ಮನೆ ಜ್ಯೋತಿಷ್ಯ ತಲೆ ಬಾಗಿಲ ನೀಡುವ ಜಾಗದ ನಿರ್ಣಯ

ತಲೆ ಬಾಗಿಲ ನೀಡುವ ಜಾಗದ ನಿರ್ಣಯ

0

ಮನೆಯ ಯಾವ ದಿಕ್ಕಿಗೆ ತಲೆಬಾಗಿಲವನ್ನು ಹಚ್ಚುವದಿರುವದೋ  ದಿಕ್ಕಿನಲ್ಲಿ ಎರಡು ಗೋಡೆಗಳ ಮಧ್ಯೆ ಇರುವ ಒಟ್ಟು ಜಾಗದಲ್ಲಿ ಒಂಬತ್ತು ಭಾಗಗಳನ್ನು ಮಾಡಬೇಕು.

Join Our Whatsapp Group

ಬಲಗಡೆಯಿಂದ ಒಂದನೇ ಭಾಗವು ಚಂದ್ರ ಸ್ಥಾನವು ಇದು ಸಾಧಾರಣ ಎರಡನ್ನೇ ಸ್ಥಾನವು ಸೂರ್ಯನ ಸ್ಥಾನವು.ಇದು ಮರಣ ಸದೃಶವು. ಮೂರನೇ ಭಾಗವು ಮಂಗಳ ಸ್ಥಾನವು ಅಗ್ನಿ ಭಯವು ನಾಲ್ಕನೇ ಭಾಗವು ಬುಧ ಸ್ಥಾನವು. ಇದು ಸಾಧಾರಣ ಫಲವು.ಐದನೇ ಭಾಗವು ಗುರು ಸ್ಥಾನವು.ಇದು ಸರ್ವರಿಗೂ ಸರ್ವ ರೀತಿಯಲ್ಲಿಯೂ ಸೌಖ್ಯವು ಹಾಗೂ ಆರೋಗ್ಯ ಭಾಗ್ಯವೃದ್ಧಿಯ.ಆರನೇ ಭಾಗವು ಶುಕ್ರಸ್ಥಾನವು. ಸೌಭಾಗ್ಯವು. ಏಳನೇ ಭಾಗವು ಶನಿ ಸ್ಥಾನವು ಭಯ ಭಯವನ್ನುಂಟು ಮಾಡುವುದು.9ನೇ ಭಾಗವು ಕೇತು ಸ್ಥಾನವು ಇದು ಸದಾ ರೋಗಪ್ರದವನ್ನುಂಟು ಮಾಡುವುದು.ಹೀಗೆ ಸ್ಥಾನ ಫಲಗಳನ್ನು ತಿಳಿದು ಮನೆಗೆ ತಲೆ ಬಾಗಿಲನ್ನು ಹಚ್ಚಬೇಕು

 ಸಾರಾಂಶ : ಮಧ್ಯಭಾಗದಲ್ಲಿಯೇ ತಲೆ ಬಾಗಿಲನ್ನು ಹಚ್ಚುವುದು ಸರ್ವಶ್ರೇಷ್ಠವು ಮತ್ತು ಮನೆಯ ಬಲಭಾಗಕ್ಕೆ ತಲೆಬಾಗಿಲು ಇರುವದೂ ಶ್ರೇಷ್ಟವೆಂದು ವಾಸ್ತು ವಿಶ್ವಕರ್ಮ ಶಾಸ್ತ್ರದಲ್ಲಿ ಹೇಳಿದೆ.

 ತಲೆಬಾಗಿಲವನ್ನು ಇಡುವ ಕಾಲ ಮತ್ತು ನೇಮ :

    ಉತ್ತರ,ಹಾಸ್ತ,ಚಿತ್ತ,ರೋಹಿನಿ, ಸ್ವಾತಿ, ಶ್ರವಣ,ದನಿಷ್ಠ, ಶತಕಾರ, ಪುನರ್ವಸ್ಸು ನಕ್ಷತ್ರಗಳಲ್ಲಿಯೂ ಶುಭ ತಿಥಿಗಳಲ್ಲಿಯೂ, ಬುಧ ಶುಕ್ರ ಗುರುವಾರದೊಳು ಅಮೃತ ವೇಳೆಯಲ್ಲಿ ತಲೆ ಬಾಗಿಲವನ್ನು ಇಡತಕ್ಕದ್ದು.ನಂತರ, ಬಾಗಿಲವನ್ನು ಪೂಜಿಸಿ, ಬಾಗಿಲದ ಮೇಲ್ಭಾಗದಲ್ಲಿ ಉಣ್ಣೆಯ ಅಥವಾ ರೇಷ್ಮೆಯ ದಾರದಲ್ಲಿ ಒಂದೊಂದು ಲಿಂಬಿ ಹಣ್ಣು ಬಜಿ ಕೇರು ಕವಡಿ. ಬೆಟ್ಟಗೆಗಳನ್ನು ಪೂಣಿಸಿ ಕಟ್ಟತಕ್ಕದ್ದು.  ಇದರಿಂದ ಕೆಟ್ಟ ದೃಷ್ಟಿಯ ದೋಷ ನಿವಾರಣೆಯಾಗುವುದು.ಮೂರು ಬಾಗಿಲುಗಳನ್ನು ನೇರವಾಗಿ ಒಂದೇ ನಿಟ್ಟಾಗಿ ಇರಬಾರದು.

 ಶಂಕು ಸ್ಥಾಪನೆಯ ಜಾಗ ನಿರ್ಣಯವು :

     ಕಟ್ಟಿಸುತಕ್ಕ ಮನೆಯ ಉದ್ದಳತೆ ಒಟ್ಟು ಜಾಗವನ್ನು ಒಂಬತ್ತು ಭಾಗವಾಗಿ ವಿಂಗಡಿಸಲಾಗಿ ತಲೆ ಬಾಗಿಲದಿಂದ ಒಂದನೇ ಭಾಗವು ವಾಸ್ತುಪುರುಷನ ತಲೆಯು ಎರಡನೇ ಭಾಗವು ವಾಸ್ತು ಪುರುಷರ ತಲೆಯು ಎರಡನೇ ಭಾಗವು ಹಣೆ,ಕಣ್ಣು,ಮೂಗು, ಬಾಯಿಗಳು ಮೂರನೇ ಭಾಗವು ಕುತ್ತಿಗೆಯು  ನಾಲ್ಕನೇ ಭಾಗವು ಎದೆಯು 5ನೇ ಭಾಗವು ನಾಭಿ ನಾಭಿ ಸ್ಥಾನವು 6ನೇ ಭಾಗವು ನಡುವು ಏಳನೇ ಭಾಗವು ತೊಡೆಗಳು 8ನೇ ಭಾಗವು ಮೊಳಕಾಲು 9ನೇ ಭಾಗ ಪಾದಗಳು ಇರುತ್ತದೆ.

 ಫಲವಿಚಾರವು :

     ವಾಸ್ತು ಪುರುಷನ ತಲೆಯ ಭಾಗದಲ್ಲಿ ಶಂಕು ಸ್ಥಾಪನೆ ಮಾಡಲು ನಾಶಕರವು ಅಶುಭ ಹಣೆ ಮೂಗು ಬಾಯಿ ಸ್ಥಾನದಲ್ಲಿ ಸಂಕುಸ್ಥಾಪನೆ ಮಾಡಿದರೆ ಮರಣ ಸದೃಶ ಹಾನಿಯೂ ಪೀಡಾ ಕಾರಕವು  ಅಶುಭ ಕುತ್ತಿಗೆಯ ಸ್ಥಾನದಲ್ಲಿ ಸಾಧಾರಣ ಶುಭಕರವೂ ನಾಭಿ ಸ್ಥಾನದಲ್ಲಿ ಶಂಕುಷ್ಟಪನೆ ಮಾಡಿದರೆ ವಿಶೇಷ ಮೊಳಕಾಲುಗಳ ಸ್ಥಾನದಲ್ಲಿ ಶಂಕುಸ್ಥಾಪನೆ ಮಾಡಿದರೆ ಚೋರ ಭಯವು ಪಾದಗಳ ಸ್ಥಾನದಲ್ಲಿ ಶಂಕುಸ್ಥಾಪನೆ ಮಾಡಿದರೆ ರೋಗಾದಿಗಳ ಭಯವು ಉಂಟಾಗುತ್ತದೆಂದು ವಾಸ್ತು ಶಾಸ್ತ್ರದಲ್ಲಿ ಹೇಳಿದೆ ಆದ್ದರಿಂದ ಶಂಕು ಸ್ಥಾಪನೆಯನ್ನು ವಿಶೇಷ ಶುಭಕರವಾದ ನಾಭಿ ಸ್ಥಾನದಲ್ಲಿಯೇ ಮಾಡಬಹುದು ಒಳ್ಳೆಯದು.