ಮನೆ ದೇವರನಾಮ ಬೆಳಗಾಯ್ತು ಏಳು ಹೇ ಮುದ್ದು ಬೆನಕ

ಬೆಳಗಾಯ್ತು ಏಳು ಹೇ ಮುದ್ದು ಬೆನಕ

0

ಬೆಳಗಾಯ್ತು ಏಳು ಹೇ ಮುದ್ದು ಬೆನಕ ಭುವಿಯೆಲ್ಲ ರಂಗಾಯ್ತು ನೀ ಏಳೋ ಬೆನಕ ||2 times||

ಅಂಬ ಪ್ರಿಯ ತನಯ ಆದಿ ಪೂಜಿತನೆ ಮೂಡನದೆ ರವಿ ಎದ್ದ ನೀ ಏಳು ಬೆನಕ ||

ಮಾಮರದಿ ಕೋಗಿಲೆಯು ಪಚ್ಚ ವರ್ಣದ ಗಿಳಿಯು ಸುಪ್ರಭಾತವ ನಿನಗೆ  ಹಾಡುತಿವೆ ಬೆನಕ |2|

ಆ ನಿನ್ನ ಸೊಂಡೀಲು ನಿನ್ನ ಬರುವನು ಕಾದು |2|

ಕಾಲುಗಳ ತಿನ್ನುತಲಿ ಕುಳಿತಿಹುದು ಬೆನಕ ||

ಹುಲ್ಲು ಗರಿಕೆಯು ದೂರ್ವೆ ಆಗಿ ಕಾದಿಹುದು |

ಪೂಜೆಯಲಿ ನಿನ್ನ ಅಲಂಕರಿಸಲೆಂದು |

ನಾಗಲಿಂಗದ ಪುಷ್ಪ ಕಮಲಗಳು ಕಾದಿಹವು |2||

ಗಣಪತಿಯ ಅರ್ಚನೆಗೆ ಸಿದ್ಧವಾಗಿಹೆವೆಂದು ||

ನಿನಗಾಗಿ ಮಾಡಿಟ್ಟ ತಂಬಿಟ್ಟು ಚಕ್ಕುಲಿ |

ಕಾಯುತಿವೆ ನಿನ್ನ ಸ್ವೀಕಾರಕಾಗಿ |

ನಿನ್ನ ಪೂಜೆಯ ಮಾಡೆ ಭಕ್ತ ಜನ ವೃಂದ |2|

 ಕಾದಿಹುದು ನಿನ್ನ ವರ ಭಿಕ್ಷೆಗಾಗಿ ||