ಮನೆ ದೇವರ ನಾಮ ಹರಿ ಹರಿ ಎನ್ನುತ

ಹರಿ ಹರಿ ಎನ್ನುತ

0

ಹರಿಯುವ ನದಿಯು ಹರುಷದಲಿ |

ತನ್ನ ಶೃತಿಯನು ಸೇರಿಸಿ ಹಾಡುತಿದೆ |

ಬೀಸುವ ಗಾಳಿಯು ಜೊತೆಯಾಗಿ |

ಧನಿಯನು ಕೂಡಿಸಿ ಹಾಡುತಿದೆ |

ಪ್ರಕೃತಿಯೆ ನಿನ್ನೊಡನೊಂದಾಗಿ  |

ಆ ಶ್ರೀಪತಿ ಧ್ಯಾನವ ಮಾಡುತಿದೆ ||

ಹರಿ ಹರಿ ಎನ್ನುತ ನೀ ಹಾಡು ಹರಿ ನಾಮದ ಮಹಿಮೆಯ ನೀ ನೋಡು || 

ಬಣ್ಣಿಸಲಾಗದ  ಆನಂದ ನೀ ಕಾಣುವೆ  ಆಗ  ಓ ಕಂದ

ಪ್ರೇಮದಿ ಬಾ ಎಂದು |

ಎಲ್ಲಿದ್ದರೂ ಅವನು ಆಲಿಸುವ |

ಅಮ್ಮನ ಕೂಗಿಗೆ ಓಗೊಡುವ  |

ಹಸು ಕಂದನ ಹಾಗೆ ಬಳಿ ಬರುವ |

ನಿಜ ಭಕ್ತಿಗೆ ಅವನು ಸೋಲುವುದು | 

ತನ್ನ ಭಕ್ತರನ್ನೇ ಕಾಪಾಡುವುದು  || ಹರಿ ಹರಿ ||