ಮನೆ ದೇವರ ನಾಮ (ಅಂಬೆ) ಬಂದಳೇ ಭಾಗ್ಯಲಕ್ಷ್ಮಿ

(ಅಂಬೆ) ಬಂದಳೇ ಭಾಗ್ಯಲಕ್ಷ್ಮಿ

0

ಬಂದಳೇ ಭಾಗ್ಯಲಕ್ಷ್ಮಿ ನಮ್ಮ ಮನೆಗಿಂದು |

ರಂಗನರ್ಧಾಂಗಿ ಮಂಗಳಾಂಗಿ ಶ್ರೀದೇವಿ ||

ಹಾಕಿದ ಕಾಲ್ಗೆಜ್ಜೆ ಸದ್ದು ಮಾಡುತ್ತಾ| 

ಕಾಲುಂದುಗೆಯ ಖಣ,ಖಣ ಎನ್ನುತ,| 

ಕರಣದಿಂದ ಧನ,ಕನಕ ಧಾರೆಯರಿಯುತ ||

ಬಂದಳೇ ಭಾಗ್ಯಲಕ್ಷ್ಮಿ ನಮ್ಮ ಮನೆಗಿಂದು.

ಉಟ್ಟ ಪೀತಾಂಬರದ ನೀರಿಗೆಗಳಲಿಯುತ |

ತೊಟ್ಟ ಕುಂಚವ ಜಗಿಮಗಿಸುತ |

ಮುದ್ದು ಮುಖದಲ್ಲಿ ಮಂದಹಾಸ ಬೀರುತ ||

ಬಂದಳೇ ಭಾಗ್ಯಲಕ್ಷ್ಮಿ ನಮ್ಮ ಮನೆಗಿಂದು.

ಕ್ಷೀರಸಾಗರದ ಜನಿಸಿದ ಚಂದ್ರ ಸಹೋದರಿ,|

ಮುತ್ತು ರತ್ನಗಳ ಹೊತ್ತು ತಂದ ಮನೋಹರಿ |

ನಗು ನಗುತ ಬಂದು ವರವನೀಡಿದ ಗುಣಸಾಗರಿ ||

ಬಂದಳೇ ಭಾಗ್ಯಲಕ್ಷ್ಮಿ ನಮ್ಮ ಮನೆಗಿಂದು,

ಕೊಲ್ಲಾಪುರದಿಂದ ಭಕ್ತ ಜನರ ಉದ್ದರಿಸಲೆಂದು |

ಬೇಡಿದ ವರವ ಕೊಡುವೆ ಎನುತ |

ವರಜಹ್ನವಿ ವಿಠ್ಠಲೇಶನ ಮೋಹದ ರಾಣಿ ||

ಬಂದಳೇ ಭಾಗ್ಯಲಕ್ಷ್ಮಿ ನಮ್ಮ ಮನೆಗಿಂದು.

ಹಿಂದಿನ ಲೇಖನರಾಜಕೀಯ ನಿವೃತ್ತಿ ಘೋಷಿಸಿದ ಬಿಜೆಪಿ ಸಂಸದ ಬಿ.ಎನ್ ಬಚ್ಚೇಗೌಡ
ಮುಂದಿನ ಲೇಖನಮನೆಮದ್ದು: ಶುಂಠಿ ಚೂರ್ಣ