ಕಲಬುರಗಿ:ಜೆಡಿಎಸ್- ಬಿಜೆಪಿ ಮೈತ್ರಿಯಿಂದ ಕಾಂಗ್ರೆಸ್ ಗೆ ಲಾಭ ಆಗುತ್ತೆ. ಮಾಜಿ ಪ್ರಧಾನಿ ಹೆಚ್ ಡಿ ದೇವೆಗೌಡರು ಯಾವತ್ತಾದ್ರು ಬಿಜೆಪಿ ಬಗ್ಗೆ ಒಲವು ತೋರಿಸಿದ್ರಾ ? ಮಗನ ಬಲವಂತ, ಮಗ ಕೊಡುವ ಹಿಂಸೆಯಿಂದ ದೇವೆಗೌಡರು ಮೈತ್ರಿಗೆ ಒಪ್ಪಿಕೊಂಡಿದ್ದಾರೆ ಎಂದು ಚಲುವರಾಯಸ್ವಾಮಿ ಹೇಳಿದರು.
ಈ ಕುರಿತು ಮಂಗಳವಾರ ಕಲಬುರಗಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಣೆ ಬರಹ ಬರೆಯಲು ಎಚ್ ಡಿ ಕುಮಾರಸ್ವಾಮಿ ಆಗಲಿ,
ಸಿ.ಪಿ.ಯೋಗೇಶ್ವರ್ ನಿಂದ ಸಾಧ್ಯವಿಲ್ಲ. ಹೀಗೆ ಮಾತಾಡಿ ಮಾತಾಡಿ ಯೋಗೇಶ್ವರ ಪರಿಸ್ಥಿತಿ ಈ ಮಟ್ಟಕ್ಕೆ ಬಂದಿದೆ ಎಂದು ಚಲುವರಾಯಸ್ವಾಮಿ ತಿಳಿಸಿದ್ದಾರೆ.
ಸಂಕ್ರಾಂತಿ ನಂತರ ಸರ್ಕಾರ ಪತನ ಆಗುತ್ತೆ ಅನ್ನೋ ಮಾಜಿ ಸಚಿವ ಹಾಗೂ ಬಿಜೆಪಿ ನಾಯಕ ಸಿ ಪಿ ಯೋಗೇಶ್ವರ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದರು. ಸಿ ಪಿ ಯೋಗೇಶ್ವರ ಹಣೆ ಬರ ಅವರೇ ಬರೆಯೋಕೆ ಆಗಿಲ್ಲ. ಪ್ರಧಾನಿ ಮೋದಿ ಅವರು ಯೋಗೇಶ್ವರ ಕ್ಷೇತ್ರಕ್ಕೆ ಬಂದು ಬೆಂಬಲ ಮಾಡಿದ್ರು ಸೋತಿದ್ದಾನೆ. ಹಾಗಾಗಿ ಬೇರೆ ಅವರ ಹಣೆ ಬಹರ ಬರೆಯೋಕೆ ಯೋಗೇಶ್ವರ್ ಗೆ ಆಗುತ್ತಾ ? ಎಂದು ಪ್ರಶ್ನಿಸಿದ್ದಾರೆ.
ಇನ್ನೂ ಸಿ ಪಿ ಯೋಗೇಶ್ವರ್ ಹೀಗೆ ಮಾತಾಡಿ ಮಾತಾಡಿ ಅವರ ಪರಿಸ್ಥಿತಿ ಈ ಮಟ್ಟಕ್ಕೆ ಆಗಿದೆ. ಕಾಂಗ್ರೆಸ್ ಹಣೆ ಬರಹ ಬರೆಯಲು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಆಗಲಿ, ಸಿ ಪಿ ಯೋಗೇಶ್ವರ್ ಗೆ ಸಾಧ್ಯವಿಲ್ಲ. ಇಡೀ ರಾಜ್ಯವನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸುತ್ತಾಡಿಸಿದ್ರು, ಆದರೆ, 60-65 ಸೀಟ್ ಗೆಲ್ಲುತ್ತೆ ಅಂತಾ ಅವ್ರು ಅಂದುಕೊಂಡಿರಲಿಲ್ಲ. ನಾವು ಜನರ ಆಶೀರ್ವಾದಿಂದ ಗೆದ್ದಿದ್ದೆವೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗೆ ಮುಳುಗಿ ಹೋಗುವ ಪರಿಸ್ಥಿತಿ ಬಂದಿದೆ ಹಾಗಾಗಿ ಒಬ್ಬರ ಕೈ ಒಬ್ಬರು ಹಿಡಿದುಕೊಂಡಿದ್ದಾರೆ. ಅವರ ನಡವಳಿಕೆಯಿಂದ ಜೆಡಿಎಸ್ ಅಧಿಕಾರ ಕಳೆದುಕೊಂಡಿದೆ. ಕಾಂಗ್ರೆಸ್ ಯಾವುದೇ ಕಾಲಕ್ಕೂ ಜೆಡಿಎಸ್ ಗೆ ಸಹಾಯ ಮಾಡುತ್ತಾ ಬಂದಿದೆ. ಆದರೆ, ಇವರು ಲಘುವಾಗಿ ಮಾತಾಡಬಾರದು ಎಂದು ಬಿಜೆಪಿ ಜೆಡಿಎಸ್ ನಾಯಕರ ವಿರುದ್ದ ಕಿಡಿಕಾರಿದರು.