ರಾಘವೇಂದ್ರ ಪಾಲಿಸಯ್ಯ..ಪಾಲಿಸಯ್ಯ
ಯೋಗಿಚಂದ್ರ ಲಾಲಿಸಯ್ಯ…ಲಾಲಿಸಯ್ಯ
ಅಘನಾಶಕ ಮಂತ್ರಾಲಯ ನಿಲಯ ನಿಲಯ |
ಯೋಗಿಶಯನನ ಧ್ಯಾನ ಭಾಗಿರಥಿ ಸ್ನಾನ |
ಯಾಗವು ಯೋಗವು ಮಾಡಿ ನಾ ಕಾಣೆನಯ್ಯ ||
||ರಾಘವೇಂದ್ರ||
ತುಂಗತರಂಗಿಣಿಯೊಳು ಮಿಂದು ಮಡಿಯಲಿ ನಿಂದು
ಅಂಗನೆ ಪುರುಷರು ಸಿಂಧು ವಂದಿಸುತ | ಭಂಗುಬತ್ತಿದ ಮುಖ ಅಂಗಹೀನರ ಶೋಕ |
ನಿಲ್ಲಿಸಿ, ನಗಿಸೊ…ಓ ಮಂಗಳ ಮಹಿಮ…
ಮಂಗಳ ಮಹಿಮಾ…||ರಾಘವೇಂದ್ರ||
ವೃಂದಾರಕೇಂದ್ರನುತ ಆನಂದತೀರ್ಥ ಪ್ರಣಿತ ಗ್ರಂಥಾರ್ಥ ಪರಿಮಳ ಗಂಧಪರಿಸುತ
ಒಂದಾರು ಜನಸುರ ಮಂದಾರ ನೆನಿಸಿ | ಆನಂದ ಮಂದಿರಕೃತ ವೃಂದಾವನ ಸ್ಥಿರ…
ವೃಂದಾವನ ಸ್ಥಿರ…||ರಾಘವೇಂದ್ರ||
ವೇದಾಪುರಾಣ ಶಾಶ್ತ್ರಧಾರ ತೋರಿಸಿ, ವೇದ ಸಾಧಿಸಿ, ಮಾಯಾವಾದಿಗಳನ್ನು ಜಯಿಸಿ
ಬಾದರಾಯಣ ಪೂರ್ಣಭೋಧರ ಮೆಚ್ಚಿಸಿ | ಶ್ರೀಧರನ ಹರಿವಿಠ್ಠಲ…ಶ್ರೀಧರನ ಹರಿ ವಿಠ್ಠಲ. ….ಪ್ರಸಾದ ಹೊಂದಿದ ಗುರು..||ರಾಘವೇಂದ್ರ||