ತೋರೋ ಗುರುರಾಯ, ನಿನ್ನಾ ಕರುಣವ ಜೀಯಾ|
ಸಾರಿ ಬಂದೆ ನೀನೆ ಗತಿಎಂದು ಕಾಯೋ ರಾಯ||ಪ
ಸುಖ ದುಃಖದ ಸಂಸಾರದಲಿ ದಾರಿಕಾಣದೆ ಬಳಸುತ|
ನಿನ್ನ ತವ ಸೇವೆಯ ಭಾಗ್ಯ ಬೇಕೆನುತ ನಾ ಬಂದೆ || 1
ಇರಲೆನಗೆ ನಿನ್ನ ಕರಣದ ಕೃಪೆಯು ಗುರುವೆ |
ಭವಭಯವ ದೂರ ಮಾಡೆಂದು ನಾ ಬಂದೆ || 2
ನಿನ್ನ ಕೃಪೆ ಇದ್ದರೆ ಮೂಕನು ಮಾತನಾಡುವನು|
ನಿನ್ನಕರುಣೆಯಿಂದ ಕುಂಟನು ನಡೆಯುವನು ||3
ನಿನ್ನ ಒಲುಮೆಯೊಂದಿರುವಾಗ ಬಾಳು ಬೆಳಗೆ |
ನಿಜ ಗುರು ರಾಘವೇಂದ್ರ ನಾಮದ ಮಹಿಮೆ ಅರಿತೆ || 4
ನೀರೋಳಗಿನ ಮೀನು ಮುಳಗದೆ ಮೇಲೇಳವಂತೆ |
ಭವ ಸಾಗರದ ದಾಟಿಸೋ ರಾಘವೇಂದ್ರ ಜಾಹ್ನವಿ ವಿಠಲ ಪ್ರಿಯಾ ||