ಮಹದಾದಿದೇವ ನಮೋ ll ಪ ll
ಮಹದಾದಿದೇವ ನಮೋ
ಮಹಾಮಹಿಮನೆ ನಮೋ
ಪ್ರಹ್ಲಾದವರದ ಅಹೋಬಲ ನಾರಸಿಂಹ ll ಅ ಪ ll
ಧರಣಿಗುಬ್ಬಸವಾಗೆ ತಾರಾಪಥವು ನಡುಗೆ
ಸುರರು ಕಂಗೆಟ್ಟೋಡೆ ನಭವ ಬಿಟ್ಟು
ತರುಗಿರಿಗಳಲ್ಲಾಡೆ ಉದ್ಭವಿಸಿದೆ ನರಸಿಂಹ ll 1 ll
ಸಿಡಿಲಿನಂತೆ ಗರ್ಜಿಸುತ ಕುಡಿಯ ನಾಲಗೆ ಚಾಚಿ
ಅಡಿಗಡಿಗೆ ಲಂಘಿಸುತ ಕಡುಕೋಪದಿಂದ
ಮುಡಿ ಪಿಡಿದು ರಕ್ಕಸನ ಕೆಡಹಿ ನಖದಿಂದೊತ್ತಿ
ಕಡು ಉದರ ಬಗಿವೆ ಕಡುಗಲಿ ನಾರಸಿಂಹ ll 2 ll
ಸರಸಿಜೋದ್ಭವ ಹರ ಪುರಂದರಾದಿ ಸಮಸ್ತ
ಸುರರು ಅಂಬರದಿ ಪೂಮಳೆಯ ಕರೆಯೆ
ಸಿರಿಸಹಿತ ಗರುಡಾದ್ರಿಯಲಿ ನಿಂತು ಭಕುತನ
ಕರುಣಿಸಿದೆ ಪುರಂದರವಿಟ್ಠಲ ನರಸಿಂಹ ll 3 ll