ಮನೆ ದೇವರನಾಮ ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆ

ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆ

0

ಅಂಬೆ ಶ್ರೀ ಅಂಬೆ ಜಗದಂಬೆ ಶರಣೆಂಬೆ

ಅಂಬುಜಾಯತಾಂಬಕನ ಇಂಬಲಿಹ ಬೊಂಬೆ ||

ಕಾವನಯ್ಯನ ಭಟರ ಕಾವೆ ವರವೀವೆ

ದೇವಾದಿ ದೇವರ್ಕಳಿಗೆ ಕುಲದ ದೇವಿ

ಭಾವಕರ ಜೀವೆ ಚಿದ್ಭವನೈದಿಸುವೆ

ಸೇವಕರಾವೆ ಕಾಯಿ ಎನುವೆ ಧನ್ಯ ಎನುವೇ||

ಮಾಯಾಗುಣಮಯ ಅಂಬಾ ತರುವ

ಹೊಂದಿರುವೆ ತಾಯಂದಿರಖಿಳಾರ್ಥ ತಾಯಿ

ನೀನೀವೆ ಬಾಯೆನ್ನ ತಾಯೆನ್ನಲಾಯಾಸ

ಬಿಡಿಸುವೆ ಎನ್ನಯ ಪ್ರಿಯಳೆ ಪೀಯುಷನುಣಿಸುವೆ ||

ಬೊಮ್ಮನಿಗಮ್ಮ ಪರಬೊಮ್ಮನೊಲಿಸಮ್ಮ

ಸುಮ್ಮನಸರ ಮನೋರಮ್ಮೆ ಶ್ರಿರಮ್ಮೆ

ನಿಮ್ಮ ಮನ ನಮ್ಮರಿಯಾ ಉಮ್ಮಯವೀಯಮ್ಮ

ನಮ್ಮಯ ಪ್ರಸನ್ನ ವೆಂಕಟನ ಮೆಚ್ಚಿಸಮ್ಮ ||

ಹಿಂದಿನ ಲೇಖನಕೆ.ಆರ್.ಪೇಟೆ: ಮಳೆಗಾಗಿ ಪ್ರಾರ್ಥಿಸಿ ಬಾಲಕರಿಬ್ಬರಿಗೆ  ಮದುವೆ
ಮುಂದಿನ ಲೇಖನತೂಕ ನಷ್ಟಕ್ಕೆ ಮೊಟ್ಟೆ ಪ್ರಯೋಜನಕಾರಿ