ಶಿವ ಶಿವ ಎಂದರೇ ಭಯವಿಲ್ಲ |
ನಾಮಕೆ ಸಾಟಿ ಬೇರಿಲ್ಲ |
ಶಿವ ನಾಮಕೆ ಸಾಟಿ ಬೇರಿಲ್ಲ ಶಿವ ಭಕ್ತನಿಗೆ ನರಕಾ ಇಲ್ಲ ||
ಜನುಮಜನುಮಗಳ ಕಾಟವು ಇಲ್ಲ
ಅನ್ನ ದಾನದ ತೊರೆಯದಿರು ನಾನು ನನ್ನದು ಎನ್ನದಿರು ||
ಉನ್ನತಿ ಸಾಧಿಸಿ ಹಗಲಿರುಳು ||
ಧೀನನಾಥನ ಮರೆಯದುರು ||
ಭೋಗಭಾಗ್ಯದ ಬಲೆಯೊಳಗೆ ಬಳಲಿ ಬಾಡದೆ ಇಳೆಯೊಳಗೆ ||
ಕಾಯಕ ಮಾಎಉತ ಎಂದೆದೂ ||
ಆತ್ಮಾನಂದವ ಸವಿಯುತಿರು
ದಾನವೆ ಜಗದೋಳು ತಪವಯ್ಯ |
ಧ್ಯಾನವೆ ಘನಕರ ಜಪವಯ್ಯ ||
ಅಪಕಾರವ ನೀ ಮಾಡಿದರೆ ||
ಕೈಲಾಸವದು ಸಿಗದಲ್ಲಾ || ಶಿವ ಶಿವ ||