ಜಯ ಜಯ ಸರಸ್ವತಿ ಜಯ ವರ ಪೂರಣಮತಿ ತ್ರೈಲೋಕದಲ್ಲಿ ಖ್ಯಾತಿ ಜಯ ಸುಖೀರ್ತಿ ||
ವಿದ್ಯಾವರದಾಯಿನಿ ಸಿದ್ಧಿಗೆ ಶಿಖಾಮಣಿ | ಬುದ್ಧಿ ಪ್ರಕಾಶಿನಿ ಸದ್ ಭಾಷಿಣಿ ||1||
ಕರಕಮಲದಲ್ಲಿ ವೀಣೆ ಸುರಸ ಅಮೃತ ವಾಣಿ| ವರವಿಧ್ಯದಲ್ಲಿ ದಾನಿ ಸುಪ್ರವೇಣಿ ||
ಪ್ರಸನ್ನವದನಿ ವಿಶ್ವದಲ್ಲಿ ನೀ ಪೂರ್ಣಿ | ಹಂಸವಾಹಿನಿ ಪೂರ್ಣಿ ಸ್ವಸಿದ್ಧಿನಿ ||
ಸದಾ ಸದ್ಗುರು ಸ್ತುತಿ ಓದುವವನಿಗೆ ಸುಕೀರ್ತಿ ಇದೇ ಮಹಿಪತಿ ಕೃತಿ ಭೋದಿಸು ಮತಿ ||