ಮನೆ ಸ್ಥಳೀಯ ಅರಮನೆಯ ಟಿಕೆಟ್ ಪಡೆಯಲು ವಾಟ್ಸಪ್ ಟಿಕೆಟಿಂಗ್ ತಂತ್ರಾoಶದ ಅಭಿವೃದ್ಧಿ

ಅರಮನೆಯ ಟಿಕೆಟ್ ಪಡೆಯಲು ವಾಟ್ಸಪ್ ಟಿಕೆಟಿಂಗ್ ತಂತ್ರಾoಶದ ಅಭಿವೃದ್ಧಿ

0

 ಮೈಸೂರು: ಕರ್ನಾಟಕ ಸರ್ಕಾರದ ವಿದ್ಯುನ್ಮಾನ ನಾಗರೀಕ ಸೇವಾ ವಿತರಣಾ ನಿರ್ದೇಶನಾಲಯ (ಇಡಿಸಿಎಸ್) ವತಿಯಿಂದ ಮೊಬೈಲ್ ಒನ್ ಯೋಜನೆಯ ಮೂಲಕ ಮೈಸೂರು ಅರಮನೆಯನ್ನು ವೀಕ್ಷಿಸಲು ನಾಗರಿಕರು ಸಮಯ ಮತ್ತು ಶ್ರಮವನ್ನು ಉಳಿಸಲು ಹಾಗೂ ಅತಿ ಸುಲಭವಾಗಿ ಮೈಸೂರು ಅರಮನೆ ವೀಕ್ಷಿಸಲು ಮೊಬೈಲ್ ಮೂಲಕ ಟಿಕೇಟ್ ಖರೀದಿಸಲು ವಾಟ್ಸಪ್ ಟಿಕೆಟಿಂಗ್ ತಂತ್ರಾoಶವನ್ನು ಸರ್ಕಾರದ ಇಡಿಸಿಎಸ್ ಸಂಸ್ಥೆಯಿoದ ಅಭಿವೃದ್ಧಿಪಡಿಸಲಾಗಿರುತ್ತದೆ.

Join Our Whatsapp Group

 ಸಾರ್ವಜನಿಕರು ಈ ಯೋಜನೆಯ ಸೌಲಭ್ಯವನ್ನು ಆಗಸ್ಟ್ 14 ರಿಂದ ಪಡೆಯಬಹುದಾಗಿದ್ದು, ವಾಟ್ಸಪ್ ಮೊ.ಸಂ: 8884160088 ಗೆ  “Hi” ಎಂದು ಟೈಪ್ ಮಾಡುವ ಮೂಲಕ ಅಥವಾ ಮೈಸೂರು ಅರಮನೆ ಮಂಡಳಿಯ ವೆಬ್‌ಸೈಟ್ https://mysorepalace.karnataka.gov.in ನಲ್ಲಿ ನೀಡಿರುವ ವಾಟ್ಸಪ್ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವ ಮೂಲಕ ಕನ್ನಡ ಅಥವಾ ಇಂಗ್ಲೀಷ್‌ನಲ್ಲಿ ವಾಟ್ಸಪ್ ಟಿಕೇಟನ್ನು ಖರೀದಿಸಬಹುದಾಗಿರುತ್ತದೆ.

ಟಿಕೇಟ್ ಅನ್ನು ಖರೀದಿಸಿದ ದಿನದಿಂದ 05 ದಿನಗಳವರೆಗೆ ಟಿಕೇಟ್ ವ್ಯಾಲಿಡಿಟಿ ಇದ್ದು, ಬೆಳಗ್ಗೆ 10 ರಿಂದ ಸಂಜೆ 5.30 ರವರೆಗೆ ಅರಮನೆಯನ್ನು ವೀಕ್ಷಿಸಬಹುದಾಗಿರುತ್ತದೆ ಎಂದು ಮೈಸೂರು ಅರಮನೆ ಮಂಡಳಿಯ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.