ಮನೆ ರಾಜಕೀಯ ಮಹಾಲಕ್ಷ್ಮಿ ಲೇ‌ಔಟ್ ಕ್ಷೇತ್ರದಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕೆಲಸ: ಸಚಿವ ಕೆ.ಗೋಪಾಲಯ್ಯ

ಮಹಾಲಕ್ಷ್ಮಿ ಲೇ‌ಔಟ್ ಕ್ಷೇತ್ರದಲ್ಲಿ ಸಮರೋಪಾದಿಯಲ್ಲಿ ಅಭಿವೃದ್ಧಿ ಕೆಲಸ: ಸಚಿವ ಕೆ.ಗೋಪಾಲಯ್ಯ

0

ಬೆಂಗಳೂರು(Bengaluru): ಮಹಾಲಕ್ಷ್ಮಿ ಲೇ ಔಟ್ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ 68 ನೇ ವಾರ್ಡ್ ನ ಜೆಸಿ ನಗರದ 60 ಅಡಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಸ್ಥಳೀಯ ಶಾಸಕರೂ ಆದ ಅಬಕಾರಿ ಸಚಿವ ಕೆ.ಗೋಪಾಲಯ್ಯ ಇಂದು ಮುಂಜಾನೆ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮಹಾಲಕ್ಷ್ಮಿ ಲೇ‌ಔಟ್ ಕ್ಷೇತ್ರದ ಪ್ರತಿ ವಾರ್ಡ್ ಗಳನ್ನು ಮಾದರಿ ವಾರ್ಡ್ ಗಳನ್ನಾಗಿ ನಿರ್ಮಾಣ ಮಾಡಲಾಗುತ್ತಿದೆ. ಸಮರ್ಪಕ ಕುಡಿಯುವ ನೀರು, ಉತ್ತಮ‌ ರಸ್ತೆ, ಶುದ್ಧ ಕುಡಿಯುವ ನೀರಿನ‌ ಘಟಕಗಳು, ದೆಹಲಿ ಮಾದರಿಯ ಪಬ್ಲಿಕ್ ಸರ್ಕಾರಿ ‌ಶಾಲೆಗಳನ್ನು ನಿರ್ಮಾಣ ಮಾಡಲಾಗಿದ್ದು, ಅಭಿವೃದ್ಧಿ ಕಾರ್ಯಕ್ರಮಗಳು ಸಮರೋಪಾದಿಯಲ್ಲಿ ನಡೆದಿವೆ ಎಂದರು.

ಈ ಸಂದರ್ಭದಲ್ಲಿ ರೈಲ್ವೆ ನಾರಾಯಣ್ , ವೆಂಕಟೇಶ್, ವೆಂಕಟೇಶ್ ಮೂರ್ತಿ, ಶಿವಾನಂದ ಮೂರ್ತಿ,ವಾರ್ಡ್ ಅಧ್ಯಕ್ಷ ಆರ್.ನಾರಾಯಣ್,ಅವಿನ್ ಆರಾಧ್ಯ, ಬಿಬಿಎಂಪಿ ಇಂಜಿನಿಯರ್ ತಿಮ್ಮರಸು , ಸಹಾಯಕ ಇಂಜಿನಿಯರ್ ರಾಮದಾಸಪ್ಪ ಮತ್ತು ಸ್ಥಳೀಯರು ಉಪಸ್ಥಿತರಿದ್ದರು.

ಹಿಂದಿನ ಲೇಖನಬ್ಯಾಂಕ್ ಖಾತೆ ದುರ್ಬಳಕೆ: ಪತಿ, ಮಾವನ ವಿರುದ್ಧ ದೂರು ದಾಖಲಿಸಿದ ಚೈತ್ರಾ ಬಿ ಪೋತರಾಜ್
ಮುಂದಿನ ಲೇಖನಸಾವಿನ ಹಾದಿಯಾದ ಕೊಲ್ಹಾಪುರ-ಹುಬ್ಬಳ್ಳಿ ಹೆದ್ದಾರಿ, ಅಪಘಾತ ತಡೆಗೆ ಕ್ರಮಕೈಗೊಳ್ಳಿ: ಹೆಚ್ ಡಿಕೆ