ಮನವೆಂಬ ಬಾಗಿಲು ತೆರೆದಿರುವೆ ಬಲಗಾಲಿಟ್ಟು ಒಳಗೆ ಬಾ ಗಣಪತಿಯೆ ರಿದ್ದಿ ಸಿದ್ದಿಯ ಜೊತೆಗೆ ನೀ ಬೇಗ ಬಾ ವಿದ್ಯೆ ಬುದ್ದಿಯನು ನೀ ನೀಡು ಬಾ !!
ಮಗುವಂತೆ ನಾನು ಎತ್ತಿಕೊಳ್ಳು ಬೇಗ ನಗುಮೊಗದಲಿ ಹರಸು ನನ್ನನು ಈಗ ನಿನಗಾಗಿ ಮೋದಕ ನೈವೇದ್ಯ ಮಾಡುವೆ ನಿನ್ನ ಪೂಜೆಗಾಗಿ ಮೋದಕ ನೈವೇದ್ಯ ಮಾಡುವೆ ನಿನ್ನ ಪೂಜೆಗಾಗಿ ಗರಿಕೆಯ ತರುವೆ !!
ಮನದ ಕತ್ತಲೆಯ ನೀನೋಡಿಸು ಬಾ ನಾಳಿನ ವಿಘ್ನಾಗಳ ನೀ ಪರಿಹರಿಸು ಬಾ ಕಷ್ಟಗಳ ಬರದಂತೆ ನೀ ಕರುಣಿಸು ಬಾ ಇಷ್ಟಾರ್ಥಗಳನ್ನೆಲ್ಲ ನೀನಿತ್ತು ಸಲಹು ಬಾ !!














