ಶಿವನೊಲಿದರೆ ಭಯವಿಲ್ಲ |
ಶಿವಮುನಿದರೆ ಬದುಕಿಲ್ಲ|
ಶಿವನಲ್ಲದೆ ಹರನಲ್ಲದೆ ಗತಿ ಯಾರು ನಮಗಿಲ್ಲ|
ಜಟೆಯಲ್ಲಿ ಕಟ್ಟಿದ ನದಿಯ, ತಲೆಯಲ್ಲಿ ಮುಡಿದ ಶಶಿಯ ||
ಕಣ್ಣೊಳಗೆ ಉರಿವ ಬೆಂಕಿಯ |
ಮುಚ್ಚಿಟ್ಟುಕೊಂಡು, ನಗುತಾ ನಮ್ಮ ಶಿವ ಕಂಡೆಯ ? ಅಮ್ಮಮ್ಮಾ ಅವನ ಮಹಿಮೆ ನೀನು ಬಲ್ಲೆಯ ? ಶಂಬೋ ಶಂಕರ ಮಹಾದೇವ, ಶಿವ ಶಂಭೋ ಶಂಕರ ಮಹದೇವ |
ಪಟ್ಟೆಪೀತಾಂಬರವಿಲ್ಲ, ಬಂಗಾರದ ಒಡವೆಗಳಿಲ್ಲ||
ಬೂದಿಯನ್ನು ಬಳಿದು ಮೈಗೆಲ್ಲ |
ವಿಷ ಸರ್ಪ ಹಿಡಿದು ಕೊರಳಲ್ಲಿ ಸುತ್ತಿಕೊಂಡನು |
ಹಿಮಗಿರಿ ಹಾಯಾಗಿ ಅಲ್ಲೇ ಕುಳಿತನು || ಜಡೆ ||
ವಿಷಯವನ್ನೇ ಕುಡಿದು ಒಮ್ಮೆ, ಯಮನನ್ನೇ ತಡೆದ ಒಮ್ಮೆ ||
ಭಕ್ತಿಗೆ ತಾ ಮೆಚ್ಚಿ ಮತ್ತೊಮ್ಮೆ|
ಆತ್ಮಲಿಂಗವ ಭಕ್ತಿಗೆ ಕೊಟ್ಟ ದೇವನೂ |
ಬೇಕೂ ಎನ್ನು, ಕೈಲಾಸವನ್ನು ಕೊಡುವನು |
ಶಂಬೋ ಶಂಕರ ಮಹಾದೇವ, ಶಿವ ಶಂಭೋ ಶಂಕರ ಮಹಾದೇವ |
ಹೂವನ್ನು ಬಿಡೋದಿಲ್ಲ ಹಣ್ಣನ್ನು ಕೇಳೋದಿಲ್ಲ||
ಹೊಗಳಿಕೆ ಎಂದು ಬಯಸಲ್ಲ, ನೀಲಕಂಠ |
ಹೂವಂಥಾ ಹೃದಯ ಹುಡುಕುವ |
ಹಣ್ಣಾದ ಮನವ ಕಂಡಾಗ ಅಲ್ಲಿ ನಿಲ್ಲುವ |
ಶ್ರೀಕಂಠನ ಆನಂದವನ್ನು ನೀಡುವ || ಜಟೆ ||