ಬಾರೋ ಜಗನಾಥನೆ ನೀ ತೋರೋ ಕರುಣೆ |
ಹರಿಯ ಸೇವಕನೆ ನರಹರಿಯ ಪ್ರಿಯನೇ ||
ನಾನಾ ವಿಧದ ಗ್ರಂಥಗಳ ಬರೆದೆ ಜಗದಲಿ ಹರಿಯ ಭಕ್ತಿಯ ಸಾರಿದೆ ಹರಿಕಾಥಮೃತದ ಅಮೃತ ಉಣಿಸಿದೆ ಮನೆಮನೆಯಲಿ ಹರಿ ಕಿರ್ತನೆಯ ಬೆಳೆಸಿದೆ ||
ಮುಕ್ತಿಯು ದಾರಿಯ ತೋರಿದೆ ನೀನು ಪಾಡುರಂಗನ ಕಂಡಹೆ ನೀನು ಜಗನ್ನಾಥ ವಿಟಲ ಫಲಕವ ಪಡೆದೆ ಧನ್ಯ ಧನ್ಯ ನೀನು ಈ ಜಗದೆ ||
ರಾಘವೇಂದ್ರರ ಪ್ರೀತಿಯ ಕಂದ ನಿನಗಾರು ಸಮನಾರು ಅರವಿಂದ ಭಾಗವತದ ಸಾರವ ಹರಿಸುತ ನೀನು ಜಾಹ್ನವಿ ವಿಠ್ಠಲನ ಪರಮ ಭಕುತನು ||