ಕಲ್ಯಾಣಾದ್ಬುತ ಗಾತ್ರಾಯ |
ಕಾಮಿತಾರ್ಥ ಪ್ರದಾಯಿನಿ |
ಶ್ರೀ ಮದ್ವೆಂಕಟನಾಥಾಯ |
ಶ್ರೀನಿವಾಸಯತೇ ನಮಃ ||
ಮನವೆ ಕುಣಿದಿದೆ ಗೋನಿಂದ ||
ನಿನ್ನ ಪಾದವ ಸ್ಪರ್ಶಿಸಲಾನಂದ ||
ಲೋಕವೆ ನೀನು ಗೋವಿಂದ |
ನಿನ್ನ ನೆರಳಿನ ನನಗೆ ಆನಂದ |
ಜನ್ಮಗಳೇಳು ಸಾಲದು ನಿನ್ನ ಪೂಜಿಸುವಾಸೆ ತೀರದು|| ||ಮನವೆ||
ಶಕ್ತಿಯು ದೇಹದಿ ತುಂಬಿರುವಾಗ |
ನಿನ್ನಾ ನಾನು ನೆನೆಯಲು ಇಲ್ಲ|
ಭಕ್ತರು ಕೋಟಿ ಕಣ್ಣೇದುರಿರಲು|
ಭಕ್ತಿಯು ನನಗೇಕೆ ಬರಲಿಲ್ಲ|
ಕಾಮಾಂದದಲಿ ಮುಳುಗಿದೆ ನಾನು ||
ಕ್ರೋಧದ ಪೀಠದಿ ಮೇರೆದೆನು ನಾನು |
ನನ್ನಾ ಕಣ್ಣನು ತೆರೆಸಿದೆ ನೀನು |
ನನ್ನಯ ತಪ್ಪನು ಮನ್ನಿಸೆ ಏನು |
ಸ್ವಾಮಿ ವೆಂಕಟೇಶ ನಮೋ ತಿರುಮಲೇಶ|| ||ಮನವೆ||
ಸ್ವಾರ್ಥದ ಬದುಕಲಿ ಈಜೀದೆ ನಾನು |
ದಾನ ಧರ್ಮವ ಮರೆತೆನು ನಾನು |
ದುಷ್ಟರ ಕೂಟದ ದೊರೆಯಾದೆನು ನಾ |
ಅಟ್ಟ ಹಾಸದಲಿ ಮೆರೆದಾಡಿ ನಾ |
ಹಣ ಹೊಂದಿದ್ದರೆ ಸಾಕು ಎಂದೆ |
ನಿನ್ನ ಮರೆತು ಮುರ್ಖನಾದೆ |
ಜ್ಞಾನದ ಕಣ್ಣುತೆರೆಸಿದೆ ನೀನು |
ಕತ್ತಲೆಯಿಂದ ಸರಿಸಿದೆ ನೀನು |
ಉಸಿರಿರುತನಕ ಮರೆಯಲು ನಾನು |
ನಿನ್ನಾ ಜಪಿಸುತ ಮಡಿವೆನು ನಾನು |
ಸ್ವಾಮಿ ವೆಂಕಟೇಶ ನಮೋ ತಿರುಮಲೇಶ|| ||ಮನವೆ||