ಪುಂಡರೀಕ ವರದ ಪಂಡರಿ ರಾಯನ ಕೇಳವ್ವ ಕೇಳೆ||
ಗೋಕುಲದೊಳಗೆ ತಾನಿಪ್ಪ ಮೂರು ಲೋಕಕೆ ತಾನಪ್ಪ
ಕೊಳಲ ಧ್ವನಿಯ ಮಾಡುತಲಿಪ್ಪ ನಮ್ಮ ತುರುಗಳ ಕಾಯುತಲಿಪ್ಪ ||
ವೃಂದಾವನದೊಳು ನಿಂದಾ ನಂದನ ಕಂದ ಗೋವಿಂದ
ಕೊಳಲ ಧ್ವನಿ ಬಹು ಚಂದ ಮೂಜಗವ ಪಾಲಿಪ ಮುಕುಂದ ||
ಸುರ ತರುವಿನ ನೆರಳಲ್ಲಿ ಇವನ ಹೆಗಲಿನ ಮೇಲೆ ಕೊಡಲಿ
ನೆರೆದಿಹ ಗೋಪಿಯರಲ್ಲಿ ಗೋಪಾಲರಾಡುವ ಲೀಲೆಗಳಲ್ಲಿ||
ಕರ್ಪೂರ ವೀಳ್ಯವ ಮೆಲುವ ನಮ್ಮ ಕಸ್ತೂರಿ ತಿಲಕ ಉಂಗುರ
ಮುತ್ತಿನ ಓಲೆ ವರ ಚೆಲುವ ವಿಸ್ತಾರದಿ ಹದಿನಾಲ್ಕು ಲೋಕ ಪೊರೆವ||
ಹಿಮಕರ ಚರಣದ ಕರಣ ಮೂಜಗ ಪಾಲಿಪ ಕರುಣ
ಅಮರರಿಗೆ ಒಲಿದವನ ನಮ್ಮ ಪುರಂದರ ವಿಠಲ ರಾಯನ ||