ಪಾರ್ವತಿ ತಪಸಿನ ಪುಣ್ಯಾಫಲ ಗಣಪತಿ ಎಂಬ ಮಹಾಬಲ ||
ಎಲ್ಲ ಬಲ್ಲ ಈ ವಲ್ಲಭನು |
ವೀರಾಗ್ರಣಿಗಳ ವೀರನು |
ಪಾರ್ವತಿ ತಪಸಿನ ಪುಣ್ಯಾ ಫಲ |
ಗಣಪತಿ ಎಂಬ ಮಹಾಬಲ |
ಮೋದಕ ಹಸ್ತದ ಮೂಷಿಕ ವಾಹನ ಮೋದಕ ತರುವನು ಅನುದಿನ ||
ಚೌತಿಯ ಗಣಪನ ನೆನದ ತಕ್ಷಣ |
ಧನ್ಯವಾಗುವುದು ಜೀವನ || ಪಾರ್ವತಿ||
ಗೌರಿಯ ಜೊತೆಯಲಿ ಬರುವ ಗಣಪತಿ ತಾಯಿಯ ಮೇಲೆ ಇವನಿಗೆ ಪ್ರೀತಿ ||
ನೀಡುವ ಜನರಿಗೆ ನಿರ್ಮಲ ಭಕ್ತಿ|
ಇವನೇ ತರುವನು ಶಾಶ್ವಾತ ಕೀರ್ತಿ ||ಪಾರ್ವತಿ||