ಮನೆ ದೇವರ ನಾಮ ಇಲ್ಲಿರುವ ದೇವತೆಯು ಮೂಕಾಂಬಿಕಾ

ಇಲ್ಲಿರುವ ದೇವತೆಯು ಮೂಕಾಂಬಿಕಾ

0

ಇಲ್ಲಿರುವ ದೇವತೆಯು ಮೂಕಾಂಬಿಕಾ |

ಇಲ್ಲಿ ಹರಿಯುವ ನದಿಯು ಸೌಪರ್ಣಿಕಾ ||

ಇಲ್ಲಿ ನಡೆಯುವ ಘಟನೆ ಎಲ್ಲವೂ ದೈವಿಕ |

ಕೊಲ್ಲೂರು ಭೂಮಿಯಲ್ಲಿ ದೇವಲೋಕ ||

ಈ ದೇವಿ ಆಭರಣ ಇತಿಹಾಸ ತುಂಬುತಿರೆ |

ಈ ದೇವಿ ಮುಖಭಾವ ನವ ಜೀವನ ಹೇಳುತಿರೆ |

ಸ್ವರ್ಣರೇಖೆಯ ಕಂಡು ರೋಮಾಂಚನ ಮೂಡಿದೆ|

ಸ್ವರ್ಗವೇ ಆಯಿತು ಈ ದೇವಿ ಆಸರೆ ||

ನವರಾತ್ರಿಯಲಿ ಮೈತಾಳಿ ನಿಂತು |

ಭಕುತರನು ಹರಸುವಳು ಕೋರಿಕೆಯನ್ನಿತ್ತು |

ಶರಣಾಗಿ ನಮಿಸಿದರೆ ಹರಕೆ ಹೊತ್ತಲ್ಲಿ |

ನಗುನಗುತ್ತಾ ಹರಸುವಳು ಶುಭ ಮಸ್ತು ಶುಭ ಮಸ್ತು ||

ಹಿಂದಿನ ಲೇಖನಜೆಡಿಎಸ್ ವಿಸರ್ಜನೆ ಮಾಡಲಿ ಎಂದ ಸಿಎಂ ಸಿದ್ದರಾಮಯ್ಯಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತರಾಟೆ
ಮುಂದಿನ ಲೇಖನಸೋಯಾಬೀನ್ ಸೇವಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನ