ಜಮ್ಮು(Jammu): ಅಂತಾರಾಷ್ಟ್ರೀಯ ಗಡಿ ರೇಖೆ ಬಳಿ ಬುಧವಾರ ಉಗ್ರರ ಸುರಂಗ ಮಾರ್ಗ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಜಮ್ಮುವಿನ ಸಾಂಬಾ ಪ್ರದೇಶದಲ್ಲಿ ಭದ್ರತೆ ಹೆಚ್ಚಿಸಿದ್ದು, ಗಡಿ ಭದ್ರತಾ ಪಡೆ ಹೆಚ್ಚಿನ ಹುಡುಕಾಟ ನಡೆಸಿದೆ ಎಂದು ಬಿಎಸ್ ಎಫ್ ವಕ್ತಾರರು ತಿಳಿಸಿದ್ದಾರೆ.
ಜಮ್ಮುವಿನ ಸುಂಜವಾನ್ ನಲ್ಲಿ ಏಪ್ರಿಲ್ 22 ರಂದು ನಡೆದ ಎನ್ ಕೌಂಟರ್ ನಲ್ಲಿ ಇಬ್ಬರು ಜೈಷ್-ಇ- ಮೊಹಮ್ಮದ್ ಸಂಘಟನೆಯ ಉಗ್ರರನ್ನು ಹತ್ಯೆ ಮಾಡಲಾಗಿತ್ತು. ಸಾಂಬಾದ ಸೊಪೊವಾಲ್ ನಿಂದ ಮಿನಿ ಟ್ರಕ್ ವೊಂದರಲ್ಲಿ ಅವರನ್ನು ಕರೆತರಲಾಗಿತ್ತು. ಎಲ್ಲಿಂದಲೂ ಅವರು ನುಸುಳಿಕೊಂಡು ಬಂದಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿತ್ತು.
ಬಿಎಸ್ ಎಫ್ ನಿನ್ನೆ ದಿನ ಕಾರ್ಯಾಚರಣೆ ನಡೆಸುತ್ತಿದ್ದಾಗ ಸಾಂಬಾ ಸೆಕ್ಟರ್ ನಲ್ಲಿ ಅಂತಾರಾಷ್ಟ್ರೀಯ ಗಡಿ ಬಳಿಕ ಸುರಂಗ ಮಾರ್ಗವೊಂದನ್ನು ಗಡಿ ಭದ್ರತಾ ಪಡೆ ಯೋಧರು ಪತ್ತೆ ಹಚ್ಚಿದ್ದಾರೆ.