ಮನೆ ದೇವರ ನಾಮ ಅರಸಿನಂತೆ ಬಂಟನೋ ಹನುಮಂತರಾಯ

ಅರಸಿನಂತೆ ಬಂಟನೋ ಹನುಮಂತರಾಯ

0

ಅರಸಿನಂತೆ ಬಂಟನೋ ಹನುಮಂತರಾಯ ||

ದೊರೆಯ೦ತೆ ಸೇವಕನೋ ||

ಅರಸಿನಂತೆ ಬಂಟನೆಂಬುದು ನಿನ್ನೊಳು |

ಕುರುಹು ತೋರಿತು ಮೂರು ಲೋಕಕೆ ಹನುಮ ||

ಒಡೆಯನಂಬುಧಿಯೊಳು ಪೊಕ್ಕು ವೇದವ ತಂದು |

ತಡೆಯದೆ ಅಜಗಿತ್ತನೆಂದೆನುತ ||

ಸಡಗರದಿಂದ ಶರಧಿಯ ದಾಟಿ ಪೆರ್ಮುಡಿಯ

ಮಾಣಿಕವ ರಾಘವಗಿತ್ತೆ ಹನುಮ ||1||

ಮಂದರಧರ ಗೋವರ್ಧನ ಗಿರಿಯನು

ಲೀಲೆಯಿಂದಲಿ ನಿಂದು ನೆಗಹಿದನೆನುತ |

ಸಿಂಧು ಬಂಧನಕೆ ಸಮಸ್ತ ಪರ್ವತಗಳ

ತಂದು ನಳನ ಕೈಯೊಳಗಿತ್ತೆ ಹನುಮ ||2||

ಸಿರಿಧರ ವರ ಕಾಗಿನೆಲೆಯಾದಿಕೇಶವರಾಯನು |

ಸುರರಿಗಮೃತವನು ಎರೆದನೆನುತ ||

ಮೆರೆವ ಗಿರಿಯ ವಾಸ ಕಪಿಕೂಲ ಸೌಮಿತ್ರಿ |

ಗೆರೆದು ಶ್ರೀರಾಮನ ನಿಜದೂತನೆನಿಸಿದೆ ಹನುಮ ||3||