ಕೀರ್ತನಕಾರರು : ಗುರುಜಗನ್ನಾಥ ವಿಠಲರು
ಎದ್ದು ಬರುತಾರೆ ನೋಡೆ ತಾವೆದ್ದು ಬರುತಾರೆ ನೋಡೆ ।।ಪ।।
ಮುದ್ದು ಬೃಂದಾವನ ಮಧ್ಯದೊಳಗಿಂದ ।।ಅ.ಪ।।
ಕರದೊಳು ಶ್ರೀ ತುಳಸಿ ನಳಿನಾಕ್ಷಿ ಮಾಲೆಗಳು
ಚೆಲುವ ಮುಖದೊಳು ಪೊಳೆವ ದಂತಗಳಿಂದ |
ತಿದ್ದಿ ಹಚ್ಚಿದ ನಾಮ ಮುದ್ರೆಗಳೊಪ್ಪುತಿವೆ ।।೧।।
ಹೃದಯಸದನದಲ್ಲಿ ಪದುಮನಾಭನ ಭಜಿಸಿ
ಮುದಮನದಿಂದ ನಿತ್ಯಪದ ಕಮಲರೂಪ ತಾಳಿ ।।
ದಾತಗುರು ಜಗನ್ನಾಥ ವಿಠಲನ
ಪ್ರೀತಿಯ ಪಡಿಸುತ ದೂತರ ಪೊರೆಯುತ ।। ೨।।