ಮನೆ ದೇವರ ನಾಮ ಅಲ್ಲಿ ನೋಡಲು ರಾಮ ಇಲ್ಲಿ ನೋಡಲು

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು

0

ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ

ಎಲ್ಲೆಲ್ಲಿ ನೋಡಿದರ ಅಲ್ಲಿ ಶ್ರೀರಾಮ || ಪ ||

ರಾವಣನ ಮೂಲಬಲ ಕಂಡು ಕಪಿಸೇನೆ

ಆವಾಗಲೆ ಬೆದರಿ ಓಡಿದವು |

ಈ ವೇಳೆ ನರನಾಗಿ ಇರಬಾರದೆಂದೆಣಿಸಿ

ದೇವ ರಾಮಚಂದ್ರ ಜಗವೆಲ್ಲ ತಾನಾದ ||

ಅವನಿಗೆ ಇವ ರಾಮ ಇವನಿಗೆ ಅವ ರಾಮ

ಅವನಿಯೊಳ್ ಈ ಪರಿ ರೂಪವುಂಟೆ

ಲವಮಾತ್ರದಿ ಅಸುರ ದುರುಳರೆಲ್ಲರು

ಅವರವರ್ ಹೊಡೆದಾಡಿ ಹತರಾಗಿ ಪೋದರು || ೨ ||

ಹನುಮದಾದಿ ಸಾಧುಜನರು ಅಪ್ಪಿಕೊಂಡು

ಕುಣಿಕುಣಿದಾಡಿದರು ಹರುಷದಿಂದ

ಕ್ಷಣದಲಿ ಪುರಂದರ ವಿಠಲರಾಯನು

ಕೊನೆಗೊಡೆಯನು ತಾನೊಬ್ಬನಾಗಿ ನಿಂತ || ೩ ||