ಮನೆ ದೇವರನಾಮ ಹೀಗೆ ಮಾಡಬೇಕೋ-ವಿಠಲ ತಂದೆ

ಹೀಗೆ ಮಾಡಬೇಕೋ-ವಿಠಲ ತಂದೆ

0

ಹೀಗೆ ಮಾಡಬೇಕೋ-ವಿಠಲ ತಂದೆ

ಹೀಗೆ ಮಾಡಬೇಕೋ || ಪ ||

ಹೇಗಾದರು ದುರಿತಗಳೆನ್ನ ಕಾಡದ

ಹಾಗೆ ಮಾಡ ಬೇಕೋ || ಅ .ಪ ||

ಹಿಂದಿನ ಸುಕೃತಗಳ ಫಲದಿಂದ ಬಂದೀ ನರ ಜನುಮ

ಮುಂದೆ ನಾ ತಾಯ ಉದರದಲಿ ಜನಿಸದ

ಹಾಗೆ ಮಾಡಬೇಕೋ ವಿಠಲ ತಂದೆ || 1 ||

ದಾನಿ ನಿನ್ನನು ಬೇಡುವೆ ದುಷ್ಕರ್ಮದ -ಹಾನಿಯೊಂದೇ ಸಾಲದೆ

ಹೀನ ಮಾನವರಿಗೆ ನಾನು ಕೈಯಾನದ

ಹಾಗೆ ಮಾಡಬೇಕೋ ವಿಠಲ ತಂದೆ || 2 ||

ಕರುಣಿ ಪುರಂದರವಿಠಲ ತಂದೆ ನೆರೆನಂಬಿದೆ ನಿನ್ನ

ಶರಣ ರಕ್ಷಕನೆಂಬ ಬಿರುದು ಬೇಕಾದರೆ

ಹೀಗೆ ಮಾಡಬೇಕೋ ವಿಠಲ ತಂದೆ || 3 ||