಯನ್ನು ತನಗೆ ಯೋಗ್ಯವೆಂದು ಕಂಡು ಬಂದಲ್ಲಿ ನೆರವೇರಿಸುವವನು ಆದರೆ, ಹೆಂಡಿರು-ಮಕ್ಕಳಿಂದ ಕೊನೆಗೆ ಕಷ್ಟಗಳನ್ನು ಅನುಭವಿಸುವವನು.
೧೧) ಮಾಘ ಮಾಸದಲ್ಲಿ ಜನಿಸಿದಾತನು ತಂತ್ರ-ಮಂತ್ರ- ಯಂತ್ರಗಳಲ್ಲಿ ವಿಶೇಷ ಅಭಿರುಚಿಯುಳ್ಳವನು ಯಾವಾಗಲೂ ಸಾಧು ಸತ್ಪುರುಷರ ಸಹವಾಸದಲ್ಲಿ ಇರಲು ಬಯಸುವವನೂ, ಬುದ್ಧಿಶಾಲಿಯಾಗಿದ್ದರೂ ಆಲಿಸಿಯು. ಶ್ರೀಮಂತನೂ ಶಾಂತ ಹೃದಯಿಯೂ, ದಯಾ ದಾಕ್ಷಿಣ್ಯಗಳಲ್ಲಿ ಸಹೃದಯಿಯು ಆಗುತ್ತಾನೆ.
೧೨) ಫಾಲ್ಗುಣ ಮಾಸದಲ್ಲಿ ಜನಿಸಿದವನು ಪರೋಪಕಾರಿ ಬುದ್ಧಿಯುಳ್ಳವನು. ಅಂತಃಕರುಣಿಯು, ಕೋಮಲ ಹೃದಯಿ, ಆದರೆ ಸ್ತ್ರೀ ವಿಲಾಸಿಯು. ಸಂಗೀತ ನಾಟ್ಯಶಾಸ್ತ್ರ ಚಿತ್ರಕಲೆಗಳಲ್ಲಿ ಬಲ್ಲಿದನು ಆಗಾಗ್ಗೆ ಸುಳ್ಳು ಮಾತನಾಡಲು ಹಿಂಜರಿದವನು
ಪಕ್ಷಗಳ ಜನನ ಫಲ
೧) ಶುಕ್ಲ ಪಕ್ಷದಲ್ಲಿ ಜನಿಸಿದವನು ಉತ್ತಮ ಗುಣ ಸ್ವಭಾವದವನು. ಸುಂದರ-ಸೌಮ್ಮ ಗುಣವಂತನು. ಸದಾ ಉತ್ಸಾಹವುಳ್ಳವನು. ದೀರ್ಘಾಯುಷಿಯು. ವಿದ್ಯೆ-ಬುದ್ದಿಗಳಲ್ಲಿ ಒಳ್ಳೆಯ ಕೀರ್ತಿಯನ್ನು ಹೊಂದುವನು ನಮ್ಮ ಸ್ವಭಾವದವನು. ಮಕ್ಕಳು ಮೊಮ್ಮಕ ಳೊಂದಿಗೆ ಸುಖಜೀವನ ನಡೆಸುವನು, ಲಕ್ಷ್ಮೀ ಕೃಪೆಯುಳ್ಳವನು. ಪಾಪದ ಕೆಲಸಗಳಿಂದ ದೂರವಿರತಕ್ಕವನೂ ಆಗಿರುತ್ತಾನೆ.
೨) ಕೃಷ್ಣ ಪಕ್ಷದಲ್ಲಿ ಜನಿಸಿದವನು ಬಂಧು ಬಳಗದವರನ್ನು ದ್ವೇಷಿಸುತ್ತ ಹಠಮಾರಿಯಾಗಿ ಜೀವನ ನಡೆಸುವನು. ಧೈರ್ಯಶಾಲಿಯು ಆದರೆ ಪರರಿಗೆ ಸದಾ ಕೆಡಕು ಬಯಸುವ ಕುಹಕನು. ಸಿಟ್ಟಿನವನು, ಕನಿಷ್ಟ ಸ್ವಭಾವವನ್ನು ಹೊಂದಿ ಬುದ್ದಿ ಶೂನ್ಯನಾಗುವು ಕಷ್ಟ ನಿಷ್ಟುರ ಜೀವಿಯೂ ಆಗುವನು.
ಹಗಲು-ರಾತ್ರಿ ಜನನ ಫಲವು
೧) ಹಗಲು ಹುಟ್ಟಿದವನು ತನ್ನ ದೊಡ್ಡ ಗುಣಗಳಿಂದ, ಪ್ರಯತ್ನಗಳಿಂದ ವಿದ್ವತ್ತು ಗಳಿಂದ ಸರಕಾರದಲ್ಲಿ ದೊಡ್ಡ ಮರ್ಯಾದೆಯುತ ಅಧಿಕಾರವನ್ನು ಪಡೆಯುವನು, ಧನ ಸಂಪಾದನೆಗೆ ಕೊರತೆಯಿಲ್ಲ. ತೇಜಸ್ಸನ್ನು ಹೊಂದಿದ ಈತನು ಸುಂದರ ನೇತ್ರಗಳುಳ್ಳವನು, ಬಂಧು ಬಳಗದವರಿಂದ ಮನ್ನಣೆ ಹೊಂದುವವನೂ ಆಗುತ್ತಾನೆ.
೨) ರಾತ್ರಿಯಲ್ಲಿ ಹುಟ್ಟಿದವನು ಯಾವಾಗಲೂ ರೋಗದಿಂದ ಬಳಲುವವನ್ನೂ ದರಿದ್ರನೂ, ಸೋಮಾರಿಯೂ, ಸತತ ಕಷ್ಟ-ನಷ್ಟವನ್ನು ಅನುಭವಿಸುವವನೂ, ಸ್ತ್ರೀ! ಲೋಲನೂ, ನೀಚ ಹೃದಯದವನೂ, ಪಾಪ ಕೃತ್ಯಗಳನ್ನು ಮಾಡುವಾಗ ಎಳ್ಳಷ್ಟು ಅಂಜದವನೂ ಆಗುವನು.