ಮನೆ ಸುದ್ದಿ ಜಾಲ ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕನ್ನಡ ತಂತ್ರಾಂಶಗಳ ಅಭಿವೃದ್ಧಿ ಅಗತ್ಯ: ಬೇಳೂರು ಸುದರ್ಶನ

ಸಮುದಾಯದ ಶ್ರೇಯೋಭಿವೃದ್ಧಿಗಾಗಿ ಕನ್ನಡ ತಂತ್ರಾಂಶಗಳ ಅಭಿವೃದ್ಧಿ ಅಗತ್ಯ: ಬೇಳೂರು ಸುದರ್ಶನ

0

ಮೈಸೂರು: ಸಮುದಾಯದ ಜೊತೆಗೆ ಕನ್ನಡವನ್ನು ಅಭಿವೃದ್ಧಿ ಪಡಿಸುವಂತಹ ತಂತ್ರಾಂಶಗಳನ್ನು ರೂಪಿಸುವ ಕೆಲಸ ಆಗಬೇಕು. ಕಾರಣ ಜ್ಞಾನ ಮತ್ತು ತಂತ್ರಜ್ಞಾನ ಎರಡು ಒಟ್ಟಿಗೆ ಹೋಗಬೇಕು. ಜ್ಞಾನದ ಸಹಾಯವಿಲ್ಲದೆ ತಂತ್ರಜ್ಞಾನ ಬೆಳೆಯುವುದು ಕಷ್ಟಕರವಾಗುತ್ತದೆ. ಇದರಿಂದ ಕನ್ನಡ ಬೆಳವಣಿಗೆಯೂ ಕಂಡುಬಂದರೆ ಸಮುದಾಯದ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿಗಳ ಇ-ಆಡಳಿತ ಸಲಹೆಗಾರರಾದ ಬೇಳೂರು ಸುದರ್ಶನ ತಿಳಿಸಿದರು.

ನಗರದ ಆಡಳಿತ ತರಬೇತಿ ಸಂಸ್ಥೆಯಲ್ಲಿ ರಾಜ್ಯ ಸರ್ಕಾರ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಹಾಗೂ ಇ-ಆಡಳಿತ ಕೇಂದ್ರ ಆಯೋಜಿಸಿದ್ದ ಇ-ಕನ್ನಡ ಕಮ್ಮಟ್ಟ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ತಂತ್ರಜ್ಞಾನ ಬೆಳೆದರೆ ಜ್ಞಾನವು ಬೆಳೆಯುತ್ತದೆ. ಇವೆರಡು ಒಂದೇ ನಾಣ್ಯದ ಎರಡು ಮುಖಗಳು. ಇದರ ಜೊತೆಗೆ ಕನ್ನಡವು ಬೆಳವಣಿಗೆ ಆಗಬೇಕು ಹಾಗೂ ಕನ್ನಡ ತಂತ್ರಜ್ಞಾನ ಎಲ್ಲರ ಕೈಗೂ ಸಿಗಬೇಕು. ಈ ಹಿನ್ನೆಲೆಯಲ್ಲಿ 2019ರ ನವೆಂಬರ್ನಲ್ಲಿ ಕನ್ನಡ ತಂತ್ರಜ್ಞ ಆಸಕ್ತರ ಸಭೆಯನ್ನು ಬೆಂಗಳೂರಿನಲ್ಲಿ ಅಂದಿನ ಅಧ್ಯಕ್ಷರಾದ ಟಿ.ಎಸ್.ನಾಗಭರಣ ಅವರ ಅಧ್ಯಕ್ಷತೆಯಲ್ಲಿ ಇದೆ ಮಾದರಿಯಲ್ಲಿ ಸಭೆ ಮಾಡಿ ಚರ್ಚಿಸಲಾಗಿತ್ತು ಎಂದು ಮಾಹಿತಿ ನೀಡಿದರು.

ಕನ್ನಡದ ಅಭಿವೃದ್ಧಿಗಾಗಿ ಸ್ವಯಂ ಸೇವಕರಾಗಿ ಕೆಲಸ ಮಾಡುವವರಿದ್ದು, ಇವರು ಕನ್ನಡ ಅಭಿವೃದ್ಧಿಗಾಗಿ ಕನ್ನಡ ತಂತ್ರಾಜ್ಞಾನವನ್ನು ಬೆಳೆಸಿದಂತಹ ಅನೇಕ ವ್ಯಕ್ತಿಗಳು ಬಹಳಷ್ಟು ಮಂದಿ ನಮ್ಮ ನಿಮ್ಮ ನಡುವೆಯೇ ಇದ್ದಾರೆ. ಡಿಜಿಟಲ್ ವೇದಿಕೆಗಳಲ್ಲಿ ಕನ್ನಡ ಬೆಳೆಯಬೇಕು. ಪ್ರಕಾಶನ ರಂಗವೂ ಸಹ ಇದರಲ್ಲಿ ಕೈ ಜೋಡಿಸಬೇಕು. ಇವರು ತಂತ್ರಜ್ಞಾವನ್ನು ಬಿಟ್ಟು ಕೆಲಸ ಮಾಡಿದರೆ ಮತ್ತೆ ಹೊಸ ಸಮಸ್ಯೆಗಳು ಉದ್ಭವವಾಗುತ್ತವೆ. ಪ್ರಕಾಶನ ರಂಗದಲ್ಲಿ ಇ-ಬುಕ್ ತಂತ್ರಜ್ಞಾನ ಬೆಳೆಯಬಹುದು ಎಂದರು.

ಇ-ಕನ್ನಡ ಯೋಜನೆಯ ಯೋಜನಾ ನಿರ್ದೇಶಕರಾದ ಹೆಚ್.ಎಲ್.ಪ್ರಭಾಕರ್ ಅವರು ಮಾತನಾಡಿ, ಇಂತಹ ಯೋಜನೆಗಳನ್ನು ಸಮುದಾಯದ ಮಟ್ಟಕ್ಕೆ ತಲುಪಿಸಬೇಕು. ಮೊದಲನೆ ಹಂತದಲ್ಲಿ ಭಾಷೆ ಹಾಗೂ ತಂತ್ರಜ್ಞಾನದ ಬಗ್ಗೆ ಪ್ರೌಢತ್ವ ಇರುವವರನ್ನು ಸೇರಿಸಿಕೊಂಡು ಕನ್ನಡದ ಹಾಗೂ ಕನ್ನಡ ತಂತ್ರಜ್ಞಾನದ ಅಭಿವೃದ್ಧಿಗಾಗಿ ಒಂದು ಚೌಕಟ್ಟನ್ನು ರೂಪಿಸುವಂತಹ ಕೆಲಸ ಮಾಡಬೇಕು ಎಂದು ಹೇಳಿದರು.

ಇತ್ತೀಚಿನ ದಿನಗಳಲ್ಲಿ ಕನ್ನಡ ಭಾಷಾಂತರವನ್ನು ಗೂಗಲ್ ಮೂಲಕ ಭಾಷಾಂತರ ಮಾಡಲಾಗುತ್ತಿದೆ. ಇದಕ್ಕಾಗಿ ಒಂದು ಸೂಕ್ತವಾದ ವ್ಯವಸ್ಥೆಯನ್ನು ಜಾರಿಗೆ ತರಬೇಕು. ಕನ್ನಡದಲ್ಲಿ ಮಾಹಿತಿಗಳಿಗೆ ಯಾವುದೇ ಕೊರತೆ ಇರುವುದಿಲ್ಲ. ಹೀಗಾಗಿ ಸೂಕ್ತವಾದ ಸಲಹೆಗಳು ಬಂದರೆ ಕನ್ನಡವನ್ನು ಹಾಗೂ ಕನ್ನಡಕ್ಕೆ ಸಂಬoಧಪಟ್ಟoತಹ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಸಹಾಯಕವಾಗುತ್ತದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕುವೆಂಪು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿಗಳಾದ ಡಾ.ಕೆ.ಚಿದಾನಂದ ಗೌಡ ಅವರು, ಎಸ್ಟೋನಿಯಾ ಎಂಬ ಪುಟ್ಟ ದೇಶ ಇಂದು ಬ್ಲಾಕ್ ಚೈನ್ ತಂತ್ರಜ್ಞಾನದ ಅಳವಡಿಕೆಯಲ್ಲಿ ವಿಶ್ವಕ್ಕೇ ಮಾದರಿಯಾಗಿದೆ. ಭೂ ದಾಖಲೆಗಳು, ಪೌರತ್ವ ದಾಖಲೆಗಳು, ಮತದಾನದ ದಾಖಲೆಗಳು, ಬ್ಯಾಂಕ್ ದಾಖಲೆಗಳನ್ನು ಬ್ಯಾಕ್ ಚೈನ್ನಲ್ಲಿ ಅಳವಡಿಸಿಕೊಂಡಿದೆ. ಎಸ್ಟೋನಿಯಾದಲ್ಲಿ ಕಳೆದ ಎರಡು ಚುನಾವಣೆಗಳಲ್ಲಿ ಮತಹಾಕಲು ಜನರು ಮತಗಟ್ಟೆಗೆ ಹೋಗಿಲ್ಲ. ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಬಳಸಿ ಮನೆಯಲ್ಲೇ ಕುಳಿತು ಮತ ಚಲಾಯಿಸಿದ್ದಾರೆ ಎಂದು ತಿಳಿಸಿದರು.

 ಎಸ್ಟೋನಿಯಾದಂತ ಪುಟ್ಟ ದೇಶ ಬ್ಲಾಕ್ ಚೈನ್ ತಂತ್ರಜ್ಞಾನದ ಬಳಕೆಯಲ್ಲಿ ಮುಂದೆ ಇದೆ. ಆದರೆ, ಭಾರತ ಈ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವಲ್ಲಿ ಹಿಂದೆ ಉಳಿದಿದೆ. ಬ್ಯಾಂಕಿoಗ್, ವಿಮೆ, ಆರೋಗ್ಯ, ಸಾರ್ವಜನಿಕ ಆರೋಗ್ಯ ಸೇವೆಯನ್ನು ನೀಡಲು ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲು ಸಾಧ್ಯವಿದೆ. ಇದೊಂದು ಸುರಕ್ಷಿತ, ಮೌಲ್ಯಯುತ ಹಾಗೂ ಪಾರದರ್ಶಕ ತಂತ್ರಜ್ಞಾನವಾಗಿದೆ ಎಂದರು.

ಅಲ್ಲದೇ ಚಾಟ್ ಜಿ.ಪಿ.ಟಿ.ಯಂತಹ ತಂತ್ರಾoಶವನ್ನು ಆಡಳಿತಾತ್ಮಕ ಮತ್ತು ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಲು ಬಗೆಹರಿಸಲು ಬಳಕೆ ಮಾಡಬಹುದಾಗಿದೆ. ಇಂದು ತಂತ್ರಜ್ಞಾನ ನಮ್ಮ ಮುಂದೆ ಅಪಾರ ಸಾಧ್ಯತೆಗಳನ್ನು ತೆರೆದಿಟ್ಟಿದೆ. ನಾವು ಅವುಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಬೇಕಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಭಾಷಾಂತರ ನಿರ್ದೇಶನಾಲಯದ ನಿರ್ದೇಶಕರಾದ ಶ್ರೀ ಎಮ್‌. ವೆಂಕಟೇಶ್‌ ಹಾಗೂ ಕನ್ನಡ ಅಭಿವೃದ್ಧಿಪ್ರಾಧಿಕಾರದ ಕಾರ್ಯದರ್ಶಿಗಳಾದ ಸಂತೋಷ್‌ ಹಾನಗಲ್‌ ಅವರು ಉಪಸ್ಥಿತರಿದ್ದರು.

ಹಿಂದಿನ ಲೇಖನಮಾರ್ಚ್ 17ಕ್ಕೆ ‘ಕಬ್ಜ’ ಚಿತ್ರ ಬಿಡುಗಡೆ
ಮುಂದಿನ ಲೇಖನ6ನೇ ಬಾರಿ ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ವನಿತೆಯರ ಬಳಗ