ಸರಿಗಮ ಸಂಗಮ ಸರಿಗಮ ಪದನೀ
ಸಪ್ತ ಸ್ವರಗಳು ನರ್ತನ ಮಾಡಿವೆ ಶಾರದೆ ವೀಣಾ ನಾದದಲಿ
ಸಾವಿರ ದೀಪವು ಉರಿದೊಲು ತೋರಿದೆ | ಮಾತೆಯ ಮೂಗುತಿ ಮಿಂಚಿನಲಿ ।।
ಜ್ಞಾನ ಜ್ಯೋತಿಯು ಬೆಳಗುತಲಿಹುದು ಜಗದಂಬೆ ನೇತ್ರ ಪ್ರಕಾಶದಿ
ಕರುಣೆಯ ತುಂಗಾ ನದಿಯಾಗಿ ಬಂದಿದೆ ತಾಯಿಯ ಪುಣ್ಯ ಕ್ಷೇತ್ರದಲ್ಲಿ ।।
ಭಕ್ತಿಯು ತುಂಬಿದೆ ಕಣಕಣದಲ್ಲಿ ಶೃಂಗೇರಿಯ ಈ ಮಣ್ಣಿನಲ್ಲಿ
ಭಾವವೇ ಹೂವಾಗಿ ಅರಳಿಹುದಿಲ್ಲಿ ಭಗವತಿ ನಿನ್ನಯ ಸನ್ನಿಧಿಯಲ್ಲಿ ।।
ವೇದವೇ ಜೀವವ ತಳೆದಿಹುದಿಲ್ಲಿ ವಟುಗಳ ಮಂತ್ರ ಘೋಷದಲಿ
ಜೀವೋನ್ಮಾದವು ಹೊಮ್ಮಿಹುದಿಲ್ಲಿ ದರ್ಶನ ಪಡೆದ ಹೃದಯದಲಿ ।।